Advertisment

ಭಾರತೀಯ ಶಿಕ್ಷಣ ವ್ಯವಸ್ಥೆಯ ಪ್ರಮುಖ 7 ನ್ಯೂನ್ಯತೆಗಳು ಯಾವುವು? JEE, NEET ಪರೀಕ್ಷೆ ವೇಳೆ ಚರ್ಚಿಸಲೇಬೇಕಾದ ವಿಷಯಗಳು!

author-image
Gopal Kulkarni
Updated On
ಭಾರತೀಯ ಶಿಕ್ಷಣ ವ್ಯವಸ್ಥೆಯ ಪ್ರಮುಖ 7 ನ್ಯೂನ್ಯತೆಗಳು ಯಾವುವು? JEE, NEET ಪರೀಕ್ಷೆ ವೇಳೆ ಚರ್ಚಿಸಲೇಬೇಕಾದ ವಿಷಯಗಳು!
Advertisment
  • ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿರುವ ಪ್ರಮುಖ ನ್ಯೂನ್ಯತೆಗಳು ಯಾವುವು?
  • ಸಂಸದೀಯ ಸಮಿತಿ ಇತ್ತೀಚೆಗೆ ನೀಡಿರುವ ಆ ವರದಿಯಲ್ಲಿ ಏನಿದೆ ಗೊತ್ತಾ?
  • ಯಾವೆಲ್ಲಾ ಪ್ರಮುಖ ನ್ಯೂನ್ಯತೆಗಳನ್ನು ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ?

ದೇಶದಲ್ಲಿ ಪರೀಕ್ಷಾ ವ್ಯವಸ್ಥೆಯ ಕುರಿತು ಚರ್ಚೆಗಳು ಜೋರಾಗಿ ಕೇಳಿ ಬರುತ್ತಿರುವ ಸಂದರ್ಭದಲ್ಲಿ ಇತ್ತೀಚೆಗಷ್ಟೇ ಸಂಸದೀಯ ಸಮಿತಿ ತನ್ನ ಅಧ್ಯಯನದ ವರದಿಯೊಂದನ್ನು ಬಿಡುಗಡೆಗೊಳಿಸಿದೆ. ಸಂಸದೀಯ ಸಮಿತಿಯು ಬಿಡುಗಡೆ ಮಾಡಿದ ವರದಿಯಲ್ಲಿ ಪರೀಕ್ಷಾ ವ್ಯವಸ್ಥೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ಅನೇಕ ನ್ಯೂನ್ಯತೆಗಳನ್ನು ತೆರೆದಿಟ್ಟಿದೆ. ಪಶ್ನೆ ಪತ್ರಿಕೆ ಸೋರಿಕೆಯಿಂದ ಹಿಡಿದು ಅಸಮರ್ಪಕ ಪ್ರಶ್ನೆ ಪತ್ರಿಕೆ ತಯಾರಿಕೆವರೆಗೂ ಹಲವು ನ್ಯೂನ್ಯತೆಗಳು ಶಿಕ್ಷಣ ವ್ಯವಸ್ಥೆಯಲ್ಲಿ ಇರುವುದನ್ನು ಸ್ಪಷ್ಟಪಡಿಸಿದೆ.

Advertisment

ಇದನ್ನೂ ಓದಿ:ಇಂದು ಆರ್​ಎಸ್​ಎಸ್​ ಮುಖ್ಯ ಕಚೇರಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ.. ಹೆಡ್ಗೆವಾರ್​, ಗೋಳವಲ್ಕರ್​ ಅವರಿಗೆ ಶ್ರದ್ಧಾಂಜಲಿ

ಅಲ್ಲದೇ ಕ್ವಶ್ಚನ್ ಬ್ಯಾಂಕ್ ಸಿಸ್ಟಮ್ ಹಾಗೂ ಡಿಜಿಟಲಿಕರಣದ ಬಗ್ಗೆ ಹಲವು ಪ್ರಯೋಗಗಳನ್ನು ಕೈಗೊಳ್ಳಬೇಕಾದ ಹಾಗೂ ಅವುಗಳಿಗೆ ಪೂರಕವಾಗಿ ಮುಂದಿನ ಹೆಜ್ಜೆ ಇಡಬೇಕಾದ ಪ್ರಸಂಗ ಈಗ ಬಂದಿದೆ ಎಂದು ಒತ್ತಿ ಹೇಳಿದೆ. ಸರಿಯಾಗಿ ಮತ್ತು ಸಮಯಕ್ಕೆ ತಕ್ಕಂತೆ ಪರೀಕ್ಷೆಗಳನ್ನು ಸಮರ್ಪಕವಾಗಿ ಮುಗಿಸುವ ವಿಶ್ವವಿದ್ಯಾಲಯಗಳನ್ನು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ಅವುಗಳಿಗೆ ಗೌರವ ನೀಡಬೇಕಿದೆ ಎಂದು ಕೂಡ ಸಂಸದೀಯ ಸಮಿತಿ ಹೇಳಿದೆ.

ಇದನ್ನೂ ಓದಿ: ವಿದೇಶಿ ಬಂಡವಾಳ, ಯುವತಿಯರಿಗೆ ಲಕ್ಷಾಂತರ ರೂಪಾಯಿ ಸ್ಯಾಲರಿ. ಅಶ್ಲೀಲ ಚಿತ್ರ ತಯಾರಿಸುತ್ತಿದ್ದ ಜೋಡಿಗೆ ಬೇಡಿ!

Advertisment

ಇದರೊಂದಿಗೆ ಪರೀಕ್ಷಾ ನಿರ್ವಹಣೆಯ ಸಾಮರ್ಥ್ಯ ಹೊಂದಿರುವ ಯುನಿವರ್ಸಿಟಿ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಮಹತ್ವ ನೀಡಬೇಕು. ಅದರಲ್ಲೂ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (NAAC) ನ್ಯಾಷನಲ್ ಬೋರ್ಡ್ ಆಫ್ ಅಕ್ರಿಡಿಟೇಶನ್ ಇಂತಹ ವಿಶ್ವವಿದ್ಯಾಲಯಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಅಂಕಗಳನ್ನು ನೀಡಬೇಕು ಎಂದು ಸಮಿತಿ ಹೇಳಿದೆ.

publive-image

ಇದರೊಂದಿಗೆ ಭಾರತದಲ್ಲಿ ಶಿಕ್ಷಣ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿರುವ ಪ್ರಮಖ 7 ನ್ಯೂನ್ಯತೆಗಳನ್ನು ಅದು ಗುರುತಿಸಿದೆ

  •  ಪ್ರಶ್ನೆ ಪತ್ರಿಕೆ ಸೋರಿಕೆ
  • ತಪ್ಪಾದ ಪ್ರಶ್ನೆ ಪತ್ರಿಕೆ ಪೂರೈಕೆ
  •  ಸೀಟಿಂಗ್ ಅರೆಜ್ಮೆಂಟ್ ಮತ್ತು ಎಕ್ಸಾಂ ಸೆಂಟರ್​ಗಳ ಬಗ್ಗೆ ಗೊಂದಲ ಮೂಡಿಸುವುದು
  •  ವ್ಯಾಪಕವಾಗಿ ನಡೆಯುತ್ತಿರುವ ವಂಚನೆಯ ಘಟನೆಗಳು
  •  ಸಿಲ್ಯಾಬಸ್​ನ ಹೊರತಾಗಿ ಪ್ರಶ್ನೆ ಪತ್ರಿಕೆಗಳನ್ನು ಸೃಷ್ಟಿಸುವುದು
  •  ಅರ್ಹರಲ್ಲದ ಮೌಲ್ಯಮಾಪಕರ, ಪರೀಕ್ಷಕರ ನೇಮಕ
  •  ವಿದ್ಯಾರ್ಥಿಗಳ ಹಾಗೂ ಮೇಲ್ವಿಚಾರಕರ ನಡುವೆ ಪಿತೂರಿ
Advertisment

ಇವು ಸದ್ಯ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಪ್ರಮುಖ ನ್ಯೂನತೆಗಳು ಎಂದು ಸಂಸದೀಯ ಸಮಿತಿ ಕೋಟ್ ಮಾಡಿದೆ. ಆದರೆ ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ಇನ್ನೂ ಅನೇಕ ಸಮಸ್ಯೆಗಳಿವೆ. ಈ ಬಗ್ಗೆ ನ್ಯಾಕ್ ಮತ್ತು ಎನ್​ಬಿಎ ಕಠಿಣವಾದ ನಿಯಮಗಳನ್ನು ಸೃಷ್ಟಿಸಬೇಕು. ಗುಣಮಟ್ಟದ ಶಿಕ್ಷಣ ಹಾಗೂ ಪರೀಕ್ಷಾ ವ್ಯವಸ್ಥೆಗಳು ನಡೆಯುವಂತೆ ನೋಡಕೊಳ್ಳುವ ಜವಾಬ್ದಾರಿಯನ್ನು ಹೆಚ್ಚು ನಿರ್ವಹಿಸಬೇಕು ಎಂದು ಸ್ಪಷ್ಟವಾಗಿ ಹೇಳಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment