ನಮಗೆ ದೇಶ ಮುಖ್ಯ, ಪಾಕ್ ವಿರುದ್ಧ ಆಡಲ್ಲ ಎಂದ ಲೆಜೆಂಡ್ಸ್​.. ಪಂದ್ಯ ರದ್ದು ಮಾಡಿ ಕ್ಷಮೆ ಕೇಳಿದ WCL!

author-image
Ganesh
Updated On
ನಮಗೆ ದೇಶ ಮುಖ್ಯ, ಪಾಕ್ ವಿರುದ್ಧ ಆಡಲ್ಲ ಎಂದ ಲೆಜೆಂಡ್ಸ್​.. ಪಂದ್ಯ ರದ್ದು ಮಾಡಿ ಕ್ಷಮೆ ಕೇಳಿದ WCL!
Advertisment
  • ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್-2025 ಪಂದ್ಯ
  • ಭಾರತ-ಪಾಕ್ ನಡುವೆ ಪಂದ್ಯ ಆಯೋಜಿಸಿದ್ದ WCL
  • ಪಾಕ್ ವಿರುದ್ಧ ನಾವು ಆಡಲ್ಲ ಎಂದ ಭಾರತೀಯ ಆಟಗಾರರು

ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2025ರ (WCL) ಆಯೋಜಕರು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ರದ್ದುಗೊಳಿಸಿದ್ದಾರೆ. ಭಾರತೀಯ ಆಟಗಾರರು ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಆಡಲು ನಿರಾಕರಿಸಿದ್ದರು. ಹೀಗಾಗಿ WCL ಈ ಕ್ರಮ ಕೈಗೊಂಡಿದೆ. ಯುವರಾಜ್ ಸಿಂಗ್ ನಾಯಕತ್ವದಲ್ಲಿ ಭಾರತೀಯ ಚಾಂಪಿಯನ್ಸ್‌ನ ಜುಲೈ 22 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದೆ.

ಕ್ಷಮೆ ಕೇಳಿದ ಆಯೋಜಕರು..

ಪಂದ್ಯ ರದ್ದು ಮಾಡಿದ ಬೆನ್ನಲ್ಲೇ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಅಧಿಕೃತ ಹೇಳಿಕೆ ನೀಡಿದೆ. ಭಾರತೀಯ ಆಟಗಾರರು ಮತ್ತು ಅಭಿಮಾನಿಗಳ ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ನೋವುಂಟು ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದೆ. ಅಭಿಮಾನಿಗಳಿಗೆ ಒಳ್ಳೆಯ ಕ್ಷಣಗಳನ್ನು ನೀಡಲು ಬಯಸಿದ್ದೇವೆ ಎಂದಿದೆ.

ಇದನ್ನೂ ಓದಿ: ಆಧಾರ್​​ ಕಾರ್ಡ್​ನಲ್ಲಿ ಎಷ್ಟು ವರ್ಷಗಳ ನಂತರ ಮಕ್ಕಳ ಬಯೋಮೆಟ್ರಿಕ್​ ಅಪ್​ಡೇಟ್​​​ ಮಾಡಿಸಬೇಕು?

‘ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಯಾವಾಗಲೂ ಕ್ರಿಕೆಟ್ ಅನ್ನು ಗೌರವಿಸುತ್ತದೆ ಮತ್ತು ಪ್ರೀತಿಸುತ್ತದೆ. ಅಭಿಮಾನಿಗಳಿಗೆ ಕೆಲವು ಒಳ್ಳೆಯ ಮತ್ತು ಸಂತೋಷದ ಕ್ಷಣಗಳನ್ನು ನೀಡುವುದು ನಮ್ಮ ಏಕೈಕ ಗುರಿ. ಭಾರತ vs ಪಾಕಿಸ್ತಾನ ಪಂದ್ಯವನ್ನು ರದ್ದುಗೊಳಿಸಲು ನಾವು ನಿರ್ಧರಿಸಿದ್ದೇವೆ. ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಮತ್ತೊಮ್ಮೆ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ.

ಇದನ್ನೂ ಓದಿ: ಒಂದೇ ಮಂಟಪದಲ್ಲಿ ಅಣ್ಣ-ತಮ್ಮನ ಜೊತೆ ಸಪ್ತಪದಿ ತುಳಿದ ಯುವತಿ.. ಕಲಿಯುಗದ ದ್ರೌಪದಿ ಕಲ್ಯಾಣ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment