newsfirstkannada.com

ಹಿಂದೂ ಧರ್ಮದ ವಿವಾಹಿತ ಮಹಿಳೆ ಹಣೆಗೆ ಸಿಂಧೂರ ಇಡುವುದು ಆಕೆಯ ಕರ್ತವ್ಯ -ಕೋರ್ಟ್ ಅಭಿಪ್ರಾಯ

Share :

Published March 23, 2024 at 8:00am

Update March 23, 2024 at 8:20am

    ಪತ್ನಿ ಮನೆಗೆ ವಾಪಸ್ ಬರುವಂತೆ ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿ

    ಕೂಡಲೇ ಗಂಡನ ಮನೆಗೆ ವಾಪಸ್ ಆಗುವಂತೆ ಕೋರ್ಟ್​ ಸೂಚನೆ

    ಕೋರ್ಟ್​ನಲ್ಲಿ ಆ ಮಹಿಳೆ ಒಪ್ಪಿಕೊಂಡ ಸತ್ಯ ಏನು ಗೊತ್ತಾ..?

ಸಂಪ್ರದಾಯದಂತೆ ಹಣೆಗೆ ಸಿಂಧೂರ ಇಟ್ಟುಕೊಳ್ಳುವುದು ಹಿಂದೂ ಕುಟುಂಬದ ವಿವಾಹಿತ ಮಹಿಳೆಯ ಕರ್ತವ್ಯ. ಹೆಣ್ಣಿಗೆ ಸಿಂಧೂರ ಮದುವೆ ಆಗಿರುವ ಸಂಕೇತವನ್ನು ಸೂಚಿಸುತ್ತದೆ ಎಂದು ಮಧ್ಯಪ್ರದೇಶದ ಕೌಟುಂಬಿಕ ನ್ಯಾಯಾಲಯ ಆದೇಶ ನೀಡಿದೆ.

ಜೊತೆಗೆ ಇಂಥ ವಿಚಾರಕ್ಕೆಲ್ಲ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂಬುವುದಾಗಿಯೂ ಕೋರ್ಟ್​ ಹೇಳಿದೆ. ತಮ್ಮನ್ನು ತ್ಯಜಿಸಿದ್ದ ಪತ್ನಿಯನ್ನು ವಾಪಸ್ ಮನಗೆ ಕರೆಸಿಕೊಳ್ಳುವುದಕ್ಕೆ ಹಿಂದೂ ವಿವಾಹ ಕಾಯ್ದೆಯಡಿ ಅನುವು ಮಾಡಿಕೊಡುವಂತೆ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಜೊತೆಗೆ ನೀವು ಗಂಡನ ಮನೆಗೆ ವಾಪಸ್ ಆಗಬೇಕು, ವಾಪಸ್ ಆಗುತ್ತಿದ್ದಂತೆಯೇ, ಸಂಪ್ರದಾಯದಂತೆ ಹಣೆಗೆ ಸಿಂಧೂರ ಇಟ್ಟುಕೊಳ್ಳಬೇಕು ಎಂದು ಕೋರ್ಟ್ ಹೇಳಿದೆ. ಕೌಟುಂಬಿಕ ನ್ಯಾಯಾಲಯದ ಪ್ರಿನ್ಸಿಪಾಲ್ ಜಡ್ಜ್, ಎನ್​ಪಿ ಸಿಂಗ್ ಈ ಆದೇಶ ನೀಡಿದ್ದಾರೆ.

ಏನಿದು ಪ್ರಕರಣ..?
ಇಂದೋರ್​​ನ ವ್ಯಕ್ತಿಯೊಬ್ಬರು ಮಹಿಳೆಯೊಬ್ಬರನ್ನು ಮದುವೆ ಆಗಿದ್ದರು. ಐದು ವರ್ಷಗಳ ಕಾಲ ಸಂಸಾರ ಮಾಡಿ ನಂತರ ಗಂಡನ ಮನೆಬಿಟ್ಟು ಹೋಗಿದ್ದಳು. ಸಂತ್ರಸ್ತ ಪತಿ ಹಿಂದೂ ಮ್ಯಾರೇಜ್ ಆ್ಯಕ್ಟ್ ಅಡಿ, ನನ್ನ ಪತ್ನಿ ಮನೆಗೆ ವಾಪಸ್ ಕರೆಸಿಕೊಳ್ಳಲು ಅನುವು ಮಾಡಿಕೊಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಸಂಗೀತ ಸಮ್ಮೇಳನದಲ್ಲಿ ಉಗ್ರರ ಪೈಶಾಚಿಕ ಕೃತ್ಯ.. 60 ಮಂದಿ ದಾರುಣ ಸಾವು, 145ಕ್ಕೂ ಹೆಚ್ಚು ಜನ ಗಂಭೀರ

ವಿಚಾರಣೆ ನಡೆಸಿದ ಜಡ್ಜ್, ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡರು. ಈ ಸಂದರ್ಭದಲ್ಲಿ ಆಕೆ ಹಣೆಗೆ ಸಿಂಧೂರವನ್ನು ಇಟ್ಟುಕೊಂಡಿರಲಿಲ್ಲ. ಜೊತೆಗೆ ಗಂಡನ ಮನೆಯಲ್ಲಿ ಸಿಂಧೂರ ಇಟ್ಟುಕೊಂಡಿರಲಿಲ್ಲ ಎಂಬುವುದನ್ನು ಕೋರ್ಟ್​ನಲ್ಲಿ ಒಪ್ಪಿಕೊಂಡಿದ್ದಾಳೆ. ಅದಕ್ಕೆ ಹಿಂದೂ ಧರ್ಮದಲ್ಲಿ ಸಾಂಪ್ರದಾಯಿಕವಾಗಿ ಸಿಂಧೂರ ಇಟ್ಟುಕೊಳ್ಳುವುದು ಪತ್ನಿಯ ಕರ್ತವ್ಯ. ಅದು (ಸಿಂಧೂರ) ನೀವು ಮದುವೆ ಆಗಿರೋದನ್ನು ತೋರಿಸುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಿಂದೂ ಧರ್ಮದ ವಿವಾಹಿತ ಮಹಿಳೆ ಹಣೆಗೆ ಸಿಂಧೂರ ಇಡುವುದು ಆಕೆಯ ಕರ್ತವ್ಯ -ಕೋರ್ಟ್ ಅಭಿಪ್ರಾಯ

https://newsfirstlive.com/wp-content/uploads/2023/06/Consumer-Court.jpg

Load More