Advertisment

Wayanad: ಮೊದಲ ಬಾರಿ ಚುನಾವಣಾ ಅಖಾಡಕ್ಕೆ ಎಂಟ್ರಿಯಾದ ಪ್ರಿಯಾಂಕಾ ಗಾಂಧಿ; ಏನಿದರ ಪ್ಲಾನ್?

author-image
admin
Updated On
ಕಾಂಗ್ರೆಸ್​ ನಾಯಕರಿಗೆ HDK ಬಿಗ್ ಟಾರ್ಗೆಟ್.. ರಾಹುಲ್​ ಗಾಂಧಿ ಕ್ಯಾಂಪೇನ್​ನಲ್ಲಿ 1 ಲಕ್ಷ ಜನ ಸೇರೋ ನಿರೀಕ್ಷೆ!
Advertisment
  • ಬರೋಬ್ಬರಿ 36 ಲಕ್ಷ 4 ಸಾವಿರದ 422 ಮತಗಳ ಅಂತರದಿಂದ ಗೆಲುವು
  • ವಯನಾಡ್‌ನಲ್ಲಿ ಕಾಂಗ್ರೆಸ್ ಫ್ಯಾಕ್ಟರ್ ವರ್ಕ್​ ಆಗುವ ಕಾರಣ ಸ್ಪರ್ಧೆ
  • ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಪ್ರಿಯಾಂಕಾ ಗಾಂಧಿ ಎಂಟ್ರಿ

ನವದೆಹಲಿ: ಕೊನೆಗೂ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಕಾಲಿಟ್ಟಿದ್ದಾರೆ. ಅಣ್ಣ ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ತೆರವಾದ ವಯನಾಡ್‌ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ವಯನಾಡ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರು ಘೋಷಣೆಯಾಗಿದೆ.

Advertisment

ಕೇಂದ್ರ ಚುನಾವಣಾ ಆಯೋಗ ವಯನಾಡ್ ಉಪಚುನಾವಣೆಗೆ ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಅವರ ಹೆಸರನ್ನು ಕಾಂಗ್ರೆಸ್ ಘೋಷಣೆ ಮಾಡಿದೆ. ಈ ಬಗ್ಗೆ ಎಐಸಿಸಿ ಜನರಲ್ ಸೆಕ್ರೆಟರಿ ವೇಣುಗೋಪಾಲ್ ಅವರು ಅಧಿಕೃತ ಪ್ರಕಟಣೆ ನೀಡಿದ್ದಾರೆ.

publive-image

ಕಳೆದ ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಹಾಗೂ ರಾಯ್​ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಅವರು 2 ಕಡೆ ಗೆಲುವು ಸಾಧಿಸಿದ್ದರು. ಎರಡು ಕ್ಷೇತ್ರ ಗೆದ್ದ ರಾಹುಲ್ ಗಾಂಧಿ ರಾಯ್​ಬರೇಲಿ ಕ್ಷೇತ್ರವನ್ನ ಉಳಿಸಿಕೊಂಡು ವಯನಾಡ್‌ಗೆ ರಾಜೀನಾಮೆ ನೀಡಿದ್ದರು. ಅಣ್ಣ ರಾಹುಲ್ ಗಾಂಧಿ ಸ್ಥಾನಕ್ಕೆ ತಂಗಿ ಪ್ರಿಯಾಂಕಾ ಗಾಂಧಿ ಎಂಟ್ರಿ ಆಗಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ, ಜಾರ್ಖಂಡ್, ವಯನಾಡು ಚುನಾವಣೆಗೆ ದಿನಾಂಕ ಘೋಷಣೆ; ಮತ್ತೊಂದು ಅಗ್ನಿಪರೀಕ್ಷೆಯ ಪಟ್ಟಿ ಇಲ್ಲಿದೆ! 

Advertisment

ಪ್ರಿಯಾಂಕಾ ಗಾಂಧಿ ಅವರ ಸ್ಪರ್ಧೆಗೆ ಹಲವು ವರ್ಷಗಳಿಂದ ಒತ್ತಾಯ ಕೇಳಿ ಬಂದಿತ್ತು. ಆದರೆ ಅದಕ್ಕೆ ಸರಿಯಾದ ಸಮಯ ಕೂಡಿ ಬಂದಿರಲಿಲ್ಲ. ಇದೀಗ ವಯನಾಡ್‌ನಿಂದ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಣಕ್ಕೆ ಇಳಿದಿದ್ದಾರೆ. ರಾಹುಲ್‌ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರಕ್ಕೆ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಿದ್ದಾರೆ.

publive-image

2023ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ವಯನಾಡ್‌ನಲ್ಲಿ ಭಾರೀ ಅಂತರದಲ್ಲಿ ಜಯಗಳಿಸಿದ್ದರು. ಎದುರಾಳಿ ಸಿಪಿಐ, ಬಿಜೆಪಿ ಅಭ್ಯರ್ಥಿಗಳ ಜಿದ್ದಾಜಿದ್ದಿನ ಮಧ್ಯೆಯು ರಾಹುಲ್ ಗಾಂಧಿ ಅವರು ಬರೋಬ್ಬರಿ 36 ಲಕ್ಷ 4 ಸಾವಿರದ 422 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಮುಸ್ಲಿಂ ಸಮುದಾಯದ ಮತಗಳು ವಯನಾಡ್ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ. ಇದೇ ರಾಜಕೀಯದ ಫ್ಯಾಕ್ಟರ್ ವರ್ಕ್​ ಆಗುವ ಕಾರಣ ಪ್ರಿಯಾಂಕ ಗಾಂಧಿ ಅವರನ್ನು ಕಾಂಗ್ರೆಸ್ ಕಣಕ್ಕೆ ಇಳಿಸಿದೆ. ವಯನಾಡ್ ಉಪಚುನಾವಣೆಗೆ ನವೆಂಬರ್ 13ಕ್ಕೆ ಮತದಾನ ನಡೆಯುತ್ತಿದ್ದು ನವೆಂಬರ್ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment