newsfirstkannada.com

ರಾಜ್ಯಪಾಲರ ಮೇಲೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ; ಅಸಲಿಗೆ ಆಗಿದ್ದೇನು?

Share :

Published May 3, 2024 at 1:08pm

  ಬಂಗಾಳ ರಾಜ್ಯಪಾಲ ಸಿ.ವಿ ಆನಂದ ಬೋಸ್‌ ವಿರುದ್ಧ ಗಂಭೀರ ಆರೋಪ

  ಗವರ್ನರ್ ವಿರುದ್ಧ ಮುಗಿಬಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು

  ರಾಜಭವನವನ್ನು ಪ್ರವೇಶಿಸದಂತೆ ಪೊಲೀಸರು, ಸಚಿವರಿಗೆ ನಿರ್ಬಂಧ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಗವರ್ನರ್ ಸಿ.ವಿ ಆನಂದ ಬೋಸ್‌ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿ ಬಂದಿದೆ. ರಾಜಭವನದಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ರಾಜ್ಯಪಾಲ ಸಿ.ವಿ ಆನಂದ ಬೋಸ್‌ ವಿರುದ್ಧ ದೂರು ದಾಖಲಿಸಿದ್ದು, ಬಂಗಾಳದಲ್ಲಿ ಅತಿ ದೊಡ್ಡ ರಾಜಕೀಯದ ಕೋಲಾಹಲಕ್ಕೆ ಕಾರಣವಾಗಿದೆ.

ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು ರಾಜ್ಯಪಾಲ ಸಿ.ವಿ ಆನಂದ ಬೋಸ್‌ ವಿರುದ್ಧ ಮುಗಿಬಿದ್ದಿದ್ದು, ಲೈಂಗಿಕ ಕಿರುಕುಳ ಪ್ರಕರಣವನ್ನು ಖಂಡಿಸಿದ್ದಾರೆ. ಈ ಗಂಭೀರ ಆರೋಪವನ್ನು ಸಿ.ವಿ ಆನಂದ ಬೋಸ್‌ ಅವರು ತಳ್ಳಿ ಹಾಕಿದ್ದು, ಇದೆಲ್ಲಾ ಇಂಜಿನಿಯರಿಂಗ್ ವಿಶ್ಲೇಷಣೆಯಾಗಿದೆ. ಈ ಆರೋಪದಲ್ಲಿ ಯಾವುದೇ ಉರುಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದ ಮೇಲೆ ರಾಜಭವನಕ್ಕೆ ಪೊಲೀಸರು, ಸಚಿವರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ರಾಜಭವನಕ್ಕೆ ಯಾವುದೇ ತನಿಖೆ ಹಾಗೂ ಪರಿಶೀಲನೆಯ ನೆಪದಲ್ಲಿ ಅನಧಿಕೃತ ಹಾಗೂ ಅಕ್ರಮ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಗವರ್ನರ್ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ. ರಾಜ್ಯಪಾಲರ ಈ ನಿರ್ಧಾರ ಪಶ್ಚಿಮ ಬಂಗಾಳದಲ್ಲಿ ರಾಜಕೀಯದ ಜಿದ್ದಾಜಿದ್ದಿಗೆ ಕಾರಣವಾಗಿದೆ.

ರಾಜಭವನಕ್ಕೆ ಮಹಿಳೆಯೊಬ್ಬರು ತಾತ್ಕಾಲಿಕ ಉದ್ಯೋಗಿಯಾಗಿ ನೇಮಕಗೊಂಡಿದ್ದರು. ಇವರು 2 ಬಾರಿ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ರಾಜ್ಯಪಾಲರ ವಿರುದ್ಧವೇ ಕೋಲ್ಕತ್ತಾದ ಹರೇ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ‘ನಿನ್ನ ತಾಯಿಯ ಕಾಲು ಕಟ್ಟಿದ್ರು, ಪ್ರಜ್ವಲ್ ಬಲತ್ಕಾರ ಮಾಡಿದ್ರು..’ ರೇವಣ್ಣ ವಿರುದ್ಧ ಕಿಡ್ನಾಪ್‌ ಕೇಸ್ ದಾಖಲು 

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೋಲ್ಕತ್ತಾಗೆ ಭೇಟಿ ನೀಡುತ್ತಿದ್ದಾರೆ. ಮೋದಿ ಆಗಮನಕ್ಕೂ ಮುನ್ನವೇ ರಾಜ್ಯಪಾಲರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಬಿಜೆಪಿ ವಿರುದ್ಧ ಟಿಎಂಸಿ ನಾಯಕರು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಟಿಎಂಸಿ ಆರೋಪಗಳಿಗೆ ಸೆಡ್ಡು ಹೊಡೆದಿರುವ ರಾಜ್ಯಪಾಲ ಸಿ.ವಿ ಆನಂದ ಬೋಸ್‌ ರಾಜಭವನ ಪ್ರವೇಶಿಸದಂತೆ ಪೊಲೀಸರು ಮತ್ತು ಸಚಿವರಿಗೆ ಗೇಟ್ ಕ್ಲೋಸ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯಪಾಲರ ಮೇಲೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/05/PM-Modi-West-Bengal-Governor.jpg

Load More