ಈ ಬೆಂಗಳೂರಿಗೆ ಏನಾಗಿದೆ..? ಒಂದು ದಿನ ರಣ ಮಳೆ, ಮತ್ತೊಂದು ದಿನ ಬಿರು ಬಿಸಿಲು! ವೈದ್ಯರಿಂದ ಎಚ್ಚರಿಕೆ..!

author-image
Veena Gangani
Updated On
ಈ ಬೆಂಗಳೂರಿಗೆ ಏನಾಗಿದೆ..? ಒಂದು ದಿನ ರಣ ಮಳೆ, ಮತ್ತೊಂದು ದಿನ ಬಿರು ಬಿಸಿಲು! ವೈದ್ಯರಿಂದ ಎಚ್ಚರಿಕೆ..!
Advertisment
  • ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಕಾಡುತ್ತಿರುವ ವೈರಲ್ ಫೀವರ್
  • ಸಾಲು ಸಾಲು ರಜೆ ಇದ್ದರೂ ಎಂಜಾಯ್ ಮಾಡದ ರಾಜಧಾನಿ ಜನ
  • ಸಿಲಿಕಾನ್ ಸಿಟಿಯ ಬದಲಾಗುವ ಹವಾಮಾನದಿಂದ ಜನ ಹೈರಾಣು

ಬೆಂಗಳೂರು: ಕಳೆದ ಒಂದು ವಾರದಿಂದ ಸಿಲಿಕಾನ್​ ಸಿಟಿಯಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದೆ. ಒಂದು ದಿನ ರಣಭೀಕರ ಮಳೆ, ಮತ್ತೊಂದು ದಿನ ಬಿರು ಬಿಸಿಲಿನ ಜೊತೆಗೆ ಮತ್ತೆ ಮೋಡ ಕವಿದ ವಾತಾವರಣ. ಸಿಲಿಕಾನ್ ಸಿಟಿಯ ಬದಲಾಗುವ ಹವಾಮಾನದಿಂದ ಜನ ಹೈರಾಣಾಗಿದ್ದಾರೆ.

publive-image

ಇದನ್ನೂ ಓದಿ:ಮದುವೆ ಆದ ಹೊಸ ಜೋಡಿ ತಿನ್ನಲೇಬೇಕು ಈ ಪಾನ್​​.. ಅಬ್ಬಬ್ಬಾ! ಇದರ ಬೆಲೆ 1 ಲಕ್ಷ ರೂ!

ಸಾಲು ಸಾಲು ರಜೆ ಇದ್ದರೂ ಕೂಡ ಸಿಲಿಕಾನ್​ ಸಿಟಿ ಮಂದಿಗೆ ಎಂಜಾಯ್ ಮಾಡುವ ಭಾಗ್ಯ ಇಲ್ಲ. ರಾಜಧಾನಿ ಬೆಂಗಳೂರಿನಲ್ಲಿ ಹವಾಮಾನ ಬದಲಾವಣೆ ಪರಿಣಾಮದಿಂದ ಜನ ತತ್ತರಿಸಿ ಹೋಗಿದ್ದಾರೆ. ವೈರಲ್‌ ಫೀವರ್‌ ಹಾವಳಿ ಹೆಚ್ಚಳ ಆಗಿರುವುದರಿಂದ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಬಿಟ್ಟೂ ಬಿಡದೇ ಜನರಲ್ಲಿ ತೀವ್ರ ಚಳಿ, ಜ್ವರ ಕೆಮ್ಮು ಮುಂತಾದ ಲಕ್ಷಣಗಳು ಕಂಡು ಬರುತ್ತಿವೆ. ಹೀಗಾಗಿ ನಗರದ ಕೆಸಿ ಜನರಲ್‌, ಬೌರಿಂಗ್‌, ವಿಕ್ಟೋರಿಯಾ ಆಸ್ಪತ್ರೆಯ ಮುಂದೆ ಕಳೆದ ಒಂದು ವಾರದಿಂದ ರೋಗಿಗಳ ಸಂಖ್ಯೆ ಡಬಲ್ ಆಗಿದೆ.

publive-image

ವೈದ್ಯರು ಕೊಟ್ಟ ಸಲಹೆ ಏನು?

ಅನೇಕರು ವೈದ್ಯರ ಬಳಿ ಹೋಗದೇ ಮೆಡಿಕಲ್‌ಗಳಿಗೆ ತೆರಳಿ ಸ್ವಯಂ ಔಷಧ ಪಡೆದುಕೊಳ್ಳುತ್ತಿರುವುದರಿಂದ ಬೇರೆ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಿವೆ. ಕಳೆದ ಒಂದು ವಾರದಿಂದ ಋತುಮಾನದ ಕಾಯಿಲೆಗಳಾದ ನೆಗಡಿ, ಕೆಮ್ಮು, ವೈರಲ್‌ ಜ್ವರ ಡಬಲ್ ಆಗಿದೆ. ಇದು ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕೂಡಲೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ ಎಂದು ತಜ್ಞ ವೈದ್ಯರಾದ ಶರದ್ ಕುಲಕರ್ಣಿ ಸಲಹೆ ನೀಡಿದ್ದಾರೆ .

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment