/newsfirstlive-kannada/media/post_attachments/wp-content/uploads/2024/12/FIRST-NIGHT.jpg)
ಮಧ್ಯಪ್ರದೇಶದ ಛತ್ತರ್‌ಪುರದ ಮದುವೆ ಮನೆಯಲ್ಲಿ ಯಾರೂ ನಿರೀಕ್ಷೆ ಮಾಡಿರದ ಘಟನೆಯೊಂದು ನಡೆದಿದೆ. ಹುಡುಗಿಯನ್ನು ನಂಬಿ ತಾಳಿಕಟ್ಟಿದ್ದ ಮದು ಮಗ ಕಂಗಾಲಾಗಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಏನಿದು ಕತೆ..?
ಸ್ಟೋರಿಯ ಕಥಾನಾಯಕ ರಾಜ್‌ದೀಪ್ ರಾವತ್. ವಯಸ್ಸು 29. ಛತ್ತರ್‌ಪುರ ನಿವಾಸಿ. ಖುಷಿ ತಿವಾರಿ ಎಂಬ ಯುವತಿಯನ್ನು ಪ್ರೀತಿಸಿದ್ದ. ಡಿಸೆಂಬರ್ 11 ರಂದು ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಮರುದಿನ ಇಬ್ಬರಿಗೂ ಫಸ್ಟ್ ನೈಟ್. ಇಲ್ಲಿ ನಡೆದ ಮೊದಲ ರಾತ್ರಿಯ ಸೀನ್ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ:ಬಿಗ್ ಶಾಕ್ ಕೊಟ್ಟ ರೋಹಿತ್ ಶರ್ಮಾ; ಗ್ಲೌಸ್ ಎಸೆದು ಸಂಚಲನ.. ಟೆಸ್ಟ್ಗೆ ಗುಡ್ಬೈ..?
ಮೊದಲ ರಾತ್ರಿ.. ರಾಜ್‌ದೀಪ್ ತಲೆಯಲ್ಲಿ ಕಲ್ಪನೆಗಳ ಲೋಕದ ಸಾಗರವೇ ತಲೆಯಲ್ಲಿ ಹರಿಯುತ್ತಿತ್ತು.. ಅಂತೆಯೇ ಪ್ರೀತಿಸಿದ ಹುಡುಗಿ ಮನದರಸಿಯಾಗಿ ಲೋಟದಲ್ಲಿ ಹಾಲು ಹಿಡಿದು ಕೋಣೆಗೆ ಎಂಟ್ರಿ ಆಗಿದ್ದಾಳೆ. ಆದರೆ ಇಲ್ಲಿ ರಾಜ್‌ದೀಪ್ ಅಂದುಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು!
ಆಗಿದ್ದೇನು..?
ಸೀರೆಯುಟ್ಟು ಬಳಕುತ್ತ ಬಂದ ಚೆಲುವೆ ಗಂಡನಿಗೆ ಹಾಲು ಕೊಟ್ಟಿದ್ದಾಳೆ. ಹಾಲು ಕುಡಿಯುತ್ತಿದ್ದಂತೆಯೇ ವರ ಪ್ರಜ್ಞೆ ತಪ್ಪಿದ್ದಾನೆ. ಫಸ್ಟ್ ನೈಟ್ ಸೀನ್ ಅಲ್ಲಿಗೆ ಕಟ್ ಆಗಿದೆ. ಬೆಳಗ್ಗೆ ಎಚ್ಚರಗೊಂಡಾಗ ಮದುಮಗ ಆಘಾತಕ್ಕೆ ಒಳಗಾಗಿದ್ದಾನೆ. ಮದುಮಗಳು ಇರಲಿಲ್ಲ. ಮನೆಯಲ್ಲಿದ್ದ ಲಕ್ಷಗಟ್ಟಲೆ ಬೆಲೆಬಾಳುವ ಬೆಳ್ಳಿ, ಬಂಗಾರದ ಆಭರಣಗಳು ಮಾಯವಾಗಿತ್ತು..
ಘಟನೆಯ ಬಗ್ಗೆ ಮದುಮಗನ ತಂದೆ ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ವಧು, ಆಕೆಯ ಸಹೋದರ ವಿರುದ್ಧ ದೂರು ಕೊಡಲಾಗಿದೆ. ಪೊಲೀಸ್ ವಿಚಾರಣೆ ವೇಳೆ ಪ್ರೀತಿಯ ನಾಟಕವಾಡಿ ಇದೇ ರೀತಿ ಇನ್ನಿಬ್ಬರಿಗೆ ಯಾಮಾರಿಸಿರೋದು ಗೊತ್ತಾಗಿದೆ. ಸುಲಭವಾಗಿ ಹಣ ಮಾಡುವ ದುರಾಸೆಗೆ ಹೀಗೆ ಮಾಡಿದ್ದಾರೆ. ಒಟ್ಟು ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ.
ಇದನ್ನೂ ಓದಿ:BBK11: ‘ಹೌದು.. ನಾನು ಕರಾಬು..’ ರಜತ್ನ ರೊಚ್ಚಿಗೆಬ್ಬಿಸಿದ ತ್ರಿವಿಕ್ರಮ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ