/newsfirstlive-kannada/media/post_attachments/wp-content/uploads/2025/04/pahalgam1.jpg)
ಯಾರಿಗೆ, ಯಾವಾಗ, ಏನ್ ಆಗುತ್ತೆ ಅಂತ ಹೇಳೋದಕ್ಕೆ ಆಗೋದಿಲ್ಲ. ಅದರಲ್ಲೂ ಊರು ಬಿಟ್ಟು ಬೇರೆ ರಾಜ್ಯ, ದೇಶಕ್ಕೆ ಹೋಗಾದ ಎಷ್ಟು ಎಚ್ಚರದಿಂದ ಇದ್ದರು ಸಾಕಾಗೋದಿಲ್ಲ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದರೆ ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಅಟ್ಯಾಕ್.
ಇದನ್ನೂ ಓದಿ:ಹಣೆಯ ಬೊಟ್ಟು, ಕೈ ಬಳೆ ನೋಡಿ ಗುಂಡಿಟ್ರು.. ಶಿವಮೊಗ್ಗದಲ್ಲಿ ಕರಾಳತೆ ಬಿಚ್ಚಿಟ್ಟ ಮಂಜುನಾಥ್ ಮಗ ಅಭಿ ಜೈ!
ಅದೆಷ್ಟೋ ಕುಟುಂಬ ಬೇರೆ ಬೇರೆ ರಾಜ್ಯಗಳಿಂದ ಕಾಶ್ಮೀರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬಂದಿದ್ದರು. ಮಕ್ಕಳ ಜೊತೆಗೆ ಸಖತ್ ಎಂಜಾಯ್ ಮಾಡುತ್ತ ಕಾಲ ಕಳೆಯುತ್ತಿದ್ದರು. ಏಪ್ರಿಲ್ 22ರಂದೇ ಹತ್ಯೆ ಮಾಡಲು ಸಮಯ ನಿಗದಿ ಮಾಡಿಕೊಂಡು ಬಂದಿದ್ದ ಪಾಕಿಸ್ತಾನಿ ರಾಕ್ಷಸರು ಏಕಾಏಕಿ ನರಕವನ್ನೇ ಸೃಷ್ಟಿಸಿದ್ದರು. ಒಂದಲ್ಲಾ ಎರಡಲ್ಲಾ ಬರೋಬ್ಬರಿ 26 ಪ್ರವಾಸಿಗರ ಜೀವವನ್ನು ಬಲಿ ಪಡೆದುಕೊಂಡಿದ್ದಾರೆ. ಅವರಲ್ಲಿ ಕರ್ನಾಟಕ ಇಬ್ಬರು ಬಲಿಯಾಗಿದ್ದಾರೆ.
ಆದ್ರೆ, ಭಯೋತ್ಪಾದಕರು ಗುಂಡಿನ ದಾಳಿ ನಡೆಸೋ ಹೊತ್ತಲ್ಲೇ ಎರಡು ನವ ವಿವಾಹಿತ ಜೋಡಿಗಳು ಪವಾಡ ಸದೃಶದಂತೆ ಪಾರಾಗಿದ್ದಾರೆ. ಪಶ್ಚಿಮ ಬಂಗಾಳದಿಂದ ಹೊಸದಾಗಿ ಮದುವೆಯಾಗಿದ್ದ ದೇಬ್ರಾಜ್ ಘೋಷ್ ಪತ್ನಿ ಜೊತೆಗೆ ಹನಿಮೂನ್ಗಾಗಿ ಜಮ್ಮು ಕಾಶ್ಮೀರಕ್ಕೆ ಬಂದಿದ್ದರು. ಮಿನಿ ಸ್ವಿಟ್ಜರ್ಲೆಂಡ್ ಎಂದು ಕರೆಯಲ್ಪಡುವ ಬೈಸರನ್ ಕಣಿವೆಗೆ ಭೇಟಿ ನೀಡಿ ಜಮ್ಮು ಕಾಶ್ಮೀರದ ಸೌಂದರ್ಯ ಕಣ್ತುಂಬಿಕೊಳ್ಳೋ ತವಕದಲ್ಲಿದ್ದರು. ಹೀಗಾಗಿ ಈ ಜೋಡಿ ಕುದುರೆಗಳನ್ನು ಬುಕ್ ಮಾಡಿದ್ದರು. ಜೊತೆಗೆ ಬ್ಯಾಗ್ಗಳನ್ನು ಪ್ಯಾಕ್ ಮಾಡಿಕೊಂಡು ಉತ್ಸುಕರಾಗಿದ್ದರು.
ಆದ್ರೆ ಇನ್ನೇನೂ ಹೊರಡಬೇಕು ಅನ್ನುವಷ್ಟರಲ್ಲಿ ದಂಪತಿಗೆ ದಿಢೀರ್ ಹೊಟ್ಟೆ ಹಸಿದಿದೆ. ಹೀಗಾಗಿ ಊಟದ ಬಳಿಕ ಹೋಗೋಣ ಅಂತ ನಿರ್ಧಾರ ಮಾಡಿಕೊಂಡು ಹೋಗುತ್ತಿದ್ದರು. ಇದೇ ವೇಳೆ ಜೋರಾಗಿ ಗುಂಡಿನ ಶಬ್ದ ಕೇಳಿಸಿದೆ. ಗುಂಡಿನ ಸದ್ದು ಕೇಳಿದ ಕೂಡಲೇ ಗಂಡ ಹೆಂಡತಿಯನ್ನು ಹೋಟೆಲ್ ಒಳಗೆ ಕರೆದುಕೊಂಡು ಹೋಗಿ ಅಡಗಿ ಕುಳಿತುಕೊಂಡಿದ್ದರಂತೆ. ಏನೂ ಮಾತಾಡದೇ, ಪರಿಸ್ಥಿತಿ ಸರಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದರಂತೆ. ಹೊಟ್ಟೆ ಹಸಿವಾಗಿದ್ದರಿಂದ ನಮ್ಮ ಜೀವ ಉಳಿಯಿತು ಎಂದು ಸ್ಥಳೀಯ ಮಾಧ್ಯಮದ ಜೊತೆಗೆ ದಂಪತಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ನಾಡಿಯಾ ಜಿಲ್ಲೆಯ ಮತ್ತೊಬ್ಬ ದಂಪತಿಗಳಾದ ಸುದೀಪ್ತ ದಾಸ್ ದಂಪತಿ ಬೈಸರನ್‌ಗೂ ಯೋಜನೆ ಹಾಕಿಕೊಂಡಿದ್ದರಂತೆ. ಆದರೆ ಆತನ ಹೆಂಡತಿಗೆ ಹತ್ತಿರದ ಶಿವ ದೇವಾಲಯಕ್ಕೆ ಭೇಟಿ ನೀಡುವಂತೆ ದೈವಿಕ ಕರೆ ಬಂದಿತ್ತಂತೆ. ದಂಪತಿಗಳು ಪ್ರಾರ್ಥನೆ ಮುಗಿಸಿದ್ದಾಗಲೇ ಅವರ ಚಾಲಕ ಗುಂಡಿನ ದಾಳಿ ಬಗ್ಗೆ ಸುದ್ದಿ ತಿಳಿಸಿದ್ದರು. ದಾಳಿ ನಡೆದ ಜಾಗಕ್ಕೂ, ದಂಪತಿಯಿದ್ದ ಸ್ಥಳಕ್ಕೂ ಕೇವಲ ಒಂದು ಕಿಲೋಮೀಟರ್ ಅಷ್ಟೇ ಅಂತರ ಉಳಿದಿತ್ತು. ನಾವು ದೇವಸ್ಥಾನಕ್ಕೆ ಹೋಗದಿದ್ದರೆ ಸತ್ತೇ ಹೋಗುತ್ತಿದ್ದೇವು. ಇಂದು ಶಿವನ ಕೃಪೆಯಿಂದ ನಾವು ಬದುಕಿದ್ದೇವು ಎಂದು ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ