/newsfirstlive-kannada/media/post_attachments/wp-content/uploads/2023/06/Red-Bus.jpg)
ಸರ್ಕಾರ ಮಹಿಳೆಯರಿಗಾಗಿ ಉಚಿತ ಬಸ್​ ಯೋಜನೆ ಜಾರಿಗೆ ತಂದಿದ್ದೇ ತಡ, ಮಹಿಳೆಯರು ಪ್ರವಾಸ ಕೈಗೊಳ್ಳಲು ಶುರು ಮಾಡಿದ್ದಾರೆ. ಅದರಲ್ಲಿ ಹೆಚ್ಚಿನವರು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಮತ್ತೊಂದೆಡೆ ಮಹಿಳೆಯರು ಸ್ಮಾರ್ಟ್ ದಾರಿ ಹಿಡಿಯುತ್ತಿದ್ದು, ಆನ್​ಲೈನ್​ ಮೂಲಕವೇ ಟಿಕೆಟ್​ ಮುಂಗಡ ಬುಕ್ ಮಾಡಿ ಪ್ರಯಾಣಿಸುತ್ತಿದ್ದಾರೆ.
ಬುಕ್ಕಿಂಗ್.. ಬುಕ್ಕಿಂಗ್.. ಬುಕ್ಕಿಂಗ್
ಶಕ್ತಿ ಯೋಜನೆಯಡಿಯಲ್ಲಿ ಪ್ರಯಾಣ ಬೆಳೆಸುವ ಸಲುವಾಗಿ ಮಹಿಳೆಯರು ರಶ್ ನಲ್ಲಿ ಹೋಗೋದು ಬೇಡ, ಸೀಟುಗಾಗಿ ಕಾಯೋದು ಬೇಡ ಎಂದು ಮುಂಗಡ ಬುಕ್ಕಿಂಗ್​ ಮಾಡುತ್ತಿದ್ದಾರೆ. ಉಚಿತ ಬಸ್ ಗಳಲ್ಲೇ ರಿಸರ್ವೇಶನ್ ಮಾಡಿಕೊಂಡು ಪ್ರಯಾಣ ಮಾಡ್ತಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ಹೋಗಲು ಅಡ್ವಾನ್ಸ್ ಸೀಟು ಬುಕ್ ಮಾಡುತ್ತಿದ್ದಾರೆ.
ಒಂದು ಸೀಟಿಗೆ 20 ರೂಪಾಯಿ
ಒಂದು ಟಿಕೆಟ್ ಮುಂಗಡವಾಗಿ ಬುಕ್ ಮಾಡಿದ್ರೆ 20 ರೂ. ಪಾವತಿಸಬೇಕಿದೆ. ಇನ್ನು ಬಸ್ ನಿಲ್ದಾಣಕ್ಕೆ ಬಂದು ನೇರವಾಗಿ ಬಸ್ ಹತ್ತೋರಿಗೆ ಇದರ ಎಫೆಕ್ಟ್ ತಟ್ಟಿದೆ. ನಾನ್ ರಿಸರ್ವೇಶನ್ ಮಹಿಳಾ ಪ್ರಯಾಣಿಕರಿಂದ ಕೊಂಚ ಸಮಸ್ಯೆ ಎದುರಾಗಿದೆ.
ವಿಕೇಂಡ್​ ಉಚಿತ ಪ್ರಯಾಣ
ಇಂದು ವಾರದ ರಜಾ ಆದಿತ್ಯವಾರವಾದ್ದರಿಂದ ಜಾಸ್ತಿ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಮೆಜೆಸ್ಟಿಕ್ ಬಸ್​ಸ್ಟ್ಯಾಂಡ್​ನಿಂದ ಬೆಳಗ್ಗೆಯಿಂದ 65 ಬಸ್ ಗಳು ಧರ್ಮಸ್ಥಳಕ್ಕೆ ಸಂಚರಿಸಿವೆ. ಸುಬ್ರಮಣ್ಯಕ್ಕೆ 7 ಬಸ್, ಹೊರನಾಡು 4 ಬಸ್ ಮಂಗಳೂರಿಗೆ 25 , ಶೃಂಗೇರಿ 4 ಬಸ್ ಗಳಲ್ಲಿ ನಿಯೋಜಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ