/newsfirstlive-kannada/media/post_attachments/wp-content/uploads/2025/04/RAHUL_KOHLI.jpg)
ಚಿನ್ನಸ್ವಾಮಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸತತ 2ನೇ ಬಾರಿ ಸೋಲು ಅನುಭವಿಸಿದೆ. ಗುಜರಾತ್ ಮತ್ತು ಡೆಲ್ಲಿ ವಿರುದ್ಧ ತವರಿನಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದ ಆರ್ಸಿಬಿ, ಇದೀಗ ಸೋಲಿಗೆ ಬ್ಲೇಮ್ ಗೇಮ್ ಶುರು ಮಾಡಿದೆ. ಅಷ್ಟಕ್ಕೂ ಆರ್ಸಿಬಿ ಮ್ಯಾನೇಜ್ಮೆಂಟ್ ಮಾಡ್ತಿರೋ ಆರೋಪ ಏನು?. ಬೆಂಗಳೂರು ತಂಡದ ಸೋಲಿಗೆ ಹೊಣೆ ಯಾರು?.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ಗಳ ಮುಖಭಂಗ..!
ತವರಿನಲ್ಲಿ ಸತತ 2 ಪಂದ್ಯಗಳ ಸೋಲಿನ ಬಳಿಕ, ಆರ್ಸಿಬಿ ಮ್ಯಾನೇಜ್ಮೆಂಟ್ ರೊಚ್ಚಿಗೆದ್ದಿದೆ. AWAY ಮ್ಯಾಚ್ಗಳನ್ನ ಸುಲಭವಾಗಿ ಗೆಲ್ತಿರುವ ಆರ್ಸಿಬಿಗೆ, HOME ಗೇಮ್ಗಳನ್ನ ಯಾಕೆ ಗೆಲ್ಲೋಕೆ ಆಗ್ತಿಲ್ಲ..? ತಪ್ಪೆಲ್ಲಿ ಆಗ್ತಿದೆ.? ಸೋಲಿಗೆ ಕಾರಣ ಏನು?. ಹೀಗೆ ಆರ್ಸಿಬಿ ಮ್ಯಾನೇಜ್ಮೆಂಟ್, ಸಾಲು ಸಾಲು ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟಿದೆ.
ಚಿನ್ನಸ್ವಾಮಿಯಲ್ಲೇ ಆರ್ಸಿಬಿಗೆ ಸತತ ಸೋಲು ಯಾಕೆ..?
ಬೆಂಗಳೂರಿನಲ್ಲೇ ಹೋಂ ಟೀಮ್ ಆರ್ಸಿಬಿ ಸತತ 2 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ರೆ, ಹೇಗೆ ತಾನೆ ತಡೆದುಕೊಳ್ಳೋಕೆ ಆಗುತ್ತೆ ಹೇಳಿ?. ಅದ್ರಲ್ಲೂ ನಮ್ಮ ಲೋಕಲ್ ಫ್ಯಾನ್ಸ್, ಆರ್ಸಿಬಿ ಸೋಲನ್ನ ಕಂಡಿತ ಸಹಿಸಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ ಬಿಡಿ. ಆದ್ರೆ, ಸೋಲಿಗೆ ಉತ್ತರ ಹುಡುಕೋಕೆ ಹೊರಟಿರೋ ಆರ್ಸಿಬಿ ಮಾನೇಜ್ಮೆಂಟ್, ಕೊಡ್ತಿರೋ ಉತ್ತರ ಏನ್?. ಅದೇ ಬ್ಲೇಮ್ ಗೇಮ್.
ಸೋಲಿನ ಬಳಿಕ ಅಸಮಾಧಾನ ಹೊರಹಾಕಿದ ಬ್ಯಾಟಿಂಗ್ ಕೋಚ್..!
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲಿನ ಬಳಿಕ, ಆರ್ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್, ಬ್ಲೇಮ್ ಗೇಮ್ ಶುರುಮಾಡಿದ್ದಾರೆ. ನಮ್ಮ ತಂಡದ ಸೋಲಿಗೆ, ಚಿನ್ನಸ್ವಾಮಿ ಪಿಚ್ ಕಾರಣ ಅಂತ ಆರೋಪ ಮಾಡಿದ್ದಾರೆ. ಆರ್ಸಿಬಿಗೆ ಹೋಂ ಪಿಚ್ ಅಡ್ವಾಂಟೇಜ್ ಆಗಲಿಲ್ಲ ಅಂತ ದಿನೇಶ್ ಕಾರ್ತಿಕ್, ಸೋಲಿಗೆ ಪಿಚ್ ಕ್ಯೂರೇಟರ್ ಹೊಣೆ ಅಂತ ನೇರವಾಗಿ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಗೆಲುವಿಗಾಗಿ ಎದುರು ನೋಡ್ತಿರೋ ಹೈದ್ರಾಬಾದ್.. ಪಂದ್ಯ ಗೆಲ್ಲಲು ಬಂದ ಶ್ರೇಯಸ್ ಅಯ್ಯರ್ ಸೇನೆ!
ಒಳ್ಳೆ ಪಿಚ್ ಕೇಳಿದ್ವಿ..! ಕೊಟ್ಟಿಲ್ಲ..!
T20 ಕ್ರಿಕೆಟ್ ಅಂದ್ರೆ ರನ್ ನಿರೀಕ್ಷೆ ಇದ್ದೇ ಇರುತ್ತೆ. ಬ್ರಾಡ್ಕಾಸ್ಟರ್ ಮತ್ತು ಕ್ರಿಕೆಟ್ ಫ್ಯಾನ್ಸ್ ಇದನ್ನೇ ನಿರೀಕ್ಷಿಸುತ್ತಾರೆ. ಎಲ್ಲರೂ ಬೌಂಡರಿಗಳನ್ನ ನೋಡೋಕೆ ಇಷ್ಟ ಪಡ್ತಾರೆ. ನಾವು ಮೊದಲೆರೆಡು ಪಂದ್ಯಗಳಲ್ಲಿ ಒಳ್ಳೆ ಪಿಚ್ಗಳನ್ನ ಕೇಳಿದ್ವಿ. ಆದ್ರೆ ಕ್ಯೂರೇಟರ್ ಇದನ್ನ ತಳ್ಳಿಹಾಕಿದ್ರು. ರನ್ಗಳಿಸೋಕೆ ಬ್ಯಾಟರ್ಸ್ ಸಿಕ್ಕಾಪಟ್ಟೆ ಪರದಾಡಿದ್ರು.
ದಿನೇಶ್ ಕಾರ್ತಿಕ್, ಆರ್ಸಿಬಿ ಮೆಂಟರ್
ಬ್ಯಾಟಿಂಗ್ ಕೋಚ್, ಮೆಂಟರ್ ದಿನೇಶ್ ಕಾರ್ತಿಕ್ ಆರೋಪ ಸರಿನಾ..?
ಕೊಲ್ಕತ್ತಾ ನೈಟ್ರೈಡರ್ಸ್ ನಾಯಕ ಅಜಿಂಕ್ಯಾ ರಹಾನೆ ಸಹ, ಕೆಕೆಆರ್ ತವರಿನಲ್ಲಿ ಸೋಲೋದಕ್ಕೆ ಪಿಚ್ ಕ್ಯೂರೇಟರ್ನತ್ತ ಬೆಟ್ಟು ಮಾಡಿದ್ರು. ಚೆನ್ನೈ ಸೂಪರ್ಕಿಂಗ್ಸ್ ಕೋಚ್ ಸ್ಟೀಫನ್ ಫ್ಲೆಮಿಂಗ್ ಸಹ, ನಮಗೆ ಹೋಂ ಅಡ್ವಾಂಟೇಜ್ ಸಿಗ್ತಿಲ್ಲ. ಪಿಚ್ ಹೋಂ ಟೀಮ್ಗೆ ನೆರವಾಗ್ತಿಲ್ಲ ಅಂತ ಹೇಳಿದ್ರು. ಇದೀಗ ಆರ್ಸಿಬಿ ಬ್ಯಾಟಿಂಗ್ ಕೋಚ್ ಌಂಡ್ ಮೆಂಟರ್ ದಿನೇಶ್ ಕಾರ್ತಿಕ್ ಸಹ, ಇದೇ ಮಾತನ್ನ ಹೇಳ್ತಿದ್ದಾರೆ. ಅಷ್ಟಕ್ಕೂ ಡಿಕೆ ಆರೋಪ ಸರಿನಾ?.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ