/newsfirstlive-kannada/media/post_attachments/wp-content/uploads/2024/08/KERALA_LANDSLIDE_1.jpg)
ವಯನಾಡಿನ ಭೂಕುಸಿತದ ಭೀಕರತೆ ಎಷ್ಟು ಹೇಳಿದರೂ ಮುಗಿಯದು ಎಂಬುವಂತೆ ಆಗಿದೆ. ಇನ್ನು ಸಾಕಷ್ಟು ಜನರು ಅರಣ್ಯದಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಏಕೆಂದರೆ ಅಟ್ಟಮಲ ಕಾಡಿನಲ್ಲಿ ಜೀವನ ನಡೆಸುತ್ತಿದ್ದ ಬುಡುಕಟ್ಟು ಕುಟುಂಬವೊಂದನ್ನು ಕೇರಳದ ಅರಣ್ಯಾಧಿಕಾರಿಗಳು ಸಾಹಸಮಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
ಭೂಕುಸಿತವಾಗಿದೆ ಎಂಬುವ ಸುದ್ದಿ ತಿಳಿಯುತ್ತಿದ್ದಂತೆ ವಯನಾಡಿನಲ್ಲಿರುವ ಅರಣ್ಯಾಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಬುಡುಕಟ್ಟು ಸಮುದಾಯದ ಮಹಿಳೆ ಹಾಗೂ 4 ವರ್ಷದ ಮಗುವನ್ನು ನೋಡಿ ಅವರನ್ನು ರಕ್ಷಣೆ ಮಾಡುತ್ತಾರೆ. ಈ ವೇಳೆ ಅವರನ್ನು ವಿಚಾರಿಸಿದಾಗ ಅವರು ಹಸಿವಿನಿಂದ ಅನ್ನ, ಆಹಾರಕ್ಕಾಗಿ ಹುಡುಕಾಟ ನಡೆಸಿದ್ದೇವೆ ಎಂದು ಹೇಳಿ ಹೋಗಿದ್ದರು. ಆದರೆ ಅವರು ಮತ್ತೆ ಅರಣ್ಯದ ಒಳಗೆ ಹೋಗಲು ಸುತ್ತಾಡುತ್ತಿರುವಾಗ ಮತ್ತೆ ಅಧಿಕಾರಿಗಳ ಕಣ್ಣೀಗೆ ಬಿದ್ದಿದಾರೆ. ಹೀಗಾಗಿ ಅವರನ್ನು ಅರಣ್ಯಾಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ನನ್ನ ಹೆಸರು ಶಾಂತ, ಇವನು 4 ವರ್ಷದ ನನ್ನ ಮಗ. ಎರಟ್ಟುಕುಂಡದಲ್ಲಿ ವಾಸವಿದ್ದು ದಾರಾಕಾರ ಮಳೆಯಿಂದ ಭೂಮಿಕುಸಿದು ಮನೆ ಎಲ್ಲ ನಾಶವಾಗಿದೆ. ಹಸಿವಿನಿಂದ ಆಹಾರಕ್ಕಾಗಿ ಅಲೆದಾಡುತ್ತಿದ್ದೇವೆ. ಭೂಕುಸಿತದಿಂದ ನನ್ನ ಗಂಡ ಹಾಗೂ ಇನ್ನೂ ಮೂವರು ಮಕ್ಕಳು ಅರಣ್ಯದ ಮೇಲಿರುವ ಬೆಟ್ಟದ ಮೇಲಿನ ಗುಹೆಯೊಂದರಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿದ್ದಾಳೆ.
ಇದನ್ನೂ ಓದಿ: ಇನ್ನು ಬದುಕಿದವರು ಯಾರು ಸಿಗಲ್ಲ.. ನಿಮ್ಮವರ ಆಸೆ ಬಿಟ್ಟು ಬಿಡಿ; ಕೇರಳ ಸಿಎಂ ಶಾಕಿಂಗ್ ಹೇಳಿಕೆ
/newsfirstlive-kannada/media/post_attachments/wp-content/uploads/2024/08/KERALA_LANDSLIDE.jpg)
ಇದು ತಿಳಿದ ತಕ್ಷಣ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು ಅರಣ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು 8 ಗಂಟೆ ಸಮಯ ತೆಗೆದುಕೊಂಡರು. 7 ಕಿಲೋ ಮೀಟರ್​ ದೂರದ ಗುಹೆಯಲ್ಲಿದ್ದ ತಂದೆ ಮಕ್ಕಳನ್ನು ರಕ್ಷಣೆ ಮಾಡಲು ಪ್ರಾಣದ ಹಂಗು ತೊರೆದು ಹಗ್ಗದ ಸಹಾಯದಿಂದ ಸಾಹಸ ಮಾಡಿದ್ದಾರೆ. ಮಳೆ, ದಟ್ಟ ಕಾಡು, ಜಾರು ಬಂಡೆಗಳು, ಕಾಲಿಟ್ಟಲ್ಲಿ ಎಲ್ಲ ಕೆಸರು. ಒಮ್ಮೆ ಕಾಲು ಜಾರಿ ಬಿದ್ದರೇ ಮೃತದೇಹನೂ ಸಿಗುವುದಿಲ್ಲ ಅಂತಹ ಪ್ರದೇಶದಲ್ಲಿದ್ದ ಬುಡಕಟ್ಟು ಕುಟುಂಬವನ್ನು ಹೇಗೆ ಗುರುತಿಸುವುದು ಎಂಬುದು ಅರಣ್ಯಾಧಿಕಾರಿಗಳಿಗೆ ದೊಡ್ಡ ಸವಾಲಿನ ಕೆಲಸವಾಗಿತ್ತು.
ಇದನ್ನೂ ಓದಿ: ವಯನಾಡು ಭೂಕುಸಿತ; ಸಾವನ್ನಪ್ಪಿದವರು 100, 200 ಜನ ಅಲ್ಲವೇ ಅಲ್ಲ.. ಬೆಚ್ಚಿ ಬೀಳಿಸುತ್ತೆ ಸಾವಿನ ಸಂಖ್ಯೆ!
ಬೆಟ್ಟದ ಮೇಲೆ ಹೋದರು ಅವರು ಎಲ್ಲಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಆದರೆ ದೇವರ ಇಚ್ಚೇ ಎಂಬಂತೆ ಅದೇ ಸಮಯಕ್ಕೆ ಗುಹೆಯಲ್ಲಿದ್ದ ತಂದೆ-ಮಕ್ಕಳು ಬೆಂಕಿ ಹಚ್ಚಿದ್ದರಿಂದ ಹೊಗೆ ಹೊರಗಡೆ ಬಂದಿದೆ. ಹೀಗಾಗಿ ಅವರು ಆ ಸ್ಥಳದಲ್ಲಿದ್ದಾರೆ ಎಂಬುದನ್ನು ಗುರುತಿಸಿ ಅವರ ಸಮೀಪಕ್ಕೆ ಹೋಗಿ ನೋಡಿದ್ದಾರೆ. ಹೆಂಡತಿ ಶಾಂತ ಹೇಳಿದಾಗೆ ಗೆಹೆಯಲ್ಲಿ ತಂದೆ, ಮಕ್ಕಳು ಇದ್ದರು. ಅಧಿಕಾರಿಗಳು ಅವರ ಬಗ್ಗೆ ಮಾಹಿತಿ ತಿಳಿದುಕೊಂಡಾಗ ಆಕೆಯ ಗಂಡನ ಹೆಸರು ಕೃಷ್ಣನ್​ ಎಂದು ಗೊತ್ತಾಗಿದೆ. ಆಗ ಬೆಟ್ಟದ ಮೇಲಿನಿಂದ ತಂದೆ ಹಾಗೂ 1, 2, 3 ವರ್ಷದ ಮೂವರು ಮಕ್ಕಳನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us