ನಾಳೆ ಬದ್ಧ ಎದುರಾಳಿಗಳು ಮುಖಾಮುಖಿ.. ಬೆಂಗಳೂರು V/s ಚೆನ್ನೈ ಕಾಳಗಕ್ಕೆ ಅಡ್ಡಿಯಾಗುತ್ತಾ ಮಳೆ?

author-image
Gopal Kulkarni
Updated On
ನಾಳೆ ಬದ್ಧ ಎದುರಾಳಿಗಳು ಮುಖಾಮುಖಿ.. ಬೆಂಗಳೂರು V/s ಚೆನ್ನೈ ಕಾಳಗಕ್ಕೆ ಅಡ್ಡಿಯಾಗುತ್ತಾ ಮಳೆ?
Advertisment
  • ನಾಳೆ ಚೆನ್ನೈ-ಬೆಂಗಳೂರು ತಂಡಗಳ ಮೊದಲ ಮುಖಾಮುಖಿ ಪಂದ್ಯ
  • ಬದ್ಧ ವೈರಿಗಳ ಕಾದಾಟಕ್ಕೆ ಅಡ್ಡಿಯಾಗುತ್ತಾನಾ ವರುಣರಾಯ? ಆತಂಕ
  • ಚೆನ್ನೈ ಹವಾಮಾನದ ಬಗ್ಗೆ ತಜ್ಞರು ಹೇಳುತ್ತಿರುವುದು ಏನು? ಏನಾಗಲಿದೆ?

ಐಪಿಎಲ್​2025ರ ಪಂದ್ಯಾವಳಿಗಳಲ್ಲಿ ಮೊದಲ ಬಾರಿಗೆ ಬದ್ಧ ವೈರಿಗಳಾದ ಚೆನ್ನೈ ಮತ್ತು ಬೆಂಗಳೂರು ನಾಳೆ ಚೆನ್ನೈ ಅಂಗಳದಲ್ಲಿ ಎದುರಾಬದುರು ಆಗಲಿವೆ. ಬದ್ಧ ವೈರಿಗಳ ಕಾದಾಟವನ್ನು ಕಣ್ತುಂಬಿಕೊಳ್ಳಲು ಉಭಯ ತಂಡದ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದ ಬಗ್ಗೆ ಭಾರೀ ನಿರೀಕ್ಷೆಗಳು ಗರಿಗೆದರಿವೆ. ನಾಳೆ ಸಂಜೆ 7.30ಕ್ಎಕ ಪಂದ್ಯ ಆರಂಭವಾಗಲಿದೆ.

ಇದನ್ನೂ ಓದಿ:ಅನುಮತಿ ಇಲ್ಲದೇ ಕೊಹ್ಲಿ ಪರ್ಫ್ಯೂಮ್ ಸ್ಪ್ರೇ.. RCB ಯಂಗ್ ಪ್ಲೇಯರ್ ವರ್ತನೆಗೆ ಎಲ್ರೂ ಶಾಕ್!

ಸದ್ಯ ಚಿದಂಬರಂ ಮೈದಾನದ ಪಿಚ್​ನ್ನು ಹಿಂದಿನ ಪಂದ್ಯಗಳಿಗೆ ಹೋಲಿಸಿ ನೋಡಿದರೆ ಇದು ಬೌಲರ್ ಸ್ನೇಹಿ ಪಿಚ್​. ಬೌಲರ್​​ಗಳು ಹೆಚ್ಚು ಮೇಲುಗೈ ಸಾಧಿಸಿದ ಉದಾಹರಣೆಗಳು ಈ ಪಿಚ್​ನಲ್ಲಿ ಕಂಡು ಬಂದಿವೆ. ಫೇಸರ್​​ಗಳು ಅಪಾಯಕಾರಿಯಾಗುವ ಸಾಧ್ಯತೆ ಇದೆ. ಆದ್ರೆ ಈ ಪಿಚ್ ಬ್ಯಾಟರ್ಸ್​ಗಳಿಗೂ ಕೂಡ ಅಷ್ಟೇ ಅನಕೂಲಕರವಾಗಿದೆ. ಸ್ಪಿನ್ನರ್​ಗಳು ಕಣಕ್ಕಿಳಿದಾಗ ಮತ್ತು ಎರಡನೇ ಇನ್ನಿಂಗ್ಸ್​ ಆಡುವಾಗ ಪಿಚ್​​ನ ಮೇಲ್ಮೈ ಬದಲಾವಣೆಯಾಗಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್​ಗೆ ಎರಡಕ್ಕೂ ಅನುಕೂಲಕರವಾಗುವ ಸಮತೋಲನವನ್ನು ಈ ಪಿಚ್ ಹೊಂದಿದೆ.

ಇದನ್ನೂ ಓದಿ: ಸುವರ್ಣಾವಕಾಶ ಕೈ ಚೆಲ್ಲಿದ ಕನ್ನಡಿಗ ಪಡಿಕ್ಕಲ್​​; ಚೆನ್ನೈ ವಿರುದ್ಧ ಆಡಲು ಅವಕಾಶ ಸಿಗೋದು ಡೌಟ್​

ಇನ್ನು ನಾಳೆ ನಡೆಯಲಿರುವ ಚೆನ್ನೈ ಮತ್ತು ಬೆಂಗಳೂರು ತಂಡಗಳ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆ ಎಂಬ ಆತಂಕವೊಂದು ಕಾಡುತ್ತಿದೆ. ಆದ್ರೆ ತಜ್ಞರು ಹೇಳುವ ಪ್ರಕಾರ ಹವಾಮಾನ ಪಂದ್ಯಕ್ಕೆ ಅನುಕೂಲಕರವಾಗಿಯೇ ಇದೆ. ಆದ್ರೆ ಕೇವಲ ಶೇಕಡಾ 5 ರಷ್ಟು ಪಂದ್ಯಕ್ಕೆ ಅಡ್ಡಿಯಾಗುವ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಸದ್ಯ ಚೆನ್ನೈನಲ್ಲಿ 28 ಡಿಗ್ರಿ ಸೆಲ್ಸಿಯಸ್​ನಿಂದ 32 ಡಿಗ್ರಿಸೆಲ್ಸ್​​ನಷ್ಟು ತಾಪಮಾನವಿದೆ. ಈ ಒಂದು ಹವಾಮಾನ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆಯ ತಜ್ಞರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment