ಚಿನ್ನ ಮಿಶ್ರಿತ ಜೆರ್ಸಿ ಧರಿಸಿ ಕ್ರಿಕೆಟ್​ ಆಡಿದ ವೆಸ್ಟ್​ ಇಂಡೀಸ್​ ಆಟಗಾರರು​.. ಏನ್ ಸ್ಪೆಷಲ್?

author-image
Bheemappa
Updated On
ಚಿನ್ನ ಮಿಶ್ರಿತ ಜೆರ್ಸಿ ಧರಿಸಿ ಕ್ರಿಕೆಟ್​ ಆಡಿದ ವೆಸ್ಟ್​ ಇಂಡೀಸ್​ ಆಟಗಾರರು​.. ಏನ್ ಸ್ಪೆಷಲ್?
Advertisment
  • ವಿಂಡೀಸ್ ಪ್ಲೇಯರ್ಸ್​​ ಚಿನ್ನ ಮಿಶ್ರಿತ ಜೆರ್ಸಿ ಧರಿಸುವುದೇಕೆ..?
  • 1 ಜೆರ್ಸಿ ಬೆಲೆ ಎಷ್ಟು ಲಕ್ಷ ರೂಪಾಯಿ ಎನ್ನುವುದೇ ಕುತೂಹಲ
  • ಈ ಒಂದೊಂದು ಜೆರ್ಸಿಯಲ್ಲಿ ಎಷ್ಟು ಗ್ರಾಂ ಬಂಗಾರ ಇರುತ್ತದೆ?

ವೆಸ್ಟ್ ಇಂಡೀಸ್ ಕ್ರಿಕೆಟರ್​​ಗಳು ಅಂದ್ರೇನೆ, ಡಿಫರೆಂಟ್. ಆಟದಲ್ಲೇ ಅಲ್ಲ. ಆಫ್​​ ದಿ ಫೀಲ್ಡ್​ನ ಜೀವನವೂ ಸಖತ್ ಇಂಟ್ರೆಸ್ಟಿಂಗ್. ಇದೀಗ ಇದೇ ವೆಸ್ಟ್​ ಇಂಡೀಸ್​, ವಿಶ್ವದ ದುಬಾರಿ ಜೆರ್ಸಿ ಧರಿಸಿ ಮತ್ತೊಮ್ಮೆ ನಾವೇ ಬೇರೆ, ನಮ್ ಸ್ಟ್ರೈಲೇ ಬೇರೆ ಅನ್ನೋದನ್ನ ವಿಶ್ವಕ್ಕೆ ಪರಿಚಯಿಸಿದೆ.

ವೆಸ್ಟ್​ ಇಂಡೀಸ್ ಕ್ರಿಕೆಟರ್ಸ್ ಎಂದಾಕ್ಷಣ ಕಣ್ಮುಂದೆ ಬರುವುದು. ಸರ್ ವಿವಿಯನ್ ರಿಚರ್ಡ್ಸ್, ಸರ್ ಕ್ಲೈವ್ ಲಾಯ್ಡ್, ಬ್ರಿಯನ್ ಲಾರಾ, ಗ್ಯಾರಿ ಸೋಬರ್ಸ್. ಕ್ರಿಸ್ ಗೇಲ್​ರಂಥ ದಿಗ್ಗಜ ಆಟಗಾರರ ಹೆಸರುಗಳು ನೆನಪಾಗುತ್ತೆ. ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್‌ನ ಅನಭಿಷಿಕ್ತ ದೊರೆಯಾಗಿ ಮೆರೆದಿದ್ದ ವೆಸ್ಟ್‌ ಇಂಡೀಸ್‌, ಇವತ್ತು ಸಾಗುತ್ತಿರುವ ಅವನತಿಯ ಹಾದಿ ಕ್ರಿಕೆಟ್‌ ಪ್ರೇಮಿಗಳಲ್ಲಿ ಮರುಕ ಮೂಡಿಸುತ್ತೆ. ಆದ್ರೆ, ವೆಸ್ಟ್ ಇಂಡೀಸ್ ಕ್ರಿಕೆಟರ್​​ಗಳ ಜೀವನ ಮಾತ್ರ, ಸಖತ್ ಡಿಫರೆಂಟ್. ಯಾಕಂದ್ರೆ, ಮನರಂಜನೆ, ಮೋಜು, ಮಸ್ತಿಗೆ ಮತ್ತೊಂದು ಹೆಸರೇ ವೆಸ್ಟ್ ಇಂಡೀಸ್ ಕ್ರಿಕೆಟರ್ಸ್​.

publive-image

ಸದಾ ನಾವೇ ಬೇರೆ, ನಮ್ ಸ್ಟ್ರೈಲೇ ಬೇರೆ ಎಂಬತಿರುವ ಕ್ರಿಕೆಟರ್ಸ್​, ಆನ್​ಫೀಲ್ಡ್​ನಲ್ಲಿ ದೈತ್ಯಾಕಾರದ ದೇಹದಿಂದಲೇ ಮಾತ್ರವಲ್ಲ, ಆಟದಿಂದಲೂ ಎಲ್ಲರ ಗಮನ ಸೆಳೆಯುತ್ತಾರೆ. ಆಫ್​ ಫೀಲ್ಡ್​ಗೆ ಹೋದ್ರಂತೂ, ಡ್ಯಾನ್ಸ್, ಪಾರ್ಟಿ, ಸುತ್ತಲೂ ಹುಡುಗಿಯರ ದಂಡು. ಅಬ್ಬಾ ಇವರ ಜೀವನ ಒಂದು ರೀತಿ ಕಲರ್ ಫುಲ್. ಇದೀಗ ಇದೇ ವೆಸ್ಟ್ ಇಂಡೀಸ್ ಕ್ರಿಕೆಟರ್ಸ್​ ಟ್ರೆಂಡಿಂಗ್​ನಲ್ಲಿದ್ದಾರೆ. ಇದಕ್ಕೆ ಕಾರಣ ಜರ್ಸಿ.

ವಿಶ್ವ ಕ್ರಿಕೆಟ್ ಇತಿಹಾಸದ ದುಬಾರಿ ಜರ್ಸಿಯಲ್ಲಿ ವಿಂಡೀಸ್ ಕಣಕ್ಕೆ..!

2ನೇ ಆವೃತ್ತಿಯ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಇಂಗ್ಲೆಂಡ್​ನ ಎಡ್ಜ್​ಬಾಸ್ಟನ್​ನಲ್ಲಿ ಸೌತ್ ಆಫ್ರಿಕಾ ಎದುರು ಕಣಕ್ಕಿಳಿದ ವೆಸ್ಟ್ ಇಂಡೀಸ್​ ಕಣಕ್ಕಿಳಿದಿತ್ತು. ಆದ್ರೆ, ಈ ಪಂದ್ಯದಲ್ಲಿ ಕ್ರಿಕೆಟ್ ದೈತ್ಯರಾದ ಕ್ರಿಸ್ ಗೇಲ್, ಕೀರನ್ ಪೊಲಾರ್ಡ್​, ಡ್ವೇನ್ ಬ್ರಾವೋಗಿಂತ ಎಲ್ಲರ ಕಣ್ಣು ಕುಕ್ಕಿದ್ದು, ಈ ಆಟಗಾರರು ಧರಿಸಿದ್ದ ದುಬಾರಿ ಜೆರ್ಸಿ.

ಐಕಾನಿಕ್ ಜರ್ಸಿಯ ಬೆಲೆ ಕೇಳಿದ್ರೆ ಶಾಕ್ ಗ್ಯಾರಂಟಿ..!

ಕ್ರಿಕೆಟರ್​​ಗಳ ದುಬಾರಿ ಜರ್ಸಿ ಅಂದ್ರೆ, ಸಾಮಾನ್ಯವಾಗಿ ನೆನಪಿಗೆ ಬರೋದು. 5ರಿಂದ 10 ಸಾವಿರ ರೂಪಾಯಿ ಜರ್ಸಿ. ಇಲ್ಲ ಅಂದ್ರೆ, ಒಂದು 25 ರಿಂದ 40 ಸಾವಿರ ಅಂನ್ಕೊಬಹುದು. ಆದ್ರೆ, ಈ ದುಬಾರಿ ಜರ್ಸಿ ಅಂತಿದ್ದಲ್ಲ. ಚಿನ್ನ ಮಿಶ್ರಿತ ಜರ್ಸಿ.

ದುಬಾರಿ ಜೆರ್ಸಿ ವಿಶೇಷತೆ ಏನು..?

  • 30 ಗ್ರಾಂ ಚಿನ್ನದಿಂದ ತಯಾರಿಸಲಾಗಿರುವ ಜೆರ್ಸಿ
  • ವಿಶಿಷ್ಟ ಜೆರ್ಸಿಯಲ್ಲಿ 18 ಕ್ಯಾರೆಟ್ ಚಿನ್ನ ಹೊದಿಸಲಾಗಿದೆ
  • 30 ಗ್ರಾಂ​, 20 ಗ್ರಾಂ, 10 ಗ್ರಾಂ ಎಡಿಷನ್​ನಲ್ಲಿ ಜೆರ್ಸಿ ಲಭ್ಯ
  • ದುಬೈ ಮೂಲದ ಲೊರೆನ್ಜ್ ಎಂಬ ಕಂಪನಿಯಿಂದ ವಿನ್ಯಾಸ
  • ಚಿನ್ನ ಮಿಶ್ರಿತ ಜೆರ್ಸಿಯ ಬೆಲೆ ಬರೋಬ್ಬರಿ 3 ಲಕ್ಷ ರೂಪಾಯಿ

ದುಬಾರಿ ಜೆರ್ಸಿಯ ಹಿಂದಿದೆ ಮತ್ತೊಂದು ರೀಸನ್..!

ವಿಂಡೀಸ್​​ ಲೆಜೆಂಡ್ಸ್​ ತಂಡದಲ್ಲಿ ಲೆಜೆಂಡರಿ ಆಟಗಾರರ ದಂಡೇ ಇದೆ. ಪ್ರಮುಖವಾಗಿ ಕ್ರಿಸ್​ ಗೇಲ್, ಶಿವನರೈನ್ ಚಂದ್ರಪಾಲ್, ಕೀರನ್ ಪೊಲಾರ್ಡ್​, ಡ್ವೇನ್ ಬ್ರಾವೋನಂಥ ಚಾಂಪಿಯನ್ಸ್ ಇದ್ದಾರೆ. ಹೀಗಾಗಿ ಈ ಆಟಗಾರರಿಗೆ ಗೌರವ ಸಲ್ಲಿಸುವ ಉದ್ದೇಶಕ್ಕೆ ಚಿನ್ನ ಮಿಶ್ರಿತ ಜರ್ಸಿ ತಯಾರಿಸಲಾಗಿದೆ. ಗೌರವ ಸಲ್ಲಿಸುವ ಉದ್ದೇಶ ಮಾತ್ರವೇ ಇಲ್ಲ. ಇದರ ಹಿಂದೆ ಮತ್ತೊಂದು ಕಾರಣ ಇದೆ. ಅದೇ ಮಾರ್ಕೆಂಟಿಂಗ್​.

ಇದನ್ನೂ ಓದಿ: ವಿಕೆಟ್​ ಕೀಪಿಂಗ್ ಮಾಡೋಕೆ ರಿಷಭ್ ಪಂತ್​ ಹರಸಾಹಸ.. KL ರಾಹುಲ್​ಗೆ ಸಿಗುತ್ತಾ ಜವಾಬ್ದಾರಿ?

publive-image

ಈ ಜೆರ್ಸಿ ವಿನ್ಯಾಸಗೊಳಿಸಿರುವ ದುಬೈ ಮೂಲದ ಲೊರೆನ್ಜ್ ಕಂಪನಿ, ಲಕ್ಸುರಿ ಕಲೆಕ್ಷನ್​ಗೆ ಹೆಸರುವಾಸಿಯಾಗಿದೆ. ಫ್ಯಾಷನ್ ಇಂಡಸ್ಟ್ರಿಯಲ್ಲೇ ಹೊಸ ಕ್ರಾಂತಿ ಸೃಷ್ಟಿಸಿದೆ. ಇದೇ ಲೊರೆನ್ಜ್ ಗ್ರೂಪ್​​ ಚಾನೆಲ್​-2 ಸಹ ಮಾಲೀಕತ್ವ ಹೊಂದಿದೆ. ಇಂಟ್ರೆಸ್ಟಿಂಗ್ ಅಂದ್ರೆ, ಇದೇ ಚಾನೆಲ್-2 ವೆಸ್ಟ್ ಇಂಡೀಸ್ ಚಾಂಪಿಯನ್ಸ್ ಮಾಲೀಕರಾಗಿದ್ದಾರೆ. ಹೀಗಾಗಿ ಚಿನ್ನ ಮಿಶ್ರಿತ ಜರ್ಸಿಯೊಂದಿಗೆ ಬ್ರ್ಯಾಂಡ್​​ ಮಾರ್ಕೆಟಿಂಗ್ ಮಾಡ್ತಿದೆ.

ಕ್ರಿಕೆಟ್​ ಲೀಗ್​ಗಳು ಅಂದ್ರೆನೇ ಬ್ರ್ಯಾಂಡ್ ಪ್ರಮೋಷನ್ಸ್ ವೇದಿಕೆ. ಇದಕ್ಕಾಗಿ ಕೋಟಿ ಕೋಟಿ ಸುರಿಯುವ ಕಂಪನಿಗಳು, ತನ್ನ ಬ್ರ್ಯಾಂಡ್​​ ಬಿಲ್ಡ್​ ಮಾಡುವತ್ತ ಒಂದಿಲ್ಲೊಂದು ಹಾದಿ ತುಳಿಯುವುದು ಕಾಮನ್. ಇದರಲ್ಲಿನ ಹೊಸ ಐಡಿಯಾ, ಚಿನ್ನ ಮಿಶ್ರಿತ ಜರ್ಸಿಯಷ್ಟೇ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment