Advertisment

ಪ್ರಿಯತಮೆ ಮೇಲೆ ಗುಂಡಿನ ಸುರಿಮಳೆಗೈದ ಪ್ರಿಯಕರ.. ಬಳಿಕ ತಾನೂ ಸಾವನ್ನಪ್ಪಿದ..

author-image
Ganesh
Updated On
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Advertisment
  • ಗುಂಡಿನ ಸದ್ದು ಕೇಳಿ ಬೆಚ್ಚಿಬಿದ್ದ ಗೆಸ್ಟ್​ ಹೌಸ್​​ನ ಇತರೆ ಅತಿಥಿಗಳು
  • ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಇಬ್ಬರು ಬಿದ್ದಿದ್ದರು
  • ಪೊಲೀಸರಿಗೆ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದ್ದೇನು..?

ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ಪ್ರಿಯಕರನೊಬ್ಬ ತನ್ನ ಗೆಳತಿಗೆ ಗುಂಡು ಹಾರಿಸಿ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಿಯಕರನ ಕೃತ್ಯದಿಂದಾಗಿ ಪ್ರಿಯತಮೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸ್ತಿದ್ದಾಳೆ.

Advertisment

ದಕ್ಷಿಣ ಪರಗಣ ಜಿಲ್ಲೆಯ ಸಂತೋಷಪುರ ನಿವಾಸಿ ರಾಜೇಶ್ ಕುಮಾರ್ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾದ ಯುವಕ. ದಕ್ಷಿಣ ಕೋಲ್ಕತ್ತದಲ್ಲಿ ನಿನ್ನೆ ಸಂಜೆ ಐದು ಗಂಟೆ ಸುಮಾರಿಗೆ ಗೆಸ್ಟ್​ಹೌಸ್​​​​ನಲ್ಲಿ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಟಿ20 ವಿಶ್ವಕಪ್​​ ಗೆದ್ದ ಬಳಿಕ ಕೊಹ್ಲಿ ಫುಲ್ ಚೇಂಜ್.. ರನ್ ಮಷಿನ್ ಹಿಂಗ್ಯಾಕೆ ಆದ್ರು ಅಂತಿದ್ದಾರೆ ಫ್ಯಾನ್ಸ್..!

ಯುವತಿ ಮೇಲೆ ಗುಂಡು ಹಾರಿಸುತ್ತಿದ್ದಂತೆಯೇ ಆಕೆ ಕುಸಿದು ಬಿದ್ದಿದ್ದಾಳೆ. ನಂತರ ಆತನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಅನ್ನೋದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisment

ಇಬ್ಬರು ಅತಿಥಿಗೃಹದಲ್ಲಿ ತಂಗಿದ್ದರು. ಮಹಿಳೆಯ ಕಾಲಿಗೆ ಗುಂಡು ತಗುಲಿದ್ದು, ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಯ ಸ್ಥಿತಿ ಗಂಭೀರವಾಗಿದೆ. ಆರೋಪಿ ಮೃತಪಟ್ಟಿದ್ದು, 9 ಎಂಎಂ ಪಿಸ್ತೂಲ್​​ ವಶಪಡಿಸಿಕೊಂಡಿದ್ದಾಗಿ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ:ಬುಲೆಟ್​​ನಲ್ಲಿ ಬಂದು ಆಟೋ ಚಾಲಕನ ತಲೆ ಒಡೆದ ಕಿರಿಕ್ ಲೇಡಿ..! ವಿಡಿಯೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment