/newsfirstlive-kannada/media/post_attachments/wp-content/uploads/2024/08/WAYANADU_GOLD_1.jpg)
ಭಯಾನಕ ಗುಡ್ಡ ಕುಸಿತದಿಂದ ಸರ್ವನಾಶವಾಗಿರುವ ವಯನಾಡಿನ 4 ಗ್ರಾಮಗಳಲ್ಲಿ ಕಳೆದ 6 ದಿನದಿಂದ ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ. ವಯನಾಡು ಜನರ ಜೀವನಾಡಿ ಎನಿಸಿದ್ದ ಚಾಲಿಯಾರ್ ನದಿಯಲ್ಲಿ ಮೃತದೇಹಗಳು ತೇಲಿ ಬರುತ್ತಿವೆ. ರಕ್ಷಣಾ ಕಾರ್ಯಾಚರಣೆ ವೇಳೆ ಸ್ವಯಂ ಸೇವಕರಿಗೆ ಮಾಂಗಲ್ಯದ ಸರಗಳು ಸೇರಿದಂತೆ ಭಾರೀ ಮೌಲ್ಯದ ಚಿನ್ನದ ಒಡೆವೆಗಳು ಸಿಕ್ಕಿವೆ.
ಇದನ್ನೂ ಓದಿ: BJP ಅವಧಿಯ ಭ್ರಷ್ಟಾಚಾರ, ಹಗರಣಗಳ ಟಾರ್ಗೆಟ್ ಮಾಡಿದ ‘ಕೈ’ ಹೈಕಮಾಂಡ್; ಮಾಜಿ ಸಿಎಂಗೆ ಸಂಕಷ್ಟ?
ವಯನಾಡಿನ ಮುಂಡಕೈ ಗ್ರಾಮದ ಸುತ್ತಮುತ್ತ ಸ್ವಯಂ ಸೇವಕ ತಂಡದವರು ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಅವರಿಗೆ ಲಕ್ಷಾಂತರ ರೂಪಾಯಿ ಬೆಳೆಬಾಳುವ ಚಿನ್ನಾಭರಣಗಳು ಸಿಕ್ಕಿವೆ. ಕೆಸರು, ಬಂಡೆಗಳ ನಡುವೆ ಮೃತದೇಹಗಳು ಸಿಕ್ಕಿಕೊಂಡಿರಬಹುದೆಂದು ಹುಡುಕುವಾಗ ಚಿನ್ನದ ಚೈನ್​ಗಳು, ಮಾಂಗಲ್ಯದ ಸರಗಳು, ಓಲೆ, ಉಂಗುರುಗಳು, ಬಳೆಗಳು ಕಾಣಿಸಿಕೊಂಡಿವೆ. ತಕ್ಷಣ ಸ್ವಯಂಸೇವಕರ ಟೀಮ್ ಅವುಗಳನ್ನು ತೆಗೆದುಕೊಂಡು ನೇರ ಪೊಲೀಸರಿಗೆ ಒಪ್ಪಿಸಿ, ಪ್ರಾಮಾಣಿಕತೆ ಮೆರೆದಿದ್ದಾರೆ.
ಇದನ್ನೂ ಓದಿ: ಕಾಮುಕನ ಅಟ್ಟಹಾಸ, ತಬ್ಬಿಕೊಂಡು ಬಲವಂತ ಚುಂಬನ.. ಮಹಿಳೆಯರಿಗೆ ಸಿಲಿಕಾನ್​ ಸಿಟಿ ಎಷ್ಟು ಸೇಫ್?
ಗುಡ್ಡ ಕುಸಿತದಿಂದ ವಯನಾಡಿನ ನಾಲ್ಕು ಗ್ರಾಮಗಳು ಸರ್ವನಾಶವಾಗಿವೆ. ಕಳೆದ 6 ದಿನಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದ್ದು ಜನರ ಜೀವನಾಡಿ ಎನಿಸಿರುವ ಚಾಲಿಯಾರ್ ನದಿಯಲ್ಲಿ ಇನ್ನೂ ಮೃತದೇಹಗಳು ತೇಲಿಬರುತ್ತಿವೆ. ನದಿಯು ಈಗ ದುಃಖದ ಸಾಗರವಾಗಿ ಮಾರ್ಪಟ್ಟಿದೆ. 6ನೇ ದಿನದ ಕಾರ್ಯಾಚರಣೆ ವೇಳೆ ಚಾಲಿಯಾರ್​ ನದಿಯಲ್ಲಿ ಮತ್ತೆ 18 ಶವಗಳು ಸಿಕ್ಕಿದ್ದು ಸಾವಿನ ಸಂಖ್ಯೆ 369ಕ್ಕೆ ಏರಿಕೆ ಆಗಿದೆ. ಮುಂಡಕೈ ಪ್ರದೇಶದಲ್ಲಿ ಇನ್ನೂ 64 ಜನರು ನಾಪತ್ತೆ ಆಗಿದ್ದಾರೆ. ಸದ್ಯ ನಾಪತ್ತೆ ಆದವರಿಗಾಗಿ ಶೋಧ ಕಾರ್ಯ ನಡೆಯುತ್ತಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ