/newsfirstlive-kannada/media/post_attachments/wp-content/uploads/2024/07/IND-PAK-2.jpg)
ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್-2024 ಫೈನಲ್ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು ಯುವರಾಜ್ ಸಿಂಗ್ ನೇತೃತ್ವದ ಇಂಡಿಯಾ ಚಾಂಪಿಯನ್ಸ್ ಬಗ್ಗು ಬಡಿದು ಕಪ್ಗೆ ಮುತ್ತಿಟ್ಟಿದೆ. ಫೈನಲ್ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಐದು ವಿಕೆಟ್ಗಳ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಯೂನಿಸ್ ಖಾನ್ ಪಡೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಶೋಯೆಬ್ ಮಲಿಕ್ ಅವರ 41 ರನ್ಗಳ ಕಾಣಿಕೆಯೊಂದಿಗೆ ಪಾಕಿಸ್ತಾನ ನಿಗಧಿತ 20 ಓವರ್ನಲ್ಲಿ 6 ವಿಕೆಟ್ ಕಳೆದುಕೊಂಡು 156 ರನ್ಗಳಿಸಿತ್ತು. ಭಾರತದ ಪರ ಅನಿರೀತ್ ಸಿಂಗ್ ಮೂರು ವಿಕೆಟ್ ಪಡೆದು ಮಿಂಚಿದರು. ಅದೇ ರೀತಿ ವಿನಯ್ ಕುಮಾರ್, ನೇಗಿ, ಇರ್ಫಾನ್ ಪಠಾಣ್ ತಲಾ ಒಂದು ವಿಕೆಟ್ ಪಡೆದರು. 157 ರನ್ಗಳ ಗುರಿ ಬೆನ್ನು ಹತ್ತಿದ್ದ ಟೀಂ ಇಂಡಿಯಾದಲ್ಲಿ ಅಂಬಟಿ ರಾಯುಡು ಸ್ಫೋಟಕ ಬ್ಯಾಟಿಂಗ್ ನಡೆಸಿದರು. 30 ಬಾಲ್ನಲ್ಲಿ 50 ರನ್ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಕೊನೆಯಲ್ಲಿ ಬಂದ ಯೂಸುಫ್ ಪಠಾಣ್ 16 ಬಾಲ್ನಲ್ಲಿ 30 ರನ್ಗಳಿಸಿದರು.
ಇದನ್ನೂ ಓದಿ:ಪಾಕ್ ಸೋಲಿಸಿ WCL ಕಪ್ಗೆ ಮುತ್ತಿಟ್ಟ ಭಾರತ.. ಯುವಿ ನೇತೃತ್ವದ ಇಂಡಿಯಾ ಚಾಂಪಿಯನ್ಸ್ಗೆ ಭರ್ಜರಿ ಗೆಲುವು..!
ಭಾರತದ ಪರ ಅನಿರೀತ್ ಸಿಂಗ್ ಮೂರು ವಿಕೆಟ್ ಪಡೆದು ಮಿಂಚಿದರು. ಅದೇ ರೀತಿ ವಿನಯ್ ಕುಮಾರ್, ನೇಗಿ, ಇರ್ಫಾನ್ ಪಠಾಣ್ ತಲಾ ಒಂದು ವಿಕೆಟ್ ಪಡೆದರು. 157 ರನ್ಗಳ ಗುರಿ ಬೆನ್ನು ಹತ್ತಿದ್ದ ಟೀಂ ಇಂಡಿಯಾದಲ್ಲಿ ಅಂಬಟಿ ರಾಯುಡು ಸ್ಫೋಟಕ ಬ್ಯಾಟಿಂಗ್ ನಡೆಸಿದರು. 30 ಬಾಲ್ನಲ್ಲಿ 50 ರನ್ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಕೊನೆಯಲ್ಲಿ ಬಂದ ಯೂಸುಫ್ ಪಠಾಣ್ 16 ಬಾಲ್ನಲ್ಲಿ 30 ರನ್ಗಳಿಸಿದರು.
ಯಾರು ಎಷ್ಟು ರನ್ ಬಾರಿಸಿದರು..?
- ರಾಬಿನ್ ಉತ್ತಪ್ಪ 8 ಬಾಲ್ ಆಡಿ 10 ರನ್
- ಅಂಬಟಿ ರಾಯುಡು 30 ಬಾಲ್ ಎದುರಿಸಿ 50 ರನ್ (ಎರಡು ಸಿಕ್ಸರ್, ಐದು ಬೌಂಡರಿ)
- ಸುರೇಶ್ ರೈನಾ 4 ರನ್
- ಗುರುಕೀರತ್ ಸಿಂಗ್ ಮಾನ್ 33 ಬಾಲ್ ಆಡಿ 34 ರನ್ (ಎರಡು ಬೌಂಡರಿ, ಒಂದು ಸಿಕ್ಸರ್)
- ಯುವರಾಜ್ ಸಿಂಗ್ (ನಾಟೌಟ್) 22 ಬಾಲ್ ಆಡಿ 15 ರನ್
- ಯುಸೂಫ್ ಫಠಾಣ್ 16 ಬಾಲ್ನಲ್ಲಿ 30 ರನ್ (ಮೂರು ಸಿಕ್ಸರ್, ಒಂದು ಬೌಂಡರಿ)
- ಇರ್ಫಾನ್ ಪಠಾಣ್ ಐದು ರನ್ (ನಾಟೌಟ್)
ಇದನ್ನೂ ಓದಿ:ಮುಂದಿನ ನಿಲ್ದಾಣ.. ಅಪರ್ಣಾ ಬಳಿಕ ಮೆಟ್ರೋದ ಹೊಸ ಮಾರ್ಗಗಳಿಗೆ ಧ್ವನಿ ಯಾರದ್ದು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್