/newsfirstlive-kannada/media/post_attachments/wp-content/uploads/2024/06/vijiyalaxmi2.jpg)
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​, ಪವಿತ್ರಾ ಗೌಡ ಸೇರಿ ಒಟ್ಟು 17 ಆರೋಪಿಗಳು ಜೈಲುಪಾಲಾಗಿದ್ದಾರೆ. ಅದರಲ್ಲಿ 13 ಆರೋಪಿಗಳು ಪರಪ್ಪರ ಅಗ್ರಹಾರದಲ್ಲಿದ್ದರೆ, ಇನ್ನೂ 4 ಆರೋಪಿಗಳು ತುಮಕೂರು ಜೈಲಿನಲ್ಲಿದ್ದಾರೆ. ಸದ್ಯ ಕೊಲೆ ಕೇಸ್​ ಜೈಲು ಸೇರಿದ ನಟ ದರ್ಶನ್​ರನ್ನು ನೋಡಲು ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್​ ದರ್ಶನ್​ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು.
/newsfirstlive-kannada/media/post_attachments/wp-content/uploads/2024/06/DARSHAN_WIFE-1.jpg)
ಇದನ್ನೂ ಓದಿ:ದರ್ಶನ್ ಸೆಲೆಬ್ರಿಟಿಗಳೇ ಇಲ್ಲಿ ಕೇಳಿ.. ಅಭಿಮಾನಿಗಳಿಗೆ ವಿಜಯಲಕ್ಷ್ಮಿ ವಿಶೇಷ ಮನವಿ; ಹೇಳಿದ್ದೇನು?
ನಟ ದರ್ಶನ್​ನನ್ನು ಭೇಟಿಯಾದ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ಭಾವುಕರಾಗಿದ್ದರಂತೆ. ಹೌದು ಕೊಲೆ ಕೇಸ್​ನಲ್ಲಿ ಜೈಲುಪಾಲಾದ ನಟ ದರ್ಶನ್​ನನ್ನು ನೋಡಲು ಅಭಿಮಾನಿಗಳ ದಂಡು ಪರಪ್ಪನ ಅಗ್ರಹಾರ ಜೈಲಿಗೆ ದೌಡಾಯಿಸುತ್ತಿದ್ದರು. ಆದರೆ ಅಲ್ಲಿನ ಪೊಲೀಸ್​ ಅಧಿಕಾರಿಗಳು ಅಭಿಮಾನಿಗಳನ್ನು ಒಳಗಡೆ ಬಿಡದೇ ಹಾಗೇ ಕಳುಸಿದ್ದರು. ಇದೀಗ ಪತಿಯನ್ನು ಭೇಟಿಯಾದ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮೀ ಅವರು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಜೊತೆಗೆ ಪ್ರಕರಣದಿಂದ ಯಾವುದೇ ಉದ್ವೇಗಕ್ಕೆ ಒಳಗಾಗಬೇಡಿ ಅಂತ ಮನವಿ ಮಾಡಿಕೊಂಡಿದ್ದಾರೆ.
View this post on Instagram
ನಿಮ್ಮ ಶಾಂತ ಸ್ವಭಾವವೇ ನಮ್ಮ ದೊಡ್ಡ ಶಕ್ತಿ. ಈ ಕೆಟ್ಟ ಘಳಿಗೆಯೂ ಹೋಗಲಿದೆ. ಸತ್ಯ ಮೇಲುಗೈ ಸಾಧಿಸಲಿದೆ. ದರ್ಶನ್ ನಿಮ್ಮನ್ನ ಎಷ್ಟು ಪ್ರೀತಿ ಮಾಡ್ತಾರೆ ಅನ್ನೋದು ನನಗೆ ಗೊತ್ತು. ಇಂಥಹ ಕಷ್ಟಕರ ಸನ್ನಿವೇಶವನ್ನ ಎದುರಿಸುತ್ತಿರುವುದು ದುರದೃಷ್ಟಕರ. ಸದ್ಯಕ್ಕೆ ಅವರಿಂದ ಅಂತರ ಕಾಯ್ದುಕೊಳ್ಳುವ ಪರಿಸ್ಥಿತಿ ಇದೆ. ನಾನು ಅವರ ಜೊತೆ ಹೊರಗಿನ ಪರಿಸ್ಥಿತಿ ಬಗ್ಗೆ ವಿವರವಾಗಿ ಮಾತಾಡಿದ್ದೇನೆ. ಎಲ್ಲಾ ವಿಚಾರಗಳನ್ನ ತಿಳಿದು ದರ್ಶನ್ ಮನ ಕಲಕಿತು. ಎಲ್ಲಾ ಅಭಿಮಾನಿಗಳು ಶಾಂತಿ ಕಾಪಾಡಬೇಕು. ನಮ್ಮ ದೇಶದ ನ್ಯಾಯಾಂಗದ ವ್ಯವಸ್ಥೆ ಮೇಲೆ ಅಪಾರ ನಂಬಿಕೆ ಇದೆ. ಮುಂದೆ ಒಳ್ಳೆ ದಿನಗಳು ಬರಲಿದೆ. ದರ್ಶನ್ ಅನುಪಸ್ಥಿತಿಯಲ್ಲಿ ಅವರನ್ನ ತೇಜೋವಧೆ ಮಾಡಲಾಗುತ್ತಿದೆ. ಅವರನ್ನ ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಕಷ್ಟದ ಸಮಯದಲ್ಲಿ ನಿಮ್ಮ ಬೆಂಬಲವನ್ನ ನಿರೀಕ್ಷಿಸುತ್ತಿದ್ದೇನೆ ಎಂದು ಮನವಿ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/06/vijiyalaxmi1.jpg)
ಸದ್ಯ ಇದನ್ನು ನೋಡಿದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಜಯಲಕ್ಷ್ಮೀ ಅವರ ಪೋಸ್ಟ್​ಗೆ ಕಾಮೆಂಟ್​ ಮಾಡುತ್ತಿದ್ದಾರೆ. ಈ ಮನುಷ್ಯನ ಬಗ್ಗೆ ಯಾರೇ ಎಷ್ಟೇ ಅಪಪ್ರಚಾರ ಮಾಡಿದರೂ ಅಭಿಮಾನಿಗಳು ಇವರ ಮೇಲೆ ಇಟ್ಟಿರುವ ಅಭಿಮಾನವನ್ನ ಸ್ವಲ್ಪನು ಕಮ್ಮಿ ಮಾಡೋಕೆ ಸಾಧ್ಯವಿಲ್ಲ. ಡಿ ಬಾಸ್​ಗೆ ಒಳ್ಳೇದಾದ್ರೆ ಸಾಕು. ಆ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಕಂಡಿತಾ ಇರುತ್ತೆ. ಒಳ್ಳೇದಾಗಲಿ ನಿರಪರಾಧಿಯಾಗಿ ಹೊರಗಡೆ ಬರಲಿ, ಕೊನೆ ಉಸಿರು ಇರೋವರೆಗೂ ಡಿ ಬಾಸ್ ಅವರನ್ನು ಬಿಡೋದಿಲ್ಲ ಅಂತಾ ಕಾಮೆಂಟ್ಸ್​ ಹಾಕಿ ದರ್ಶನ್​ ಪತ್ನಿ ವಿಜಯಲಕ್ಷ್ಮಿಗೆ ಧೈರ್ಯ ತುಂಬುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us