Advertisment

‘ಆ ಸ್ಟಾರ್​ ನಟ ಬೇರೆ ಮಹಿಳೆ ಜೊತೆ ಬೆತ್ತಲೆಯಾಗಿ ಸಿಕ್ಕಿಬಿದ್ದಿದ್ದ’- ವೆಡ್ಡಿಂಗ್​ ಫೋಟೋಗ್ರಾಫರ್​ ಬಿಚ್ಚಿಟ್ಟ ಸತ್ಯ!

author-image
Veena Gangani
Updated On
‘ಆ ಸ್ಟಾರ್​ ನಟ ಬೇರೆ ಮಹಿಳೆ ಜೊತೆ ಬೆತ್ತಲೆಯಾಗಿ ಸಿಕ್ಕಿಬಿದ್ದಿದ್ದ’- ವೆಡ್ಡಿಂಗ್​ ಫೋಟೋಗ್ರಾಫರ್​ ಬಿಚ್ಚಿಟ್ಟ ಸತ್ಯ!
Advertisment
  • ಆ ಸ್ಟಾರ್ ​ಸೆಲೆಬ್ರಿಟಿ ದಂಪತಿ ಬಗ್ಗೆ ಅನೇಕ ಸಂಗತಿಯನ್ನು ಬಿಚ್ಚಿಟ್ಟ ವಿಶಾಲ್
  • ಸ್ಟಾರ್​ ನಟ ನಟಿಯರ ಮದುವೆ ವಿಡಿಯೋ ಮಾಡಿದ್ದ ವಿಶಾಲ್ ಪಂಜಾಬಿ
  • ವಿಶಾಲ್ ಪಂಜಾಬಿ ಹೇಳಿದ್ದ ಬಾಲಿವುಡ್ ಸ್ಟಾರ್ ದಂಪತಿ ಯಾರು ಗೊತ್ತಾ?​

ವಿಶಾಲ್ ಪಂಜಾಬಿ ಅತ್ಯಂತ ಪ್ರಸಿದ್ಧ ವೆಡ್ಡಿಂಗ್ ವಿಡಿಯೋಗ್ರಾಫರ್‌ಗಳಲ್ಲಿ ಒಬ್ಬರು. ಇವರು ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ-ರಣವೀರ್ ಸಿಂಗ್, ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ಹೀಗೆ ಸಾಕಷ್ಟು ದೊಡ್ಡ ಸ್ಟಾರ್​ ನಟ ನಟಿಯರ ಮದುವೆಯನ್ನು ರೆಕಾರ್ಡ್ ಮಾಡಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಮಾತಾಡಿದ ಅವರು ಸೆಲೆಬ್ರಿಟಿ ದಂಪತಿ ಬಗ್ಗೆ ಅನೇಕ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ.

Advertisment

publive-image

ಇದನ್ನೂ ಓದಿ: ಮಧ್ಯಮ ವರ್ಗದವರಿಗೆ ರಿಲೀಫ್.. ಹೊಸ ಆದಾಯ ತೆರಿಗೆ ನೀತಿಯಿಂದ ನಿಮಗೆ ಉಳಿತಾಯ ಎಷ್ಟು? ಹೇಗೆ?

ವಿಶಾಲ್ ಅವರು ಒಮ್ಮೆ ಬಾಲಿವುಡ್‌ನ ದೊಡ್ಡ ನಟನ ಮದುವೆ ವಿಡಿಯೋವನ್ನು ಚಿತ್ರೀಕರಿಸಿದ್ದರಂತೆ. ಆದರೆ ಹೀಗೆ ದೊಡ್ಡ ಸ್ಟಾರ್​ ನಟನ ಮದುವೆಯ ವಿಡಿಯೋವನ್ನು ಸೆರೆ ಹಿಡಿಯಲು ಹೋಗಿದ್ದಾಗ ನಡೆದ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಮಾತಾಡಿದ ವಿಶಾಲ್​​, ಆ ಸ್ಟಾರ್​ ನಟ ಮದುವೆಯಾದ ಕೇವಲ ಎರಡು ತಿಂಗಳಿಗೆ ತನ್ನ ಹೆಂಡತಿಗೆ ಮೋಸ ಮಾಡಿದ್ದಾನೆ. ಒಮ್ಮೆ ತನ್ನ ಮೇಕಪ್ ವ್ಯಾನ್‌ನಲ್ಲಿಯೇ ಸ್ಟಾರ್ ಬಾಲಿವುಡ್ ನಟಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ. ಏಕಾಏಕಿ ಅವನ ಹೆಂಡತಿ ಒಳಗೆ ನುಗ್ಗಿ ಬೆತ್ತಲೆಯಾಗಿದ್ದ ಗಂಡನನ್ನು ಹಿಡಿದು ಆ ಕೂಡಲೇ ಮದುವೆಯನ್ನೇ ಕ್ಯಾನ್ಸಲ್ ಮಾಡಿಸಿದ್ದರು. ಆಗ ಆತನ ಪತ್ನಿ ನನಗೆ ಮದುವೆಯ ವಿಡಿಯೋ ಬೇಡ ಅಂತ ಹೇಳಿಬಿಟ್ಟರು. ಆಗ ಮದುವೆಯ ದೃಶ್ಯಾವಳಿಗಳನ್ನು ಏನು ಮಾಡಬೇಕೆಂಬುದರ ನಾನು ಗೊಂದಲಕ್ಕೀಡಾದೆ ಎಂದು ಡಿಜೆ ಸಿಮ್ಜ್‌ ಸಂದರ್ಶನಲ್ಲಿ ಆ ಘಟನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಬಳಿಕ ನಾನು ಆ ಸ್ಟಾರ್​ ನಟನಿಗೆ ಕರೆ ಮಾಡುತ್ತಲೇ ಇದ್ದೆ, ಆದರೆ ಆತ ಎತ್ತುತ್ತಿರಲಿಲ್ಲ. ಆಗ ನಾನು ವಧುವಿಗೆ ಫೋನ್​ ಮಾಡಿದ್ದೆ. ಆಕೆಯು ಕೂಡ ನನ್ನೊಂದಿಗೆ ಮಾತನಾಡಬೇಡಿ. ನನಗೆ ಮದುವೆಯ ಚಿತ್ರ ಬೇಡ ಅಂತ ಹೇಳಿಬಿಟ್ಟರು. ಹಾಗಾಗಿ, ನಾನು ಅವರ ಮ್ಯಾನೇಜರ್‌ಗೆ ಕರೆ ಮಾಡಿ ಈ ಬಗ್ಗೆ ತಿಳಿಸಿದೆ. ಆಗ ಅವರು ನಾನು ಏನು ಮಾಡಲಿ ಎಂದು ಹೇಳಿದ್ರು. ಆಗ ನಾನು ಅದನ್ನು ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡಲು ನಿರ್ಧರಿಸಿದೆ. ಆಗ ಆ ಮದುವೆ ವಿಡಿಯೋವನ್ನು ನೆಟ್‌ಫ್ಲಿಕ್ಸ್‌ಗೆ ನೀಡುವ ಮುನ್ನ 50% ಮತ್ತು ನಂತರ 50% ಎಂದು ಹೇಳುವ ಒಪ್ಪಂದವನ್ನು ಮಾಡಿಕೊಂಡೆ. ಈ ಘಟನೆಯ ನಂತರ, ಮದುವೆ, ಕುಟುಂಬ ಕಾರ್ಯಕ್ರಮಕ್ಕೆ ಹೋಗುವ ಮೊದಲು ನಾನು ಹಣದ ಬಗ್ಗೆಯೇ ಮಾತಾಡಿ ಬಳಿಕ ಒಪ್ಪಿಕೊಳ್ಳುತ್ತೇನೆ ಅಂತ ಹೇಳಿದ್ದಾರೆ.

Advertisment

publive-image

ಇದನ್ನೂ ಓದಿ:2 ತಿಂಗಳ ಗರ್ಭಿಣಿ ಪತ್ನಿಗೆ ಚೂರಿ ಇರಿದ ನೇತ್ರಾವತಿ ಧಾರಾವಾಹಿ ನಟ.. ಗರ್ಭಪಾತವಾಗಿ ಆಸ್ಪತ್ರೆಗೆ ದಾಖಲು

ಇನ್ನು, ಆ ನಟನ ಬಗ್ಗೆ ಹೆಸರನ್ನು ಬಹಿರಂಗ ಪಡಿಸದೇ ಮಾತಾಡಿದ ಅವರು, ವಿವಾಹದ ವಿಡಿಯೋದಲ್ಲಿ ನಟನು ವಧುವಿಗೆ ತನ್ನ ಪ್ರೀತಿಯನ್ನು ಹೇಳುತ್ತಿದ್ದ. ಆದರೆ ನಂತರ ಆಕೆಗೆ ಮೋಸ ಮಾಡಿಬಿಟ್ಟ. ವರನು ಅಳುತ್ತಾ, 'ಐ ಲವ್ ಯೂ, ಬೇಬಿ' ಎಂದು ಹೇಳುತ್ತಿದ್ದಾನೆ. ಅದು ನಕಲಿ ಮೊಸಳೆ ಕಣ್ಣೀರು ಎಂದು ಬಳಿಕ ತಿಳಿಯಿತು. ಅವರು ಒಬ್ಬ ದೊಡ್ಡ ಬಾಲಿವುಡ್ ನಟ. ಹೆಸರುಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ, ಆದರೆ ನಾನು ಅದರ ಮೌಲ್ಯವನ್ನು ಈ ವಿಡಿಯೋ ಲಕ್ಷಾಂತರ ಮೌಲ್ಯದ್ದಾಗಿದೆ. ನಾನು ಅದನ್ನು ಮಾರಿ ಹಣ ಗಳಿಸಬಹುದು. ನಂತರ ವಿಶಾಲ್ ಅವರು ಕ್ಯಾಮೆರಾವನ್ನು ನೋಡುತ್ತಾ, ನೀವು ಯಾರೆಂದು ನಮಗೆ ತಿಳಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment