newsfirstkannada.com

ಜೈಲೂಟ ತಿಂದ್ರೆ ಅತಿಸಾರ.. ಮನೆ ಊಟ, ಬಟ್ಟೆ.. ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್ ಬೇಡಿಕೆಗಳೇನು?

Share :

Published July 9, 2024 at 3:27pm

Update July 9, 2024 at 3:39pm

  ದರ್ಶನ್​ಗೆ ಜೈಲಿನ ಊಟ ತಿಂದಾಗ ಅತಿಸಾರ/ಭೇದಿ ಆಗುತ್ತಿದೆ

  ಹೀಗೆ ಮುಂದುವರಿದ್ರೆ ದರ್ಶನ್ ಮತ್ತಷ್ಟು ತೂಕ ಕಳೆದುಕೊಳ್ಳಬಹುದು

  ದರ್ಶನ್​ಗೆ ಜೈಲಿನ ಆಹಾರ ಒಗ್ಗದೇ ಫುಡ್ ಪಾಯ್ಸನಿಂಗ್ ಆಗುತ್ತಿದೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿರುವ ದರ್ಶನ್ ಅವರು ಜೈಲೂಟಕ್ಕೆ ಬೇಸತ್ತು ಹೋಗಿದ್ದಾರೆ. ಜೈಲಿನಲ್ಲಿ ನೀಡುತ್ತಿರುವ ಊಟ ಜೀರ್ಣವಾಗುತ್ತಿಲ್ಲ. ಜೈಲಿನ ಊಟ ತಿಂದಾಗ ಅತಿಸಾರ/ಭೇದಿ ಆಗುತ್ತಿದೆ ಎಂದು ರಿಟ್ ಅರ್ಜಿಯಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಡಿ ಗ್ಯಾಂಗ್​ಗೆ ಭಾರೀ ಸಂಕಷ್ಟ.. ಪೊಲೀಸರ ಬಳಿಯಿದೆ ಮತ್ತೊಂದು ಬಲವಾದ ಸಾಕ್ಷಿ! 

ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಊಟ, ಹಾಸಿಗೆ, ಪುಸ್ತಕ ಮನೆಯಿಂದ ಪಡೆಯಲು ಕೋರಿ ಜೈಲು ಅಧಿಕಾರಿಗಳಿಗೆ ನಿರ್ದೇಶನ ಕೋರಿ ಮನವಿ ಸಲ್ಲಿಸಿದ್ದಾರೆ. ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ದರ್ಶನ್​ಗೆ ಜೈಲಿನ ಆಹಾರ ಸೂಕ್ತವಲ್ಲ ಅಂತ ವೈದ್ಯರೇ ಹೇಳಿದ್ದಾರೆ ಎಂದು ಹೇಳಲಾಗಿದೆ. ದರ್ಶನ್​ಗೆ ಜೈಲಿನಲ್ಲಿ ನೀಡುತ್ತಿರುವ ಊಟ ಜೀರ್ಣವಾಗುತ್ತಿಲ್ಲ. ದರ್ಶನ್​ಗೆ ಜೈಲಿನ ಊಟ ತಿಂದಾಗ ಅತಿಸಾರ/ಭೇದಿ ಆಗುತ್ತಿದೆ. ದರ್ಶನ್​ಗೆ ಜೈಲಿನ ಆಹಾರ ಒಗ್ಗದೇ ಫುಡ್ ಪಾಯ್ಸನಿಂಗ್ ಆಗುತ್ತಿದೆ ಹೀಗಾಗಿ ಮನೆ ಊಟಕ್ಕೆ ಕೋರಿಕೆ ಸಲ್ಲಿಸಲಾಗಿದೆ.

ದಿನೇ ದಿನೇ ಅತಿಸಾರ, ಭೇದಿಯಿಂದ ದರ್ಶನ್​ ತೂಕವೂ ಕಡಿಮೆಯಾಗುತ್ತಿದೆ. ಜೈಲಿನ ಅಧಿಕಾರಿಗಳು ಮನೆ ಊಟಕ್ಕೆ ನಿರಾಕರಣೆ ಮಾಡುತ್ತಿರೋದು ಕಾನೂನುಬಾಹಿರ ಹಾಗೂ ಅಮಾನವೀಯ. ಹೀಗೆ ಮುಂದುವರಿದ್ರೆ ದರ್ಶನ್ ಮತ್ತಷ್ಟು ತೂಕ ಕಳೆದುಕೊಳ್ಳಬಹುದು. ಇದು ದರ್ಶನ್​ರ ಅನಾರೋಗ್ಯಕ್ಕೂ ಕಾರಣವಾಗುವ ಸಾಧ್ಯತೆ ಇದೆ. ಮನೆ ಊಟಕ್ಕೆ ಅನುಮತಿ ನೀಡಿದರೆ ಯಾರಿಗೂ ತೊಂದರೆಯಾಗಲ್ಲ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೂ ಹೊರೆ ಕಡಿಮೆಯಾಗುತ್ತದೆ ಎಂದು ವಕೀಲರು ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಬೈಕ್, ಆಟೋ, ಕಾರು, ಜೀಪ್‌.. ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಟ್ವಿಸ್ಟ್ ಕೊಟ್ಟ ವಾಹನಗಳು ಜಪ್ತಿ; ಮುಂದೇನು? 

ದರ್ಶನ್ ಬೇಡಿಕೆ ಏನು?
1. ಮನೆಯ ಊಟ ಬೇಕು
2. ಮನೆಯಿಂದ ಬಟ್ಟೆ, ಚಮಚ ಬೇಕು
3. ಮನೆಯಿಂದ ಹಾಸಿಗೆ ಬೇಕು
4. ಮನೆಯಿಂದ ಪುಸ್ತಕ ಬೇಕು

ಜೈಲಧಿಕಾರಿಗಳು ಹೇಳೋದೇನು?
ಜೈಲಿನಲ್ಲಿ ದರ್ಶನ್ ಅವರ ಮನವಿಗೆ ಜೈಲಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ಮನೆ ಊಟಕ್ಕೆ ಅನುಮತಿ ನೀಡುವ ಕೋರಿಕೆ ಮನ್ನಿಸಿಲ್ಲ. ಕೋರ್ಟ್ ಆದೇಶವಿಲ್ಲದೆ ಇದಕ್ಕೆ ಅನುಮತಿ ನೀಡಲು ಆಗಲ್ಲ. ಬೇರೆ ಕೈದಿಗಳು ಜೈಲಿನ ಊಟ ಸೇವಿಸಿ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.

ಸದ್ಯ ದರ್ಶನ್ ಪರ ವಕೀಲರು ಸಲ್ಲಿಸಿರುವ ರಿಟ್ ಅರ್ಜಿ ನಾಳೆ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಕೋರ್ಟ್‌ ದರ್ಶನ್ ಅವರ ಅರ್ಜಿ ಪುರಸ್ಕರಿಸಿ ಜೈಲಿನ ಅಧಿಕಾರಿಗಳಿಗೆ ನಿರ್ದೇಶನ ಕೊಡುತ್ತಾ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲೂಟ ತಿಂದ್ರೆ ಅತಿಸಾರ.. ಮನೆ ಊಟ, ಬಟ್ಟೆ.. ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್ ಬೇಡಿಕೆಗಳೇನು?

https://newsfirstlive.com/wp-content/uploads/2024/07/Darshan-Highcourt.jpg

Load More