/newsfirstlive-kannada/media/post_attachments/wp-content/uploads/2025/01/MANJU2.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 95ನೇ ದಿನಕ್ಕೆ ಕಾಲಿಟ್ಟಿದೆ. ಬಿಗ್ಬಾಸ್ ಮನೆಯ ಎಲ್ಲ ಸ್ಪರ್ಧಿಗಳು ಹೊಸ ವರ್ಷದ ಸಂಭ್ರಮದಲ್ಲಿದ್ದಾರೆ. ಅದರ ಜೊತೆಗೆ ಬಿಗ್ಬಾಸ್ ಮನೆ ಮಂದಿಗೆ ಮತ್ತೊಂದು ಸರ್ಪ್ರೈಸ್ ಕೊಟ್ಟಿದ್ದಾರೆ. 95 ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳ ತಮ್ಮ ಕುಟುಂಬಸ್ಥರನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಇದೀಗ ಬಿಗ್ಬಾಸ್ ಮನೆ ಮಂದಿಗೆ ಸರ್ಪ್ರೈಸ್ ರೂಪದಲ್ಲಿ ಸ್ಪರ್ಧಿಗಳ ಫ್ಯಾಮಿಲಿಯನ್ನು ಮನೆಗೆ ವೆಲ್ಕಮ್ ಕೇಳಿದ್ದಾರೆ.
ಇದನ್ನೂ ಓದಿ:ಕಿಚ್ಚ ಸುದೀಪ್ ಫ್ಯಾಮಿಲಿಯಿಂದ ಸ್ಯಾಂಡಲ್ವುಡ್ಗೆ ಹೀರೋ ಎಂಟ್ರಿ.. ಯುವ ನಟನ ಹೆಸರೇನು..?
ಮಂಗಳವಾರದ ಸಂಚಿಕೆಯಲ್ಲಿ ಬಿಗ್ಬಾಸ್ ಮನೆಗೆ ಭವ್ಯಾ ಗೌಡ, ತ್ರಿವಿಕ್ರಮ್ ಹಾಗೂ ರಜತ್ ಕಿಶನ್ ಫ್ಯಾಮಿಲಿಯವರು ಬಂದಿದ್ದರು. ಇಂದು ಬಿಗ್ಬಾಸ್ ಮನೆಗೆ ಮೋಕ್ಷಿತಾ ಪೈ, ಉಗ್ರಂ ಮಂಜು ಹಾಗೂ ಗೌತಮಿ ಕುಟುಂಬಸ್ಥರು ಬಂದಿದ್ದಾರೆ. ಇನ್ನೂ, ಬಿಗ್ಬಾಸ್ ಮನೆಗೆ ಮೊದಲು ಉಗ್ರಂ ಮಂಜು ದೊಡ್ಡ ತಂಗಿ ದೀಪಿಕಾ ಹಾಗೂ ದೊಡ್ಡ ಅಕ್ಕನ ಮಗಳು ನಕ್ಷಿಕಾ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ತಂದೆ ರಾಮೇಗೌಡ ಅವರು ಸರ್ಪ್ರೈಸ್ ರೀತಿಯಲ್ಲಿ ಬಿಗ್ ಮನೆಗೆ ಎಂಟ್ರಿ ಕೊಟ್ಟು ಮಗನ ಕಣ್ಣಲ್ಲಿ ನೀರು ತರಿಸಿದ್ದಾರೆ. ಅಪ್ಪನನ್ನು ನೋಡುತ್ತಿದ್ದಂತೆ ಮಂಜು ಗಳ ಗಳನೆ ಕಣ್ಣೀರು ಹಾಕಿದ್ದಾರೆ. ಹೊಸ ಮಂಜು ತರ ಕಾಣ್ತಾ ಇದ್ದೀಯಲ್ಲೋ ಅಂತ ತಮಾಷೆ ಮಾಡಿದ್ದಾರೆ. ಅಲ್ಲದೇ ಮನೆಯವರ ಜೊತೆಗೆ ಖುಷಿ ಖುಷಿಯಲ್ಲಿ ಮಾತಾಡಿದ್ದಾರೆ. ಇದಾದ ಬಳಿಕ ದೊಡ್ಡ ತಂಗಿ ದೀಪಿಕಾ ಮಂಜು ಜೊತೆಗೆ ಮಾತಾಡಿದ್ದಾರೆ.
ಈ ಬಗ್ಗೆ ಮಾತಾಡಿದ ಅವರು, ಇಂತಹ ಗೋಲ್ಡನ್ ಆಪರ್ಚುನಿಟಿ ಮಿಸ್ ಮಾಡಿಕೊಳ್ಳಬೇಡ ಪ್ಲೀಸ್. ತುಂಬಾ ಚೆನ್ನಾಗಿ ಆಡುತ್ತಿದ್ದೀಯಾ. ಇಷ್ಟು ದಿನದಲ್ಲಿ ನಿನ್ನ ಪ್ರತಿಭೆಯನ್ನು ಎಲ್ಲೂ ಹೊರಗಡೆ ಹಾಕಿಲ್ಲ. ಯಾರ ಬಾಲವನ್ನು ಹಿಡಿಯೋದಕ್ಕೆ ಹೋಗಬೇಡ. ಏಕೆ ಮಂಕಾಗಿದ್ದೀಯಾ ಅಂತ ಗೊತ್ತಾಗುತ್ತಿಲ್ಲ. ನಿನ್ನ ಹತ್ತಿರ ಈಗ ಸಮಯ ಇಲ್ಲ. ನಿನ್ನ ಹಿಂದೆ ಹಾಕಿ ಮುಂದೆ ಬೇರೆಯವರು ಹೋಗುತ್ತಿದ್ದಾರೆ. ಅವರ ಜೊತೆಗೆ ಇರೋದು ಬೇಡ ಎಲ್ಲರ ಜೊತೆಗೂ ಇರು ಎಂದು ಸಲಹೆ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ