/newsfirstlive-kannada/media/post_attachments/wp-content/uploads/2024/05/DHONI_VIRAT.jpg)
ನಾಳೆ ಚಿನ್ನಸ್ವಾಮಿ ಮೈದಾನ RCB vs CSK ನಡುವಿನ ರಣರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಫ್ಯಾನ್ಸ್ ಅಂತೂ ಈ ಪಂದ್ಯಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಆರ್ಸಿಬಿ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ತಂಡ ಪ್ಲೇಆಪ್ ಹಾದಿ ಹಿಡಿಯಲಿ ಎಂಬ ಬಯಕೆ ಇದೆ. ಅಲ್ಲದೇ ಚೆನ್ನೈ ತಂಡ ಜಯ ಗಳಿಸಲಿ ಎನ್ನುವುದು ಫ್ಯಾನ್ಸ್ ವಲಯದಲ್ಲಿದೆ. ಆದರೆ ಈ ಎಲ್ಲದರ ನಡುವೆ ಮಳೆ ಬರುವ ಮುನ್ಸೂಚನೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಎಂ.ಚಿನ್ನಸ್ವಾಮಿಯಲ್ಲಿ ನಡೆಯುವ ಪಂದ್ಯ ಚೆನ್ನೈ ಮತ್ತು ಆರ್ಸಿಬಿ ಈ ಎರಡು ತಂಡಗಳಿಗೂ ತುಂಬಾ ಮುಖ್ಯವಾಗಿದೆ. ಆದರೆ ಭಾರತದ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ ಶೇ.99 ರಷ್ಟು ಸಿಲಿಕಾನ್ ಸಿಟಿಯೆಲ್ಲ ಮೋಡಕವಿದ ವಾತಾವರಣದಿಂದ ಇರಲಿದೆಯಂತೆ. ಅಲ್ಲದೇ ಮಳೆ ಸುರಿಯುವ ಸಾಧ್ಯತೆ ಶೇಕಡಾ 78 ರಷ್ಟು ಇದೆ. ಚಂಡಮಾರುತ ಸಮೇತ ಧಾರಾಕಾರವಾದ ಮಳೆ ಬಂರುವುದರಿಂದ ಪಂದ್ಯಕ್ಕೆ ಅಡ್ಡಿಯಾಗಲಿದೆ. ಇದರಿಂದ ಲಕ್ಷಂತಾರಾ ಅಭಿಮಾನಿಗಳ ಕನಸು ನುಚ್ಚುನೂರು ಆಗಲಿದೆ. ಶೇ.90 ರಷ್ಟು ಸಂಜೆ ವೇಳೆಗೆ ವರುಣ ಆರ್ಭಟ ಮಾಡುವುದು ಪಕ್ಕಾ ಎಂದು ಐಎಂಡಿ ಮಾಹಿತಿ ನೀಡಿದೆ.
ಇದನ್ನೂ ಓದಿ:ಚೆನ್ನೈ ವಿರುದ್ಧ RCB ಗೆದ್ರೆ ಕೆಎಲ್ ರಾಹುಲ್ ಟೀಮ್ ಪ್ಲೇ ಆಫ್ಗೆ ಹೋಗೋ ಚಾನ್ಸ್ ಇದೆ.. ಹೇಗೆ?
ಇದರ ಜೊತೆಗೆ ನಾಳೆ ಆರ್ಸಿಬಿ ಮತ್ತು ಚೆನ್ನೈ ತಂಡಗಳು ಪ್ಲೇ ಆಫ್ಗೆ ಹೋಗಲು ಭಾರೀ ಪೈಪೋಟಿ ನಡೆಸಲಿವೆ. ಈ ಪಂದ್ಯದಲ್ಲಿ ಚೆನ್ನೈ ಅನ್ನು ಬೆಂಗಳೂರು ಟೀಮ್ ಕಡಿಮೆ ಪ್ರಮಾಣದ ರನ್ ರೇಟ್ನಿಂದ ಸೋಲಿಸಿತು ಎಂದರೆ ಅದು ಲಕ್ಲೋ ಟೀಮ್ಗೆ ಲಾಭವಾಗಲಿದೆ. ಈ ವೇಳೆ ಚೆನ್ನೈ, ಬೆಂಗಳೂರು ಹಾಗೂ ಲಕ್ನೋ ತಂಡಗಳ ರನ್ ರೇಟ್ ಅನ್ನು ಗಣನೆಗೆ ತೆಗೆದುಕೊಂಡು ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ