ಪ್ಲೇ-ಆಫ್​ಗೆ ಬಂತು ಆನೆಬಲ.. ಬಲಿಷ್ಠ ಸ್ಟಾರ್​​ ವೇಗಿಗೆ ಮತ್ತೆ ವೆಲ್​​​​ಕಮ್ ಹೇಳಿದ ಆರ್​ಸಿಬಿ..!

author-image
Ganesh
Updated On
RCB ಅಭಿಮಾನಿಗಳಿಗೆ ಬಿಗ್ ಶಾಕ್‌.. ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ಕೈ ಕೊಡೋದು ಫಿಕ್ಸ್!
Advertisment
  • ಪ್ಲೇ-ಆಫ್​ನಲ್ಲಿ ಆರ್​ಸಿಬಿ ಮತ್ತಷ್ಟು ಸ್ಟ್ರಾಂಗ್ ಆಗಿದೆ
  • ಬಲಿಷ್ಠ ವೇಗಿಯನ್ನು ಮತ್ತೆ ಸ್ವಾಗತಿಸಿದ ಆರ್​ಸಿಬಿ
  • ಮೇ 29 ರಿಂದ ಪ್ಲೇ-ಆಫ್ ಪಂದ್ಯಗಳು ಶುರುವಾಗಲಿವೆ

ಐಪಿಎಲ್ ಟ್ರೋಫಿ ಕನಸು ಕಾಣುತ್ತಿರುವ ಆರ್​ಸಿಬಿಗೆ ಮತ್ತಷ್ಟ ಸ್ಟ್ರಾಂಗ್ ಆಗಿದೆ. ಬೌಲಿಂಗ್ ವಿಭಾಗದ ದೈತ್ಯ ಶಕ್ತಿ ಆಗಿರುವ ಜೋಶ್ ಹೇಜಲ್​ವುಡ್ ಅವರು ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಪ್ಲೇ-ಆಫ್​​ಗೆ ಮತ್ತಷ್ಟು ಜೋಶ್ ಬಂದಿದೆ.

ಆಸಿಸ್​ ವೇಗಿ ಮತ್ತೆ ಆರ್​ಸಿಬಿ ಕ್ಯಾಂಪ್ ಸೇರಿಕೊಂಡಿದ್ದು, ಸ್ವಾಗತಿಸಿರೋದನ್ನು ಫ್ರಾಂಚೈಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಬಿಕ್ಕಟ್ಟು ಸಂಭವಿಸಿದ ಹಿನ್ನೆಲೆಯಲ್ಲಿ ಕೆಲವು ದಿನಗಳವರೆಗೆ ಐಪಿಎಲ್​ಗೆ ಬ್ರೇಕ್ ನೀಡಲಾಗಿತ್ತು. ಅದೇ ಸಮಯದಲ್ಲಿ ಜೋಶ್ ಹೇಜಲ್​ವುಡ್​ ಆಸ್ಟ್ರೇಲಿಯಾಗೆ ವಾಪಸ್ ಹೋಗಿದ್ದರು. ನಂತರ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​​ಗಾಗಿ ಪ್ರ್ಯಾಕ್ಟೀಸ್ ಶುರುಮಾಡಿದ್ದರು. ಪ್ರ್ಯಾಕ್ಟೀಸ್ ಮಾಡ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ: ಆರ್​ಸಿಬಿ ಕ್ಯಾಂಪ್ ತೊರೆದ ಮತ್ತೊಬ್ಬ ಸ್ಟಾರ್​.. ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್..!

ಐದು ಬಾರಿ ಚಾಂಪಿಯನ್ ಆಗಿರುವ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಕೊನೆಯ ಬಾರಿಗೆ ಹೇಜಲ್​ವುಡ್ ಕಾಣಿಸಿಕೊಂಡಿದ್ದರು. ನಂತರ ಆರ್​ಸಿಬಿ ಪರ ಯಾವುದೇ ಪಂದ್ಯವನ್ನು ಆಡಲಿಲ್ಲ. 10 ಪಂದ್ಯಗಳಲ್ಲಿ 17.28 ಸರಾಸರಿಯಲ್ಲಿ 18 ವಿಕೆಟ್ ಪಡೆಯುವ ಮೂಲಕ ಅತಿಹೆಚ್ಚು ವಿಕೆಟ್ ಪಡೆದವರಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಮೇ 29 ರಿಂದ ಪ್ಲೇ-ಆಫ್ ಪಂದ್ಯಗಳು ಆರಂಭವಾಗಲಿವೆ. ಆರ್​ಸಿಬಿಯ ಸ್ಥಾನ ಇನ್ನೂ ನಿರ್ಧಾರವಾಗಿಲ್ಲ. ಪಾಯಿಂಟ್ಸ್ ಟೇಬಲ್​​ನಲ್ಲಿ ಮೊದಲ ಮತ್ತು ಎರಡನೇ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆರ್​ಸಿಬಿಗೆ ಲೀಗ್ ಹಂತದಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇದೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಗುಜರಾತ್ ತಂಡದಿಂದ 5 ಸ್ಟಾರ್​ಗಳು ಆಯ್ಕೆ.. RCBಯಿಂದ ಎಷ್ಟು ಮಂದಿ ಸೆಲೆಕ್ಟ್..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment