/newsfirstlive-kannada/media/post_attachments/wp-content/uploads/2024/12/EYE-HEALTH-CARE.jpg)
ಮಕ್ಕಳು ಬೆಳವಣಿಗೆಯ ಹಂತದಲ್ಲಿ ಅವರ ಕಣ್ಣಿನ ಆರೋಗ್ಯವನ್ನು ಸರಿಯಾಗಿ ಕಾಪಾಡುವುದು ದೊಡ್ಡ ಹೊಣೆ ಹಾಗೂ ಸವಾಲಿನ ಕೆಲಸ. ಇಂದಿನ ದಿನಮಾನದ ಮಕ್ಕಳು ತಮ್ಮ ಹೆಚ್ಚು ಸಮಯವನ್ನು ಮೊಬೈಲ್​ ಹಾಗೂ ಟಿವಿ ಸ್ಕ್ರೀನ್​ಗಳ ಮುಂದೆ ಕಳೆಯುತ್ತಾರೆ. ಹೀಗಾಗಿ ಸಹಜವಾಗಿ ದೃಷ್ಟಿದೋಷಗಳು ಕಾಣಿಸಿಕೊಳ್ಳುತ್ತವೆ. ದೃಷ್ಟಿದೋಷಕ್ಕೆ ಕೇವಲ ಸ್ಕ್ರೀನ್​ಗಳು ಕಾರಣವಲ್ಲ ಇನ್ನೂ ಹಲವು ಕಾರಣಗಳು ಕೂಡ ಇವೆ. ಹಾಗೆಯೇ ನಿಮ್ಮ ಮಕ್ಕಳ ಕಣ್ಣಿನ ಆರೋಗ್ಯವನ್ನು ಕಾಪಾಡಲು ಕೆಲವು ಸೂತ್ರಗಳೂ ಇವೆ.
ಕುಳಿತುಕೊಳ್ಳುವ ಭಂಗಿ ಹಾಗೂ ದೂರ ಸರಿಯಾಗಿರಬೇಕು
ಸರಿಯಾಗಿ ಕುಳಿತುಕೊಳ್ಳುವುದು ಹಾಗೂ ದೂರ ಸರಿಯಾಗಿರಬೇಕು. ಇದು ಬಹಳವೇ ಮುಖ್ಯ ಸರಿಯಾದ ದೂರದಲ್ಲಿ, ಸರಿಯಾದ ಭಂಗಿಯಲ್ಲಿ ಕುಳಿತು ಓದುವುದು ಹಾಗೂ ನೋಡುವುದು ಮಾಡಿದರೆ pseudo-myopia ( ಸಮೀಪ ದೃಷ್ಟಿದೋಷ) ದಿಂದ ದೂರ ಉಳಿಯಬಹುದು. ಈ ಒಂದು ಸಮಸ್ಯೆಯಲ್ಲಿ ಮಕ್ಕಳಿಗೆ ಎಲ್ಲ ಅಂತರದ ವಸ್ತುಗಳನ್ನು ನೋಡಲು ಮೈನಸ್ ಗ್ಲಾಸ್​ಗಳ( ಚಸ್ಮಾ) ಅವಶ್ಯಕತೆ ಬರುತ್ತದೆ. ಹೀಗಾಗಿ ಮಕ್ಕಳನ್ನು ಸರಿಯಾದ ಭಂಗಿಯಲ್ಲಿ ಸರಿಯಾದ ಅಂತರದಲ್ಲಿ ಇರಿಸಿ ಓದಲು ಮತ್ತು ಟಿವಿ ಹಾಗೂ ಮೊಬೈಲ್​ಗಳನ್ನು ನೋಡಲು ಅವಕಾಶ ಮಾಡಿಕೊಡಬೇಕು
ಇದನ್ನೂ ಓದಿ:ಟೀ ಕುಡಿಯುವಾಗ ನಿಮಗೆ ಕಡ್ಡಾಯವಾಗಿ ಸಿಗರೇಟ್​ ಬೇಕೇ ಬೇಕಾ? ಹಾಗಾದ್ರೆ ತಪ್ಪದೇ ಈ ಸ್ಟೋರಿ ಓದಿ
ಸರಿಯಾದ ಬೆಳಕು
ಮಕ್ಕಳು ಓದುವಾಗ ಹಾಗೂ ಬರೆಯುವಾಗ ಅವರಿಗೆ ಸರಿಯಾದ ಬೆಳಕಿನ ವ್ಯವಸ್ಥೆ ಇರಬೇಕು. ಸರಿಯಿಲ್ಲದ ಬೆಳಕಿನಿಂದ ಮಕ್ಕಳು ಕಣ್ಣುಗಳು ಸಮಸ್ಯೆಯನ್ನು ಎದುರಿಸುತ್ತವೆ. ಕಣ್ಣಿನ ಸಮಸ್ಯೆಗಳು ಸೃಷ್ಟಿಯಾಗುವುದಕ್ಕೆ ಇದು ಕಾರಣವಾಗುತ್ತದೆ. ಹೀಗಾಗಿ ಮಕ್ಕಳು ಓದುವ ಕೋಣೆಯಲ್ಲಿ ಅಥವಾ ಜಾಗದಲ್ಲಿ ಸರಿಯಾದ ಪ್ರಮಾಣದ ಬೆಳಕು ಇರುವುದು ತುಂಬಾ ಅವಶ್ಯಕ
ಕಣ್ಣು ರಕ್ಷಿಸುವ ಸಾಧನಗಳನ್ನು ಬಳಸಿ
ಮಕ್ಕಳು ಹೆಚ್ಚು ಧೂಳಿನಲ್ಲಿ ಆಡುವಾಗ, ಕಣ್ಣಿಗೆ ಗಾಯವಾಗುವಂತಹ ಸಮಸ್ಯೆಗಳು ಇರುವ ಸ್ಥಳಗಳಲ್ಲಿ ಪ್ರೊಟೆಕ್ಟಿವ್ ಐ ವೇಯರ್ ನೀಡುವುದು ತುಂಬಾ ಒಳ್ಳೆಯದು. ಸೇಫ್ಟಿ ಗ್ಲಾಸ್ ಹಾಗೂ ಗಾಗಲ್ಸ್​ಗಳನ್ನು ಅವರಿಗೆ ತೊಡಿಸಿ ಅಲ್ಲಿಗೆ ಕಳಿಸಿ ಆಚೆ ಹೋಗುವಾಗ ಸನ್ ಗ್ಲಾಸ್ ಬಳಸುವಂತೆ ಮಕ್ಕಳಿಗೆ ತಿಳಿ ಹೇಳಿ. ಪಟಾಕಿಗಳನ್ನು ಹೊಡೆಯುವಾಗ ಮುಖಕ್ಕೆ ರಕ್ಷಣಾತ್ಮಕ ಮಾಸ್ಕ್ ಹಾಕುವುದನ್ನು ಮರೆಯಬೇಡಿ.
ಸ್ಕ್ರೀನ್ ಟೈಮ್​ನ್ನು ಮಿತಿಗೊಳಿಸಿ
ನಿಮ್ಮ ಮಕ್ಕಳು ಟಿವಿ ಎದುರು ಹಾಗೂ ಮೊಬೈಲ್ ಎದುರು ಎಷ್ಟು ಕಾಲ ಕಳೆಯುತ್ತಿದ್ದಾರೆ ಎಂಬುದನ್ನು ಗಮನಿಸಿ. ತುಂಬಾ ಹೊತ್ತು ಅದರ ಎದುರು ಕಾಲ ಕಳೆಯುತ್ತಿದ್ದರೆ ಅವರಿಗೆ ತಿಳಿ ಹೇಳಿ ಅದನ್ನು ಕಡಿಮೆ ಮಾಡಿಸಿ ಹಾಗೂ ಅವರಿಗೆ 20-20-20 ನಿಯಮವನ್ನು ತಿಳಿಸಿ ಹೇಳಿ. 20 ನಿಮಿಷ ಸ್ಕ್ರೀನ್​ನನ್ನು ನೋಡಿದ ಬಳಿಕ 20 ಸೆಕಂಡ್, 20 ಅಡಿ ದೂರದಲ್ಲಿರುವ ಯಾವುದಾದರು ವಸ್ತುವನ್ನು ನೋಡಲು ಕಲಿಸಿಕೊಂಡಿ
ಇದನ್ನೂ ಓದಿ:ಚಳಿಗಾಲದಲ್ಲಿ ಖಿನ್ನತೆ (Depression) ಆವರಿಸುವುದು ನಿಜವಾ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ.?
ಕಣ್ಣಿಗೆ ಬೇಕಾದ ಒಳ್ಳೆಯ ಅಭ್ಯಾಸಗಳನ್ನು ತಿಳಿಸಿಕೊಡಿ
ಸರಿಯಾಗಿ ಕೈತೊಳೆಯುವ ಹಾಗೂ ಕಣ್ಣುಗಳನ್ನು ತಿಕ್ಕದಂತೆ ಹೇಳಿಕೊಡಿ. ಇದರಿಂದ ಕಣ್ಣಿಗೆ ಸಂಬಂಧಿಸಿದ ಸೋಂಕುಗಳು ಮಕ್ಕಳಲ್ಲಿ ಕಂಡು ಬರುವುದಿಲ್ಲ. ಮಕ್ಕಳ ನಡುವೆ ಟವಲ್, ದಿಂಬು ತರದ ವಸ್ತುಗಳನ್ನು ಶೇರ್ ಮಾಡಿಕೊಳ್ಳದಂತೆ ನೋಡಿಕೊಳ್ಳಿ ಒಬ್ಬರಲ್ಲಿರುವ ಇನ್​ಫೆಕ್ಷನ್ ಮತ್ತೊಬ್ಬರಿಗೆ ಬರದಂತೆ ಈ ಮೂಲಕ ತಡೆಯಬಹುದು
ಆಗಾಗ ಕಣ್ಣಿನ ಪರೀಕ್ಷೆ ಮಾಡಿಸಿ
ಆಗಾಗ ನೀವು ನಿಮ್ಮ ಮಕ್ಕಳ ಕಣ್ಣಿನ ಪರೀಕ್ಷೆಯನ್ನು ಮಾಡಿಸುವುದರಿಂದ ಅವರ ದೃಷ್ಟಿದೋಷ ಹೇಗಿದೆ. ಯಾವೆಲ್ಲಾ ಸಮಸ್ಯೆಗಳು ಅವರಲ್ಲಿ ಕಾಡುತ್ತಿವೆ. ಅವುಗಳಿಗೆ ನೀಡಬೇಕಾದ ಚಿಕಿತ್ಸೆಯೇನು ಎಂಬುದನ್ನು ಕಂಡುಹಿಡಿಯಬೇಕು. ಸಾಧ್ಯವಾದಷ್ಟು ಮಕ್ಕಳು ಚಿಕ್ಕವರಿದ್ದಾಗಲೇ ಈ ಪರೀಕ್ಷೆಗಳನ್ನು ಮಾಡಿಸಿ ಇದರಿಂದ ಅವರಲ್ಲಿರುವ ಕಣ್ಣಿನ ಸಮಸ್ಯೆಗಳನ್ನು ಆದಷ್ಟು ಬೇಗ ಕಂಡು ಹಿಡಿಯಬಹುದು ಹಾಗೂ ಶಾಶ್ವತ ಪರಿಹಾರ ಕಂಡುಹಿಡಿಯಲು ಅನುಕೂಲವು ಆಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ