ಕೇರಳದಲ್ಲಿ ಮಹಾ ದುರಂತ.. 250 ಕುಟುಂಬಗಳು ಕಣ್ಮರೆ ಶಂಕೆ.. ಸಾವಿನ ದವಡೆಯಲ್ಲಿ ಸಿಕ್ಕಿರುವ ಜನರ ಕತೆ ಭಯಾನಕ..

author-image
AS Harshith
Updated On
ಸಾವಿನ ದವಡೆಯಲ್ಲಿ 300 ಜನ; ಮುಂಡಕೈನಲ್ಲಿ ಸಂಜೆ 5 ಗಂಟೆಗೇ ಕತ್ತಲು ಆವರಿಸುತ್ತೆ.. ಆತಂಕ ವ್ಯಕ್ತಪಡಿಸಿದ ಶಾಸಕ
Advertisment
  • ಮಳೆಯಿಂದಾಗಿ 4 ಬಾರಿ ಭೂಕುಸಿತ.. ಸಾವಿನ ಸಂಖ್ಯೆ 50ಕ್ಕೆ ಏರಿಕೆ
  • ನದಿಯಲ್ಲಿ ಹರಿದು ಬರುತ್ತಿವೆ ಮೃತ ದೇಹಗಳು.. ಸಾವಿನ ದವಡೆಯಲ್ಲಿ ಜನರು
  • ಚುರಲ್ಮಲಾ ಪ್ರದೇಶದಲ್ಲಿ ಸುಮಾರು 250 ಕುಟುಂಬಗಳು ಕಣ್ಮರೆ ಎಂಬ ಮಾಹಿತಿ

ವಯನಾಡಿನ ಮುಂಡಕ್ಕೈ ಮತ್ತು ಚುರಲ್ಮಲಾ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಭಯಾನಕ ಭೂಕುಸಿತ ಸಂಭವಿಸಿದೆ. ಸದ್ಯಕ್ಕೆ ಸುಮಾರು 47 ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. 150ಕ್ಕೂ ಹೆಚ್ಚು ಜನರು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ ಎನ್ನಲಾಗುತ್ತಿದೆ, 15ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ.

ಚುರಲ್ಮಲಾ ಪ್ರದೇಶದಲ್ಲಿ ಸುಮಾರು 250 ಕುಟುಂಬಗಳು ಇದ್ದವು. ರಾತ್ರಿ ಎರಡು ಗಂಟೆ ಸುರಿದ ಮಳೆಯಿಂದಾಗಿ ಈ ಭೂಕುಸಿತ ಸಂಭವಿಸಿದೆ.

publive-image

ಮುಂಡಕ್ಕೈ (Mundakkai), ಚೂರಲ್ಮಲಾ (Chooralmala), ಅಟ್ಟಮಾಲಾ ( Attamala) ಮತ್ತು ನೂಲ್ಪುಝಾದಲ್ಲಿ (Noolpuzha) ಒಟ್ಟು 4 ಬಾರಿ ಭೂಕುಸಿತವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಏರಿಯಾಗುತ್ತಿದೆ.

ಹವಾಮಾನ ಎಚ್ಚರಿಕೆ

ಹವಾಮಾನ ಇಲಾಖೆ ಕೇರಳದಲ್ಲೂ ಮಳೆಯ ಎಚ್ಚರಿಕೆ ನೀಡಿದೆ. ಬಹುತೇಕ ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ. ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಬಹುದು ಎಂದಿದೆ. ಮುಂದಿನ ಮೂರು ಗಂಟೆಗಳಲ್ಲಿ ಕೇರಳದಲ್ಲಿ ಅಲ್ಲಲ್ಲಿ ಗುಡುಗು, ಸಿಡಿಲು, ಸಿಡಿಲು ಹಾಗೂ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ. ವಯನಾಡಿನಲ್ಲೂ ಮಳೆಯಾಗುವ ಮುನ್ಸೂಚನೆ ಇದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.

publive-image

150 ಮಂದಿ ಸಿಲುಕಿಕೊಂಡಿದ್ದಾರೆ

ಮುಂಡಕೈ ಮದರಸಾ ಬಳಿ 150 ಮಂದಿ ಸಿಲುಕಿಕೊಂಡಿದ್ದಾರೆ. ಮುಂಡಕೈ ಮದರಸಾ ಬಳಿ ಸುಮಾರು 50 ಮನೆಗಳು ಮಣ್ಣಿನಡಿ ಸಿಕ್ಕಿಹಾಕಿಕೊಂಡಿದೆ. ಇದೂವರೆಗೂ ಅಲ್ಲಿಂದ ಕೇವಲ 3 ಜನರನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದೆ ಎಂದು ತಿಳಿದು ಬಂದಿದೆ. ಇನ್ನು, ಸ್ಥಳೀಯರ ಕೊಟ್ಟ ಮಾಹಿತಿ ಪ್ರಕಾರ, ಭಾರೀ ಶಬ್ದದೊಂದಿಗೆ ಭೂಕುಸಿತ ಸಂಭವಿಸಿದೆ ಎಂದು ಹೇಳುತ್ತಿದ್ದಾರೆ.

publive-image

ವಾಪಸ್​ ಹೋದ ಹೆಲಿಕಾಪ್ಟರ್​

ರಕ್ಷಣೆಗೆ ಬಂದಿದ್ದ 2 ಹೆಲಿಕಾಪ್ಟರ್ ವಾಪಾಸ್ ಹೋಗಿದೆ. ಕಾರಣ ಲ್ಯಾಂಡ್​​ ಮಾಡಲು ಸರಿಯಾದ ಜಾಗವಿಲ್ಲದ ಕಾರಣ ಹೆಲಿಕಾಪ್ಟರ್​ ವಾಪಾಸ್​ ತೆರಳಿದೆ. ಅತ್ತ ರಸ್ತೆ ಸಂಪರ್ಕ ಕೂಡ ಕಡಿತಗೊಂಡಿದೆ. ಚಾಲಿಯಾರ್​ ಎಂಬ ನದಿಗೆ ಅಡ್ಡಲಾಗಿದ್ದ ಸೇತುವೆ ನೆಲಸಮವಾಗಿದ್ದು, ಪರಿಣಾಮ ಸಂಪರ್ಕ ಸಾಧಿಸುವುದು ಕಷ್ಟಕರವಾಗಿದೆ.

publive-image

ನದಿಯಲ್ಲಿ ಮೃತದೇಹ

ಅಲ್ಲಿನ ಪ್ರದೇಶದಲ್ಲಿ ಹರಿಯುವ ಚಾಲಿಯಾರ್​ ನದಿಯ ರಭಸ ಜೋರಾಗಿದೆ. ನೀರಿನ ರಭಸಕ್ಕೆ ಮರ, ಮನೆಗಖು ಕೊಚ್ಚಿ ಹೋಗಿವೆ. ನದಿಗಳಲ್ಲಿ ಮೃತದೇಹಗಳು ಬರುತ್ತಿವೆ. ಮೂಲಗಳ ಪ್ರಕಾರ ನದಿಯಲ್ಲಿ 9 ಮೃತದೇಹಗಳು ಸಿಕ್ಕಿವೆ. ಈಗಾಗಲೇ ಕೆಲವು ಮೃತದೇಹಗಳನ್ನು NDRF ತಂಡ ರಕ್ಷಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment