/newsfirstlive-kannada/media/post_attachments/wp-content/uploads/2024/06/IND_PAK.jpg)
ಇಂಡಿಯಾ-ಪಾಕ್ ಕಾದಾಟಕ್ಕೆ ಕ್ಷಣಗಣನೆ ಶುರುವಾಗಿದೆ. ಮೆಗಾ ಬ್ಯಾಟಲ್ಗೆ ಇನ್ನೇನು ಒಂದು ದಿನ ಬಾಕಿ ಇದ್ದು, ಎಲ್ಲರ ಫೋಕಸ್ ಭಾರತ-ಪಾಕ್ ಪಂದ್ಯದ ಮೇಲೆ ಶಿಫ್ಟ್ ಆಗಿದೆ. ಇದಕ್ಕೆ ಕಾರಣವೂ ಇದ್ದು ಈ ಹಿಂದಿನ ಹಲವಾರು ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಭಾರತವೇ ಮೃಲುಗೈ ಸಾಧಿಸಿದೆ. ಈ ಹೈವೋಲ್ಟೇಜ್ ಮ್ಯಾಚ್ಗೆ ವರುಣ ಅಡ್ಡಿ ಪಡಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿಖರವಾದ ಮಾಹಿತಿ ಏನು ಹೇಳುತ್ತದೆ ಎಂಬುದರ ಬಗ್ಗೆ ವಿವರ ಇಲ್ಲಿದೆ.
ಈಗಾಗಲೇ ರೋಹಿತ್ ಶರ್ಮಾ ಪಡೆ ಒಂದು ಪಂದ್ಯದಲ್ಲಿ ವಿನ್ ಆಗಿದ್ದರೇ ಅತ್ತ ಬಾಬರ್ ಸೇನೆ ಅಮೆರಿಕ ವಿರುದ್ಧ ನೆಲಕಚ್ಚಿ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಹೀಗಿರುವಾಗಲೇ ನಾಳೆ ರಾತ್ರಿ 8 ಗಂಟೆಗೆ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಅಖಾಡಕ್ಕೆ ಇಳಿಯುತ್ತದೆ. ನ್ಯೂಯಾರ್ಕ್ನ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದ್ದು ಅಮೆರಿಕದ್ಯಾಂತ ಮಳೆ ಆಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಕ್ರಿಕೆಟ್ ಫ್ಯಾನ್ಸ್ಗೆ ಬೇಸರ ಉಂಟಾಗಿದೆ. ಆದರೆ ಇಂಡಿಯಾ-ಪಾಕ್ ಪಂದ್ಯ ನಡೆಯುವಾಗ ಮಳೆ ಬರುವ ಸಂಭವ ಶೇಕಡಾ 50 ರಷ್ಟು ಇದೆ.
ಇದನ್ನೂ ಓದಿ:ಬ್ಯೂಟಿ ಕೃತಿ ಶೆಟ್ಟಿ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲ್ಲ ಅಂದಿದ್ದೇಕೆ ವಿಜಯ್ ಸೇತುಪತಿ; ಸೀಕ್ರೆಟ್ ರಿವೀಲ್!
ನ್ಯೂಯಾರ್ಕ್‌ನಲ್ಲಿ ಹವಾಮಾನವು ಸ್ಥಳೀಯ ಸಮಯ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2ರ ವರೆಗೆ ಮೋಡ ಕವಿದ ವಾತವರಣದ ಜೊತೆ ಸ್ವಲ್ಪ ಬಿಸಿಲಿನಿಂದ ಕೂಡಿರುತ್ತದೆ. ಬಳಿಕ ಮೋಡ ಕವಿದ ವಾತವರಣ ಇರುತ್ತದೆ. ಈ ಸಮಯದ ತಾಪಮಾನ 17-25 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ಶೇಕಡಾ 50 ರಷ್ಟು ಮಳೆ ಆಗುವ ಸಾಧ್ಯತೆ ಇದೆ. ಒಂದು ವೇಳೆ ಪಂದ್ಯ ಮಳೆಯಿಂದ ರದ್ದಾದ್ರೆ ಎರಡು ತಂಡಗಳಿಗೆ ಒಂದೊಂದು ಅಂಕ ನೀಡಲಾಗುತ್ತದೆ. T20 ಪಂದ್ಯವಾಗಿದ್ದರಿಂದ ಸಮಯ ನೋಡಿಕೊಂಡು ಸೂಪರ್ ಓವರ್ ಆಡಿಸಿ ಸೋಲು ಗೆಲುವನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಲಾಗ್ತಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವುದು ಬಹುತೇಕವಾಗಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಹೇಳುತ್ತದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ