/newsfirstlive-kannada/media/post_attachments/wp-content/uploads/2024/10/EYE-PROBLEM.jpg)
ಹೇಳಿ ಕೇಳಿ ಇದು ಡಿಜಿಟಲ್ ಯುಗ, ಕಣ್ಣಿನ ಸಮಸ್ಯೆಗಳು ಕಾಮನ್ ಅನ್ನುವ ರೀತಿಯಾಗಿದೆ. ಅದರಲ್ಲೂ ಕಂಪ್ಯೂಟರ್ ಮುಂದೆ ಕುಳಿತು ನಿರಂತರ ಕೆಲಸ ಮಾಡುವವರ ಕಥೆ ಕೇಳೋದೇ ಬೇಡ. ಗಂಟೆಗಟ್ಟಲೇ ಅವರು ಕಂಪ್ಯೂಟರ್ ತೆರೆಯನ್ನ ದಿಟ್ಟಿಸುತ್ತಲೇ ಕೂರಬೇಕು. ಅದು ಬಿಟ್ಟಮೇಲೆ ಮೊಬೈಲ್, ಇನ್ನು ಮಕ್ಕಳಂತೂ ಟಿವಿ ಮೊಬೈಲ್ , ಹೀಗೆ ಡಿಜಿಟಲ್ ಯುಗದಲ್ಲಿ ನಾವು ಡಿಜಿಟಲ್ ಸ್ಕ್ರೀನ್ಗೆ ಅಂಟಿಕೊಂಡು ಬಿಟ್ಟಿದ್ದೇವೆ. ಇದು ನಮಗೆ COMPUTER VISION SYNROME ಅಥವಾ DIGITAL EYE STRAIN ಅನ್ನುವಂತಹ ಸಮಸ್ಯೆಗಳನ್ನು ತಂದೊಡ್ಡಬಹುದು. ಈ ಒಂದು ಸಮಸ್ಯೆಯ ಗುಣಲಕ್ಷಣಗಳು ಕಣ್ಣಿನ ಶುಷ್ಕತೆ ( DRY EYE), ತಲೆನೋವು, ಮಂಜುಮಂಜಾದ ದೃಷ್ಟಿ ಜೊತೆಗೆ ಕುತ್ತಿಗೆ ಹಾಗೂ ಭುಜದ ನೋವು.
ಇದನ್ನೂ ಓದಿ: ಕನಸೇ ನಮ್ಮ ಅನಾರೋಗ್ಯದ ಬಗ್ಗೆ ಎಚ್ಚರಿಸುತ್ತೆ ಎಂದರೆ ನಂಬಲೇಬೇಕು! ಏನಿದು ಹೊಸ ಸ್ಟಡಿ?
ಈಗಾಗಲೇ ಹೇಳಿದಂತೆ ಇದು ಡಿಜಿಟಲ್ ಯುಗ, ಇಲ್ಲಿ ನಾವು ಅನಿವಾರ್ಯವಾಗಿ ಕಂಪ್ಯೂಟರ್ನಂತಹ ಡಿಜಿಟಲ್ ಸ್ಕ್ರೀನ್ ಡಿವೈಸ್ಗಳೊಂದಿಗೆ ಬದುಕಲೇಬೇಕು. ಇದರಿಂದ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಬರೋದಂತು ನಿಜ. ಆದ್ರೆ ಅದರಿಂದ ಪಾರಾಗುವುದಕ್ಕೂ ಅನೇಕ ದಾರಿಗಳಿವೆ.
20-202-20 ನಿಯಮವನ್ನು ಪಾಲಿಸಿ
ನೀವು ನಿರಂತರವಾಗಿ ಡಿಜಿಟಲ್ ತೆರೆಯ ಮುಂದೆ ಕುಳಿತು ಕೆಲಸ ಮಾಡುವುದರಿಂದ ಈಗಾಗಲೇ ಹೇಳಿದಂತೆ ಕಂಪ್ಯೂಟರ್ ವಿಷನ್ ಸಿಂಡ್ರೋಮ್ಸ್ನಂತಹ ಸಮಸ್ಯೆಗಳು ಬರುತ್ತವೆ. ಅದರಿಂದ ನೀವು ಬಚಾವಾಗಲು ಈ 20-20-20 ನಿಯಮವನ್ನು ಪಾಲಿಸಬೇಕು. 20 ನಿಮಿಷ ನಿರಂತರ ಕಂಪ್ಯೂಟರ್ ಸ್ಕ್ರೀನ್ ಎದುರು ಕೆಲಸ ಮಾಡಿದ ಮೇಲೆ 20 ಸೆಕೆಂಡ್ ಬ್ರೇಕ್ ಪಡೆಯಬೇಕು. ಆ 20 ಸೆಕಂಡ್ಗಳಲ್ಲಿ ನಿಮ್ಮಿಂದ 20 ಅಡಿ ದೂರ ಇರುವ ಏನನ್ನಾದರೂ ನೋಡಬೇಕು. ಇದರಿಂದ ಕಣ್ಣುಗಳ ಮೇಲೆ ಬೀಳುವ ಒತ್ತಡ ಕಡಿಮೆ ಆಗುತ್ತದೆ. ಈ ಒಂದು ರೂಢಿ ಕಣ್ಣಿನ ಸ್ನಾಯುಗಳ ಮೇಲೆ ಬೀಳುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಒಂದು ಅಭ್ಯಾಸ ನಿಮ್ಮದಾದಲ್ಲಿ ನೀವು ತೆಗೆದುಕೊಳ್ಳುವ ಒಂದು ಸಣ್ಣ ಬ್ರೇಕ್ ಮತ್ತೆ ನಿಮ್ಮನ್ನು ಡಿಜಿಟಲ್ ಸ್ಕ್ರೀನ್ ಮೇಲೆ ಫೋಕಸ್ ಮಾಡುವಂತೆ ಮಾಡುತ್ತದೆ ಹಾಗೂ ಕಣ್ಣುಗಳ ಹೈರಾಣಾಗುವುದು ತಪ್ಪುತ್ತದೆ.
ಕಂಪ್ಯೂಟರ್ ಸ್ಕ್ರೀನ್ ಸರಿಯಾಗಿರಲಿ
ನಮ್ಮ ಕಣ್ಣುಗಳ ಅನಾರೋಗ್ಯದ ಮೇಲೆ ಅತಿಹೆಚ್ಚು ಪರಿಣಾಮ ಬೀರುವುದೇ ಕಂಪ್ಯೂಟರ್ ಸ್ಕ್ರೀನ್. ಇದನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಅವುಗಳ ಹೊಳಪು (BRIGHTENESS) ಹೆಚ್ಚಿದಂತೆಲ್ಲಾ ಕಣ್ಣಿನ ಮೇಲೆ ಪರಿಣಾಮ ಬೀರುತ್ತದೆ. ಅನೇಕ ಕಂಪ್ಯೂಟರ್ ಡಿವೈಸ್ಗಳು ಬ್ಲೂ ಲೈಟ್ ಫಿಲ್ಟರ್ ನೈಟ್ ಮೋಡ್ನಂತಹ ಆಯ್ಕೆಗಳನ್ನು ಹೊಂದಿರುತ್ತವೆ ಇಂತಹ ಆಯ್ಕೆಗಳನ್ನು ಆಯ್ದುಕೊಂಡು ನಾವು ರಾತ್ರಿ ಹೊತ್ತು ಕೆಲಸ ಮಾಡುವುದರಿಂದ ನಮ್ಮ ಕಣ್ಣುಗಳು ಹೆಚ್ಚು ಸುರಕ್ಷಿತವಾಗಿರುತ್ತವೆ.
ಆಗಾಗ ಕಣ್ಣಗಳನ್ನು ಪಿಳುಕಿಸಿ
ಸ್ಕ್ರೀನ್ ಮೇಲೆ ಸದಾ ಕಣ್ಣಿಟ್ಟವರು ಪದೇ ಪದೇ ಕಣ್ಣನ್ನು ಪಿಳುಕಿಸಬೇಕು. ನಿರಂತರವಾಗಿ ಕಣ್ಣು ಪಿಳುಕಿಸದೇ ಕಂಪ್ಯೂಟರ್ ಸ್ಕ್ರೀನ್ ನೋಡುವುದರಿಂದ ಕಣ್ಣಿನ ಶುಷ್ಕತೆಯ ಸಮಸ್ಯೆಗಳು ಕಾಡುತ್ತವೆ. ಪಿಳುಕಿಸುವುರಿಂದ ನಿಮ್ಮ ನಯನಗಳು ನಯಗೊಳ್ಳುತ್ತವೆ. ಹೀಗಾಗಿ ಸಾಧ್ಯವಾದಷ್ಟು ಕೆಲಸ ಮಾಡುವಾಗ ಕಣ್ಣನ್ನು ಹೆಚ್ಚು ಹೆಚ್ಚು ಪಿಳುಕಿಸಿ
ತಪ್ಪದೇ ವಿಶ್ರಾಂತಿ ತೆಗೆದುಕೊಳ್ಳಿ ಕಣ್ಣಿಗೆ ವ್ಯಾಯಾಮ ನೀಡಿ
ಇದನ್ನೂ ಓದಿ:ಜೇನುತುಪ್ಪ ಸೇವಿಸುವುದು ಸಕ್ಕರೆ ಕಾಯಿಲೆಯವರಿಗೆ ಒಳ್ಳೆಯದಲ್ವಾ..? ಈ ಬಗ್ಗೆ ತಜ್ಞರು ಹೇಳುವುದೇನು?
ಕಂಪ್ಯೂಟರ್ ತೆರೆಯಿಂದ ಆಗಾಗ ವಿರಾಮ ಪಡೆಯುವುದು ಒಳ್ಳೆಯದು ಈಗಾಗಲೇ ಹೇಳಿದಂತೆ 20-20-20 ನಿಯಮದಂತೆಯೇ ನಿರಂತರವಾಗಿ ಐದು ಗಂಟೆ ಕೆಲಸ ಮಾಡಿದಾಗ ಹತ್ತು ನಿಮಿಷದ ಬ್ರೇಕ್ ತೆಗೆದುಕೊಳ್ಳಿ. ಈ ಸಮಯವನ್ನು ನಿಮ್ಮಿಂದ ದೂರ ಇರುವ ಯಾವುದಾದರೂ ವಸ್ತುವನ್ನು ದಿಟ್ಟಿಸುವುದಕ್ಕೆ ಉಪಯೋಗಿಸಿಕೊಳ್ಳಿ ಇದನ್ನು ನೇತ್ರ ವ್ಯಾಯಾಮ ಎಂದು ಕರೆಯುತ್ತಾರೆ. ಆಗಾಗ ಬೇರೆ ಕಡೆ ನಿಮ್ಮ ದೃಷ್ಟಿ ಹರಿಸುವುದು ದಿಟ್ಟಿಸುವುದು ನಿಮ್ಮ ನಯನಕ್ಕೆ ನೀವು ನೀಡುವ ವ್ಯಾಯಾಮ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ