Advertisment

ಈ ವರ್ಷ ದೇಶದಲ್ಲಿ ಎಷ್ಟು ಮದುವೆ ನಡೆಯಲಿವೆ? ಆಗುತ್ತಿರುವ ಖರ್ಚು ಗೊತ್ತಾದ್ರೆ ಶಾಕ್ ಆಗ್ತಿರಾ

author-image
Gopal Kulkarni
Updated On
ಈ ವರ್ಷ ದೇಶದಲ್ಲಿ ಎಷ್ಟು ಮದುವೆ ನಡೆಯಲಿವೆ? ಆಗುತ್ತಿರುವ ಖರ್ಚು ಗೊತ್ತಾದ್ರೆ ಶಾಕ್ ಆಗ್ತಿರಾ
Advertisment
  • ಈ ವರ್ಷ ಭಾರತದಲ್ಲಿ ಒಟ್ಟು ಮದುವೆಯಾಗಲಿರುವ ಜೋಡಿಗಳೆಷ್ಟು?
  • ಈ ಮದುವೆ ಸೀಸನ್​ನಲ್ಲಿ ಮದುವೆಗೆ ಖರ್ಚಾಗುತ್ತಿರುವ ಹಣವೆಷ್ಟು ?
  • ವಿವಾಹೋದ್ಯಮದಲ್ಲಿ ಭಾರತ ಜಾಗತಿಕವಾಗಿ ಎಷ್ಟನೇ ಸ್ಥಾನದಲ್ಲಿ ಗೊತ್ತಾ?

ನವದೆಹಲಿ: ಇನ್ನೇನು ಕೆಲವೇ ದಿನಗಳಲ್ಲಿ ತುಳಸಿ ವಿವಾಹದ ಹಬ್ಬ ದೇಶದಲ್ಲಿ ಕಳೆಗಟ್ಟಲಿದೆ. ಅದಾದ ಬಳಿಕ ಮದುವೆಗೆ ಮುಹೂರ್ತಗಳು ತೆರೆದುಕೊಳ್ಳಲಿವೆ. ಕೊರೊನಾ ಬಳಿಕ ಕೊಂಚ ಕಳೆ ಕಳೆದುಕೊಂಡಿದ್ದ ವಿವಾಹದ ಅದ್ಧೂರಿತನಗಳು ಈಗ ಮತ್ತೆ ಹಳಿಗೆ ಮರಳಿದೆ. ಒಂದು ವಿವಾಹ ಅಂದ್ರೆ ಅದು ಒಂದು ಮನೆಗೆ ಶುಭಕಾರ್ಯ, ಆದ್ರೆ ಅದು ಅನೇಕರಿಗೆ ಉದ್ಯೋಗ ನೀಡುವ ಮಾರ್ಗ. ಬ್ಯಾಂಡ್​ ಸೆಟ್​ನಿಂದ ಹಿಡಿದು ಅಡುಗೆಯವರವರೆಗೂ. ವೇದಿಕೆ ಸಿಂಗರಿಸುವವರಿಂದ ಹಿಡಿದು ಪಾನ್​ ಬೀಡಾ ನೀಡುವವರಿಗೂ ಉದ್ಯೋಗ ದೊರಕಿಸುವ ಒಂದು ವೇದಿಕೆ.
ಮದುವೆ ಸೀಸನ್​ಗಳು ಬಂದ್ರೆ ಸಾಕು ನಮ್ಮ ಜನ ಅದ್ಧೂರಿತನಕ್ಕೆ ಹೆಚ್ಚು ಮಣೆ ಹಾಕುತ್ತಾರೆ.

Advertisment

ಸಾಲ ಮಾಡಿಯಾದ್ರೂ ವಿವಾಹವನ್ನು ನಾಲ್ಕು ಜನ ನೋಡಿ ಮೆಚ್ಚುಕೊಳ್ಳವಂತೆ ಮಾಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಹೀಗಾಗಿ ಮದುವೆ ಅಂದ್ರೆ ಅದು ಯಾವ ಹಬ್ಬಕ್ಕೂ ಕೂಡ ಕಡಿಮೆಯಿರೋದಿಲ್ಲ. ಈ ಬಾರಿ ನವೆಂಬರ್ ಹಾಗೂ ಡಿಸೆಂಬರ್ ಮಧ್ಯದ ಅವಧಿಯಲ್ಲಿ ಇಡೀ ದೇಶದಲ್ಲಿ ನಡೆಯುತ್ತಿರುವ ಮದುವೆಗಳ ಸಂಖ್ಯೆ ಹಾಗೂ ಆಗುತ್ತಿರುವ ಖರ್ಚು ಕೇಳಿದ್ರೆನೇ ಒಂದು ಕ್ಷಣ ಶಾಕ್ ಆಗುತ್ತೆ.

publive-image

ಮೋತಿಲಾಲ್ ಓಸ್ವಾಲ್ ಫೈನಾನ್ಸಿಯಲ್ ಸರ್ವಿಸ್ ಮಾಡಿರುವ ಸರ್ವೆ ಪ್ರಕಾರ 2024ನೇ ಸಾಲಿನ ಅವಧಿಯಲ್ಲಿ ಒಟ್ಟು 60 ಮದುವೆ ಮುಹೂರ್ತಗಳಿದ್ದು 2025ರಲ್ಲಿ 49 ಮುಹೂರ್ತಗಳಿವೆ. ಭಾರತದಲ್ಲಿ ಪ್ರತಿ ವರ್ಷ ಕನಿಷ್ಠ 1 ಕೋಟಿ ಮದುವೆಗಳು ಜರಗುತ್ತವೆ. ವಿವಾಹೋದ್ಯಮದಲ್ಲಿ ಜಾಗತಿಕವಾಗಿ ಭಾರತ ಎರಡನೇ ಅತಿದೊಡ್ಡ ರಾಷ್ಟ್ರ ಎಂದು ಗುರುತಿಸಿಕೊಂಡಿದೆ ಅಂತ ವರದಿ ಮಾಡಿದೆ.

publive-image

ಇದನ್ನೂ ಓದಿ:ಉಗುರು ಕತ್ತರಿಸಿ ನೆಲದ ಮೇಲೆ ಬಿಸಾಡಬಾರದು ಯಾಕೆ ಗೊತ್ತಾ? ವೈಜ್ಞಾನಿಕ ಕಾರಣಗಳು ಇಲ್ಲಿದೆ!

Advertisment

ಈ ವರ್ಷ ಮುಗಿಯಲು ಇನ್ನೂ 3 ತಿಂಗಳುಗಳು ಬಾಕಿ ಇವೆ. ನವೆಂಬರ್​ನಿಂದ ಮದುವೆ ಮುಹೂರ್ತಗಳು ಆರಂಭವಾಗಲಿವೆ. ಈ ವರ್ಷ ನವೆಂಬರ್ ಹಾಗೂ ಡಿಸೆಂಬರ್ ಮಧ್ಯದ ವೇಳೆಗೆ ದೇಶದಲ್ಲಿ ಒಟ್ಟು 3.5 ಮಿಲಿಯನ್ ಅಂದ್ರೆ 35 ಲಕ್ಷ ಜೋಡಿಗಳು ಹಸೆಮಣೆ ಏರಲಿವೆ. ಈ 35 ಲಕ್ಷ ಮದುವೆಗಳಿಗೆ ಖರ್ಚಾಗುತ್ತಿರುವ ಒಟ್ಟು ಮೊತ್ತ ಜಸ್ಟ್ 4.25 ಲಕ್ಷ ಕೋಟಿ ಎಂದು ಕನ್ಫೆಡೆರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (Confederation of All India Traders) ಹೇಳಿದೆ.

ಇದನ್ನೂ ಓದಿ:Health Tips: ಬೆಳಗ್ಗೆ ಎದ್ದು ಈ ಕೆಲಸ ಮಾಡಿದ್ರೆ ಸಕ್ಕರೆ ಕಾಯಿಲೆ ಮಾಯ; ಈ ಸ್ಟೋರಿ ತಪ್ಪದೆ ಓದಿ!
ಮದುವೆ ಅಂದ್ರೆ ಬಂಗಾರದಿಂದ ಹಿಡಿದು ಲಿಪ್ಸ್​​ಟಿಕ್ ಉದ್ಯಮದವರೆಗೂ ಹಣ ಹರಿದು ಬರುತ್ತದೆ. ಈ ಎಲ್ಲಾ ಉದ್ಯಮಿಗಳಿಗೂ ಬೂಸ್ಟ್ ಸಿಗುವುದೇ ಹೆಚ್ಚು ಹೆಚ್ಚು ಮದುವೆಯಾದಾಗ. ಸೌಂಡ್ ಸಿಸ್ಟಮ್, ಫುಡ್ ಕೌಂಟರ್ಸ್, ಡ್ರೋನ್ ಶೋಗಳು, ಮ್ಯೂಸಿಕ್, ಮೆಹಂದಿ,ಮೇಕಪ್​  ಪ್ರೀ ವೆಡ್ಡಿಂಗ್ ಶೂಟ್​, ವಿಡಿಯೋಗ್ರಾಫಿ, ಫೋಟೋಗ್ರಾಫಿ  ಹೀಗೆ ಹಲವು ಉದ್ಯೋಗಗಳಿಗೆ ಹಣ ಮಾಡುವ ಅವಕಾಶ ಕಲ್ಪಿಸಿಕೊಡುತ್ತದೆ ವಿವಾಹೋದ್ಯಮ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮದುವೆಯಿಂದ ಹರಿದು ಬರುವ ಹಣದಲ್ಲಿ ಶೇಕಡಾ30 ರಿಂದ 40 ರಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

publive-image

ಈಗಾಗಲೇ ಕಳೆದ ಮದುವೆ ಸೀಸನ್​ನಲ್ಲಿ ದೇಶ ಒಟ್ಟು 42 ಲಕ್ಷ ಮದುವೆಗಳಿಗೆ ಸಾಕ್ಷಿಯಾಗಿದ್ದು 5.5 ಲಕ್ಷ ಕೋಟಿ ರೂಪಾಯಿ ಈ ಮದುವೆಗಳಲ್ಲಿ ಖರ್ಚಾಗಿದೆ ಎಂದು ಹೇಳಲಾಗುತ್ತಿದೆ. ಜನವರಿ 15 ರಿಂದ ಜುಲೈ 15ರವರೆಗೆ ಭಾರತದಲ್ಲಿ ನಡೆದ ಒಟ್ಟು ಮದುವೆಗಳ ಖರ್ಚು 42 ಲಕ್ಷ ಕೋಟಿ ರೂಪಾಯಿ. ಇದು ಡಿಸೆಂಬರ್ ವೇಳೆಗೆ ಇನ್ನೂ 35 ಲಕ್ಷ ಮದುವೆಗಳಲಾಗಲಿದ್ದು 4.25 ಲಕ್ಷ ಕೋಟಿ ರೂಪಾಯಿ ಈ ಮದುವೆಗಳಿಗೆ ಖರ್ಚಾಗಲಿದೆ ಎಂದು ಹೇಳಲಾಗುತ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment