newsfirstkannada.com

ಮದುವೆ ಮನೆಯಲ್ಲಿ ಭಾರೀ ಅನಾಹುತ.. ಒಂದೇ ಕುಟುಂಬದ 6 ಜನರು ಸ್ಥಳದಲ್ಲೇ ಸಾವು

Share :

Published April 27, 2024 at 6:50am

Update April 27, 2024 at 9:19am

    ಮದುವೆ ಮನೆಯ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಪಟಾಕಿ

    ಗುರುವಾರ ರಾತ್ರಿ 11.15ಕ್ಕೆ ದುರಂತ ಸಂಭವಿಸಿದೆ

    ಹಲವರು ಗಾಯ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ

ಮದುವೆ ಸಂಭ್ರಮದಲ್ಲಿ ಹೊಡೆದ ಪಟಾಕಿಯಿಂದ ಮನೆಯ ಚಪ್ಪರಕ್ಕೆ ಬೆಂಕಿ ಹೊತ್ತಿಕೊಂಡು ಆರು ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ. ದುರಂತದಲ್ಲಿ ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸುನಿಲ್ ಪಾಸ್ವಾನ್ (26), ಲಿಲಾ ದೇವಿ (23), ಕಾಂಚನ್ ದೇವಿ (26), ಸಿದ್ದಾರ್ಥ್ ಕುಮಾರ್ (4), ಶಶಾಂಕ್ ಕುಮಾರ್ (3), ಸಾಕ್ಷಿ ಕುಮಾರಿ (5) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಆಗಿದ್ದೇನು..?
ನರೇಶ್​ ಪಾಸ್ವಾನ್ ಎಂಬಾತನ ಮಗಳ ಮದುವೆ ಇತ್ತು. ಹಾಗಾಗಿ ಬೇರೆ ಊರಿನಿಂದ ಮದುವೆಗೆ ಬಂದವರನ್ನು ಸ್ವಾಗತಿಸಲು ಸಿದ್ಧತೆ ನಡೆಸಲಾಗಿತ್ತು. ದಿಬ್ಬಣ ಬಂದ ತಕ್ಷಣ ಪಟಾಕಿ ಸಿಡಿಸಿದ್ದಾರೆ. ಆಗ ಟೆಂಟ್​ಗೆ ಬೆಂಕಿ ಹೊತ್ತಿಕೊಂಡಿತ್ತು. ಜನರು ಬಂದು ಬೆಂಕಿ ನಂದಿಸಲು ಶುರುಮಾಡಿದಾಗ ಅಲ್ಲಿದ್ದ ಸಿಲಿಂಡರ್​ಗೂ ಬೆಂಕಿ ಹೊತ್ತಿಕೊಂಡಿದೆ.

ಅಲ್ಲಿಂದ ಡೀಸೆಲ್​ ಸ್ಟಾಕ್​​ಗೂ ಬೆಂಕಿ ತಗುಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರೆಲ್ಲಾ ಒಂದೇ ಕುಟುಂಬದವರು ಎನ್ನಲಾಗಿದೆ. ದರ್ಬಾಂಗ ಪ್ರದೇಶದ ಅಲಿನಗರದಲ್ಲಿ ಗುರುವಾರ ರಾತ್ರಿ 11.15ರ ಸುಮಾರಿಗೆ ದುರಂತ ಸಂಭವಿಸಿದೆ.

ಇದನ್ನೂ ಓದಿ:ಉದ್ಯಮಿ ದೀಪಕ್ ಚೌವ್ಹಾಣ್ ಜೊತೆ ಸಪ್ತಪದಿ ತುಳಿದ ಮಾಜಿ ಬಿಗ್​ಬಾಸ್​ ಸ್ಟಾರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ಮನೆಯಲ್ಲಿ ಭಾರೀ ಅನಾಹುತ.. ಒಂದೇ ಕುಟುಂಬದ 6 ಜನರು ಸ್ಥಳದಲ್ಲೇ ಸಾವು

https://newsfirstlive.com/wp-content/uploads/2024/04/FIRE-1-1.jpg

Load More