newsfirstkannada.com

ವೀಕೆಂಡ್​ನಲ್ಲಿ ಸರ್ಕಾರಿ ಬಸ್​ಗಳು ಫುಲ್​.. ಮೆಜೆಸ್ಟಿಕ್​​ ನಿಲ್ದಾಣ ಫುಲ್​ ರಶ್​!

Share :

18-06-2023

  ಮಹಿಳೆಯರಿಗೆ ‘ಶಕ್ತಿ’ ಯೋಜನೆಯ ಮೊದಲ ವೀಕೆಂಡ್​

  ಬಸ್​​ ನಿಲ್ದಾಣದಲ್ಲಿ ಟಿಕೆಟ್​​ಗಾಗಿ ಮುಗಿಬಿದ್ದ ಲೇಡೀಸ್

  ಸುಪ್ರಸಿದ್ಧ ಪುಣ್ಯಕ್ಷೇತ್ರಕ್ಕೆ ತೆರಳುವ ಬಸ್​ಗಳು ಫುಲ್​​

ಒಂದು ಕೈಯಲ್ಲಿ ಆಧಾರ್​ ಕಾರ್ಡ್​​. ಗುರುತಿನ ಚೀಟಿ ಅಂತೇಳಿ ಬೇಕಾದ ಡಾಕ್ಯೂಮೆಂಟ್ಸ್​​. ಇನ್ನೋಂದು ಕೈಯಲ್ಲಿ ವ್ಯಾನಿಟಿ ಬ್ಯಾಗ್. ಮಕ್ಕಳು, ವೃದ್ಧರು ಹೀಗೆ ಕುಟುಂಬದವರೆಲ್ಲ ರೆಡಿಯಾಗಿ ನಿಂತು ಧರ್ಮಸ್ಥಳಕ್ಕೆ ಹೋಗೋಣ. ಇಲ್ಲ ನಮ್ಮೂರಿಗೆ ಹೋಗೋಣ. ಅಥವಾ ಬೇರೆ ಯಾವದಾದ್ರೂ. ಧಾರ್ಮಿಕ ಸ್ಥಳಗಳಿಗ ಕಡೆ ಪ್ರಯಾಣ ಬೆಳೆಸೋಣ? ಅನ್ನೋ ಚರ್ಚೆ. ಹೀಗೆ ಯೋಚನೆ ಮಾಡ್ತಿರೋ ಮಹಿಳೆಯರನ್ನ ರೀ ಕ್ಯೂನಲ್ಲಿ ಬನ್ರೀ. ಅಂತ ಗುಂಪು ಗುಂಪಾಗಿ ನಿಂತಿದ್ದ ಮಹಿಳೆಯರನ್ನ ಕೆಎಸ್​ಆರ್​ಟಿಸಿ ಸಿಬ್ಬಂದಿ ಎಚ್ಚರಿಸ್ತಾ ಸುಸ್ತಾಗಿದ್ರು. ಅಂದಹಾಗೆಯೇ ಈ ದೃಶ್ಯಗಳು ಕಂಡು ಬಂದಿದ್ದು ಮೆಜೆಸ್ಟಿಕ್ ಬಸ್​​ ನಿಲ್ದಾಣದಲ್ಲಿ.

ರೀ ಎಲ್ಲಿಗೆ ಹೋಗಬೇಕು. ಎಲ್ಲಿಗೆ ಕೊಡ್ಲಿ ಟಿಕೆಟ್​. ಎಷ್ಟು ಟಿಕೆಟ್​ ಕೊಡ್ಲಿ ಮೇಡಂ. ಅಂತ ಕೌಂಟರ್​ ಸಿಬ್ಬಂದಿ ಕೇಳ್ತಿದ್ರೆ. ತಗೋಳಿ ನಮ್ಮ ಆಧಾರ್​ ಕಾರ್ಡ್ ಅಂತ ವನಿತೆಯರ ​ಸದ್ದು. ಚಾಮರಾಜನಗರಕ್ಕೆ ನಾಲ್ಕು ಲೇಡೀಸ್​​ ಟಿಕೆಟ್​. ಮೈಸೂರಿಗೆ ಐದು ಲೇಡೀಸ್ ಟಿಕೆಟ್. ಮಂಗಳೂರಿಗೆ ಮೂರು. ಕುಂದಾಪುರಕ್ಕೆ ಎಂಟು ಅಂತ ರಾಜ್ಯದ ಮೂಲೆ. ಮೂಲೆಗಳಿಗೆ ಕೆಎಸ್​ಆರ್​ಟಿಸಿ ಬಸ್ ಟಿಕೆಟ್​ ಪಡೆದು ಟ್ರಿಪ್​ಗೆ ಹೊರಟುತ್ತಿದ್ದಾರೆ.

ಸರ್ಕಾರಿ ಬಸ್‌ಗಳು ಫುಲ್ ರಶ್

ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಸ್ತ್ರೀಯರು ಸಾರಿಗೆ ಬಸ್​​​ಗೆ ಶಕ್ತಿ ತುಂಬಿದ್ದಾರೆ. ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಅವಕಾಶ ಕಾರಣ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಮಹಿಳಾ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ. ಉಚಿತ ಪ್ರಯಾಣ ಘೋಷಣೆ ಬಳಿಕ ಮೊದಲ ವೀಕೆಂಡ್ ಹಿನ್ನಲೆ ಸರ್ಕಾರಿ ಬಸ್‌ಗಳು ಫುಲ್ ರಶ್. ಧರ್ಮಸ್ಥಳಕ್ಕೆ ಹೋಗುವ ಎಲ್ಲ ಬಸ್‌ಗಳು ಮಹಿಳೆಯರು, ಯುವತಿಯರಿಂದಲೇ  ತುಂಬಿ ತುಳುಕುತ್ತಿವೆ.

ತಾವು ಪಡೆದ ಸ್ಥಳಕ್ಕೋಗುವ ಬಸ್​ಗಳಿಗಾಗಿ ಕಾದು ಕೂತಿದ್ರು. ಹೀಗೆ ಕೂತಲ್ಲೇ ಮಾತು ಕೂಡ ಶುರುವಾಗಿತ್ತು. ಮೊದಲು ಬಸ್​ನಲ್ಲಿ ಎಲ್ಲಾದ್ರೂ ಹೋಗಬೇಕು ಅಂದ್ರೆ ಮಿನಿಮಮ್, 500-600 ಅಂತ ಖರ್ಚಾಗೋದು. ಆದರೆ ಮೊನ್ನೆ ಅಂಗಡಿಗೆ ಅಂತ ಮಾರ್ಕೆಟ್​ಗೆ ಹೋಗಿದ್ದೆ. ಹಂಗೆ ನಮ್ಮ ತಾಯಿ ಮನೆ ಕಡೆ ಹೋಗೋ ಬಸ್​ ನೋಡ್ದೆ. ಹಾಗೆಯೇ ಹತ್ತಿ ಸೀದ ಹೊರಟು ಬಿಟ್ಟೆ ಕಂಡ್ರಿ. ಸುಮ್ನೆ ಗಂಡಸರಿಗಾಗಿ ಯಾರ್​ ಕಾಯ್ತಾರೆ. ಈಗ ನಮಗೆ ಒಂದು ಧೈರ್ಯ ಬಂದಿದೆ. ಮನೆಯಿಂದ ಬರೋದು. ಇಷ್ಟಾ ಬಂದ್​ ಕಡೆ ಹೋಗ್ತಾ ಇರೋದೆ. ಅಂತ ಮಹಿಳೆಯರು ಮಾತಾಡ್ತಿದ್ರು.

ಬೆಂಗಳೂರು, ಮೈಸೂರು, ಕೋಲಾರ, ತುಮಕೂರು. ಯಾವುದೇ ಬಸ್​​ ನೋಡಿದ್ರು, ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹೋಗುವ ಮಹಿಳಾ ಭಕ್ತರೇ ಹೆಚ್ಚಾಗಿ ಕಾಣಿಸುತ್ತಿದ್ದಾರೆ. ಹೀಗೆ ಬಸ್​​ ಹತ್ತಿದವರಲ್ಲಿ ಫ್ರೀಯಾಗಿ ಕೊಡೋದ್ರಿಂದ ಸರ್ಕಾರಕ್ಕೆ ಲಾಸ್​​ ಅಂತ ಹೇಳುತ್ತಲೇ ಕಂಡಕ್ಟರ್​​​ಗೆ ಆಧಾರ್​​​ ತೋರಿಸಿ ಶಕ್ತಿ ಯೋಜನೆ ಬಳಸಿಕೊಳ್ತಿದ್ರು. ಹೆಣ್ಣು ಮಕ್ಕಳ ಈ ಪುಕ್ಸಟ್ಟೆ ಪ್ರವಾಸ, ಪ್ರವಾಸ ತಾಣಗಳು ಹಾಗೂ ದೇವಾಲಯ ನಗರಗಳಿಗೆ ಹಾಗೂ ಸ್ಥಳೀಯ ವ್ಯಾಪಾರಿಗಳ ಆದಾಯಕ್ಕೂ ಶಕ್ತಿ ತುಂಬಿದೆ.

ಒಟ್ನಲ್ಲಿ, ರಾಜ್ಯ ಸರ್ಕಾರ ಶಕ್ತಿ ಯೋಜನೆಯಿಂದ ತೀರ್ಥಕ್ಷೇತ್ರಗಳು, ಪ್ರವಾಸಿತಾಣಗಳಿಗೂ ಹೊಸ ಚೈತನ್ಯ ಬಂದಂತಾಗಿದೆ. ಉಚಿತ ಪ್ರಯಾಣದ ಪರಿಣಾಮ ಪ್ರವಾಸೋದ್ಯಮಕ್ಕೂ ಅನುಕೂಲವಾಗಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೀಕೆಂಡ್​ನಲ್ಲಿ ಸರ್ಕಾರಿ ಬಸ್​ಗಳು ಫುಲ್​.. ಮೆಜೆಸ್ಟಿಕ್​​ ನಿಲ್ದಾಣ ಫುಲ್​ ರಶ್​!

https://newsfirstlive.com/wp-content/uploads/2023/06/Bus-2.jpg

Load More