/newsfirstlive-kannada/media/post_attachments/wp-content/uploads/2024/08/WAYANAU_FLIGHT.jpg)
ವಯನಾಡಿನ ರಣಚಂಡಿ ಮಳೆಗೆ ಇಡೀ ಊರಿಗೆ ಊರೇ ಸ್ಮಶಾನವಾಗಿದೆ. ನೂರಾರು ಮನೆಗಳು ಗುಡ್ಡದ ಮಣ್ಣಿನಲ್ಲಿ ಹೂತು ಹೋಗಿದ್ದು ಒಳಗೆ ಜನರಿದ್ದಾರಾ ಎಂದು ಕಾರ್ಯಾಚರಣೆ ಮಾಡಲಾಗುತ್ತಿದೆ. ಇಷ್ಟು ದಿನ ಹಸಿರಿನಿಂದ ಕಂಗೊಳಿಸುತ್ತಿದ್ದ ಬೆಟ್ಟ ಧಾರಾಕಾರ ಮಳೆಯಿಂದ ಕುಸಿದು ಈಗ ರಕ್ತದಂತೆ ಕೆಂಪಾಗಿ ಹರಡಿಕೊಂಡಿದೆ. ಇದುವರೆಗೆ ಒಟ್ಟು 308 ಜನರು ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾಗೆ ಖಡಕ್​ ವಾರ್ನಿಂಗ್​ ಕೊಟ್ಟ ವಿರಾಟ್, ರೋಹಿತ್.. ಟಾರ್ಗೆಟ್ ಏನು ಗೊತ್ತಾ?
ಮುಂಡಕೈ, ಚೂರಾಲ್​ ಮಾಲ್​ ಹಾಗೂ ಮೆಪ್ಪಾಡಿ ಏರಿಯಾದಲ್ಲಿ ಜುಲೈ 30 ರಂದು ಧಾರಾಕಾರ ಮಳೆಯಿಂದ ಭೀಕರ ಭೂಕುಸಿತ ಸಂಭವಿಸಿತ್ತು. ಅಂದಿನಿಂದ ಇದುವರೆಗೂ ಘಟನೆಯಲ್ಲಿ ಒಟ್ಟು 308 ಜನರು ಸಾವನ್ನಪ್ಪಿದ್ದಾರೆ. ಭೂಕುಸಿತದಿಂದ ಹಾನಿಗೊಳಗಾದ ಮೆಪ್ಪಾಡಿ, ಚೂರಲ್ಮಾಲ್​ ಮತ್ತು ಮುಂಡಕ್ಕೈನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿವೆ. ಇನ್ನು ಮೃತದೇಹಗಳು, ದೇಹದ ಭಾಗಗಳು ಸಿಗುತ್ತಲೇ ಇವೆ. ಈವರೆಗೆ 195 ಮೃತದೇಹಗಳು ಮಣ್ಣಿನಲ್ಲಿ ಪತ್ತೆಯಾಗಿದ್ದು ಹಾಗೂ 113 ಮನುಷ್ಯ ದೇಹದ ಭಾಗಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಇದನ್ನೂ ಓದಿ: ವಯನಾಡು ದುರಂತ: ಜೀವ ಪಣಕ್ಕಿಟ್ಟು ಪ್ರಾಣ ಉಳಿಸಿದ ವೃದ್ಧ; ಹಸೂಗೂಸುಗಳಿಗೆ ಹಾಲುಣಿಸಿದ ತಾಯಿ!
/newsfirstlive-kannada/media/post_attachments/wp-content/uploads/2024/08/WAYANAU_FLIGHT_1.jpg)
ಭಾರತೀಯ ಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ನಾಗರಿಕ ಆಡಳಿತದಿಂದ ರಕ್ಷಣಾ ಕಾರ್ಯಾಚರಣೆ ಮತ್ತು ಪರಿಹಾರ ಕಾರ್ಯಾಚರಣೆಗಳು ಅನೇಕ ಸ್ಥಳಗಳಲ್ಲಿ ನಡೆಯುತ್ತಿವೆ. ಮಣ್ಣಿನಲ್ಲಿ ಸಿಕ್ಕಿಬಿದ್ದ ಜನರನ್ನು ರಕ್ಷಣೆ ಮಾಡಿ ತ್ವರಿತವಾಗಿ ಸ್ಥಳಾಂತರಿಸಲಾಗ್ತಿದೆ. ದುರಂತದಲ್ಲಿ ಗಾಯಗೊಂಡವರಿಗೆ ವೈದ್ಯರು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us