Advertisment

ಎದುರಾಳಿಗಳಿಗೆ ಫುಲ್ ಶಾಕ್ ಕೊಟ್ಟ ರಾಹುಲ್ ಗಾಂಧಿ.. ವಯನಾಡು, ರಾಯ್​ಬರೇಲಿಯ ಕೌಂಟಿಂಗ್ ಏನ್ ಹೇಳುತ್ತೆ?

author-image
Bheemappa
Updated On
ಎದುರಾಳಿಗಳಿಗೆ ಫುಲ್ ಶಾಕ್ ಕೊಟ್ಟ ರಾಹುಲ್ ಗಾಂಧಿ.. ವಯನಾಡು, ರಾಯ್​ಬರೇಲಿಯ ಕೌಂಟಿಂಗ್ ಏನ್ ಹೇಳುತ್ತೆ?
Advertisment
  • ಸೋನಿಯಾ ಗಾಂಧಿ ಈ ಸಲ ತಮ್ಮ ಕ್ಷೇತ್ರವನ್ನ ಪುತ್ರನಿಗೆ ಬಿಟ್ಟು ಕೊಟ್ಟಿದ್ರು
  • ದೇಶದ ಎರಡು ಕ್ಷೇತ್ರದಿಂದಲೂ ಸ್ಪರ್ಧೆ ಮಾಡಿರುವ ರಾಹುಲ್ ಗಾಂಧಿ
  • 2 ಕ್ಷೇತ್ರದಲ್ಲೂ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮುನ್ನಡೆಯಲ್ಲಿದ್ದಾರಾ?

ನವದೆಹಲಿ: ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಕೆಲವು ಕಡೆ ಕಾಂಗ್ರೆಸ್​ನವರು ಮುನ್ನಡೆ ಕಾಯ್ದುಕೊಂಡಿದ್ರೆ, ಇನ್ನು ಕೆಲವು ಕಡೆ ಬಿಜೆಪಿ ಅಭ್ಯರ್ಥಿಗಳು ಮುನ್ನಡೆಯಲ್ಲಿ ಇದ್ದಾರೆ. ಇದರ ಮಧ್ಯೆ ಎರಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಯವರು ಎರಡು ಕಡೆಯೂ ಮುನ್ನಡೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Advertisment

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಯವರು ಈ ಬಾರಿ ಕೇರಳದ ವಯನಾಡು ಹಾಗೂ ಉತ್ತರ ಪ್ರದೇಶದ ರಾಯ್​ಬರೇಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಈಗಾಗಲೇ ಈ ಎರಡು ಕ್ಷೇತ್ರದ ಮತ ಎಣಿಕೆ ನಡೆಯುತ್ತಿದ್ದು ರಾಯ್​ಬರೇಲಿ ಲೋಕಸಭಾ ಕ್ಷೇತ್ರದಲ್ಲಿ 2,126 ವೋಟ್​ಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ರಾಯ್​ಬರೇಲಿಯಲ್ಲಿ 20 ವರ್ಷಗಳಿಂದ ಸೋನಿಯಾ ಗಾಂಧಿಯವರು ಸ್ಪರ್ಧೆ ಮಾಡುತ್ತಿದ್ದರು. ಆದರೆ ಈ ಬಾರಿ ತಮ್ಮ ಕ್ಷೇತ್ರವನ್ನು ಪುತ್ರ ರಾಹುಲ್ ಗಾಂಧಿಯವರಿಗೆ ಬಿಟ್ಟು ಕೊಟ್ಟಿದ್ದರು. ಹೀಗಾಗಿ ಸ್ಪರ್ಧೆ ಮಾಡಿದ್ದ ರಾಹುಲ್ ಗಾಂಧಿಯವರು ಸದ್ಯದ ಮತ ಎಣಿಕೆಯಲ್ಲಿ ಮುನ್ನಡೆಯಲ್ಲಿದ್ದಾರೆ. ಅದೇ ರೀತಿ ಕೇರಳದ ವಯನಾಡು ಕ್ಷೇತ್ರದಲ್ಲೂ ರಾಹುಲ್ ಗಾಂಧಿ ಮುನ್ನಡೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಚಿಕ್ಕೋಡಿಯಲ್ಲಿ ಬಿಜೆಪಿಗೆ ಬಿಗ್ ಶಾಕ್​.. ಮುನ್ನಡೆ ಕಾಯ್ದುಕೊಂಡ ಪ್ರಿಯಾಂಕಾ ಜಾರಕಿಹೊಳಿ

ಭಾರತ್ ಜೋಡೋ ಯಾತ್ರೆ ಹಾಗೂ ಭಾರತ್ ಜೋಡೋ ನ್ಯಾಯ್ ಯಾತ್ರೆ ಮೂಲಕ ರಾಹುಲ್ ಗಾಂಧಿಯವರು ಪಾದಯಾತ್ರೆ ಕೈಗೊಂಡಿದ್ದರು. ಇದಕ್ಕೆ ದೇಶದೆಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಅಲ್ಲದೇ ಯಾತ್ರೆಗೆ ಸಾಕಷ್ಟು ಜನರು ಸಪೋರ್ಟ್ ಮಾಡಿದ್ದರು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment