newsfirstkannada.com

IND vs PAK: ಭಾರತ-ಪಾಕ್​ ಹೈವೋಲ್ಟೇಜ್ ಪಂದ್ಯ ರದ್ದಾಗುತ್ತಾ? ನಾಳೆ ಮ್ಯಾಚ್ ನಡೆಯದಿದ್ರೆ ಏನ್ ಆಗುತ್ತೆ?

Share :

Published June 8, 2024 at 5:19pm

    ಈಗಾಗಲೇ ಪಂದ್ಯಕ್ಕಾಗಿ ಕಾದು ಕುಳಿತಿರುವ ಕ್ರಿಕೆಟ್​ ಅಭಿಮಾನಿಗಳು

    ಪಾಕ್-ಭಾರತ ನಡುವಿನ ಮ್ಯಾಚ್ ನಾಳೆ ಎಲ್ಲಿ ನಡೆಯುತ್ತದೆ ಗೊತ್ತಾ?

    ಅಮೆರಿಕದಲ್ಲಿ ಭಾರತ- ಪಾಕ್ ನಡುವಿನ ಹೈವೋಲ್ಟೇಜ್ ಪಂದ್ಯ

ಇಂಡಿಯಾ-ಪಾಕ್​ ಕಾದಾಟಕ್ಕೆ ಕ್ಷಣಗಣನೆ ಶುರುವಾಗಿದೆ. ಮೆಗಾ ಬ್ಯಾಟಲ್​​ಗೆ ಇನ್ನೇನು ಒಂದು ದಿನ ಬಾಕಿ ಇದ್ದು, ಎಲ್ಲರ ಫೋಕಸ್​​​ ಭಾರತ-ಪಾಕ್​ ಪಂದ್ಯದ ಮೇಲೆ ಶಿಫ್ಟ್ ಆಗಿದೆ. ಇದಕ್ಕೆ ಕಾರಣವೂ ಇದ್ದು ಈ ಹಿಂದಿನ ಹಲವಾರು ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಭಾರತವೇ ಮೃಲುಗೈ ಸಾಧಿಸಿದೆ. ಈ ಹೈವೋಲ್ಟೇಜ್ ಮ್ಯಾಚ್​ಗೆ ವರುಣ ಅಡ್ಡಿ ಪಡಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿಖರವಾದ ಮಾಹಿತಿ ಏನು ಹೇಳುತ್ತದೆ ಎಂಬುದರ ಬಗ್ಗೆ ವಿವರ ಇಲ್ಲಿದೆ.

ಈಗಾಗಲೇ ರೋಹಿತ್ ಶರ್ಮಾ ಪಡೆ ಒಂದು ಪಂದ್ಯದಲ್ಲಿ ವಿನ್ ಆಗಿದ್ದರೇ ಅತ್ತ ಬಾಬರ್ ಸೇನೆ ಅಮೆರಿಕ ವಿರುದ್ಧ ನೆಲಕಚ್ಚಿ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಹೀಗಿರುವಾಗಲೇ ನಾಳೆ ರಾತ್ರಿ 8 ಗಂಟೆಗೆ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಅಖಾಡಕ್ಕೆ ಇಳಿಯುತ್ತದೆ. ನ್ಯೂಯಾರ್ಕ್​​ನ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದ್ದು ಅಮೆರಿಕದ್ಯಾಂತ ಮಳೆ ಆಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಕ್ರಿಕೆಟ್​ ಫ್ಯಾನ್ಸ್​​ಗೆ ಬೇಸರ ಉಂಟಾಗಿದೆ. ಆದರೆ ಇಂಡಿಯಾ-ಪಾಕ್ ಪಂದ್ಯ ನಡೆಯುವಾಗ ಮಳೆ ಬರುವ ಸಂಭವ ಶೇಕಡಾ 50 ರಷ್ಟು ಇದೆ.

ಇದನ್ನೂ ಓದಿ: ಬ್ಯೂಟಿ ಕೃತಿ ಶೆಟ್ಟಿ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲ್ಲ ಅಂದಿದ್ದೇಕೆ ವಿಜಯ್ ಸೇತುಪತಿ; ಸೀಕ್ರೆಟ್ ರಿವೀಲ್‌!

ನ್ಯೂಯಾರ್ಕ್‌ನಲ್ಲಿ ಹವಾಮಾನವು ಸ್ಥಳೀಯ ಸಮಯ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2ರ ವರೆಗೆ ಮೋಡ ಕವಿದ ವಾತವರಣದ ಜೊತೆ ಸ್ವಲ್ಪ ಬಿಸಿಲಿನಿಂದ ಕೂಡಿರುತ್ತದೆ. ಬಳಿಕ ಮೋಡ ಕವಿದ ವಾತವರಣ ಇರುತ್ತದೆ. ಈ ಸಮಯದ ತಾಪಮಾನ 17-25 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ಶೇಕಡಾ 50 ರಷ್ಟು ಮಳೆ ಆಗುವ ಸಾಧ್ಯತೆ ಇದೆ. ಒಂದು ವೇಳೆ ಪಂದ್ಯ ಮಳೆಯಿಂದ ರದ್ದಾದ್ರೆ ಎರಡು ತಂಡಗಳಿಗೆ ಒಂದೊಂದು ಅಂಕ ನೀಡಲಾಗುತ್ತದೆ. T20 ಪಂದ್ಯವಾಗಿದ್ದರಿಂದ ಸಮಯ ನೋಡಿಕೊಂಡು ಸೂಪರ್ ಓವರ್​ ಆಡಿಸಿ ಸೋಲು ಗೆಲುವನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಲಾಗ್ತಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವುದು ಬಹುತೇಕವಾಗಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಹೇಳುತ್ತದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IND vs PAK: ಭಾರತ-ಪಾಕ್​ ಹೈವೋಲ್ಟೇಜ್ ಪಂದ್ಯ ರದ್ದಾಗುತ್ತಾ? ನಾಳೆ ಮ್ಯಾಚ್ ನಡೆಯದಿದ್ರೆ ಏನ್ ಆಗುತ್ತೆ?

https://newsfirstlive.com/wp-content/uploads/2024/06/IND_PAK.jpg

Load More