/newsfirstlive-kannada/media/post_attachments/wp-content/uploads/2025/01/BNG_GAVI_GANGADARESHWARA5.jpg)
ನಿನ್ನೆ ಮಕರ ಸಂಕ್ರಾಂತಿ.. ಸುಗ್ಗಿ ಹಬ್ಬ.. ಹಿಂದೂ ಕ್ಯಾಲೆಂಡರ್ನ ಕೊನೇ ಹಬ್ಬ.. ಎಳ್ಳು ಬೆಲ್ಲ ತಿಂದು.. ಎಲ್ಲಾ ಕಹಿ ಮರೆತು.. ನೇಸರನು ತನ್ನ ಪಥವನ್ನ ಬದಲಾಯಿಸೋ ದಿನ.. ಮಾಘಿಯ ಚಳಿ ಮಾಯವಾಗಲು ಶುರುವಾಗೋ ದಿನ.. ಸಂಕ್ರಾಂತಿ ಆಚರಣೆ ವೇಳೆ ಅನೇಕ ಅವಘಡಗಳು ಸಂಭವಿಸಿವೆ.. ಜೊತೆಗೆ ಸಂಭ್ರಮವೂ ಮೇಳೈಸಿತ್ತು..
ಸಂಕ್ರಾಂತಿ ಆಚರಣೆ ವೇಳೆ ಅವಘಡ
ಸಂಕ್ರಾಂತಿ ಆಚರಣೆ ವೇಳೆ ಈ ಅವಘಡ ನಡೆದಿದೆ. ಮಂಡ್ಯದ ಹೊಸಹಳ್ಳಿಯಲ್ಲಿ ಗೂಳಿಯೊಂದು ಕಿಚ್ಚು ಹಾದು ಜನರ ಬಳಿಗೆ ನುಗ್ಗಿದೆ.. ಮುನ್ನುಗ್ಗುತ್ತಾ ಬರ್ತಿದ್ದ ಗೂಳಿ ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಗುದ್ದಿದೆ.. ಗೂಳಿ ಗುದ್ದಿದ ರಭಸಕ್ಕೆ ವ್ಯಕ್ತಿ ಪಲ್ಟಿಯಾಗಿ ಬಿದ್ದಿದ್ದಾನೆ.. ಇನ್ನೂ ಗಾಯಗೊಂಡ ವ್ಯಕ್ತಿಯನ್ನ SI ಶೇಷಾದ್ರಿ ತಮ್ಮ ಜೀಪ್‌ನಲ್ಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ..
ಇದನ್ನೂ ಓದಿ: ಸಂಕ್ರಾಂತಿ ಸಂಭ್ರಮ; ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ವಿಸ್ಮಯ ಕಣ್ತುಂಬಿಕೊಳ್ಳಲು ಭಕ್ತರು ಕಾತರ
ಗವಿ ಗಂಗಾಧರೇಶ್ವರ ದೇಗುಲದಲ್ಲಿ ನಡೆಯದ ಕೌತುಕ
ಗವಿಗಂಗಧಾರೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿ ದಿನ ಲಿಂಗವನ್ನ ಸೂರ್ಯ ರಶ್ಮಿಗಳು ಸ್ಪರ್ಶಿಸುತ್ತವೆ.. ಆದ್ರೆ ಮೋಡದ ಮರೆಯಲ್ಲಿ ಮರೆಯಾದ ಸೂರ್ಯ, ಗವಿಗಂಗಧರೇಶ್ವರ ಕ್ಷೇತ್ರದ ಲಿಂಗ ಸ್ಪರ್ಶಿಸಿಲ್ಲ.. ಇದರ ಬೆನ್ನಲ್ಲೇ ಭಕ್ತರಲ್ಲಿ ಆತಂಕ ಕಾಡುವಂತೆ ಮಾಡಿದೆ.
800 ವರ್ಷಗಳ ವೈಭವದ ಕಥೆ ಉತ್ಸವಕ್ಕೆ ಮಳೆ ಅಡ್ಡಿ
ಮಕರ ಸಂಕ್ರಾಂತಿಯಂದೇ ಆಚಾರ್ಯ ಮಧ್ವರು, ಉಡುಪಿ ಕೃಷ್ಣದೇವರನ್ನ ಪ್ರತಿಷ್ಠಾಪಿಸಿದ್ರು. ಹಾಗಾಗಿ ಸಪ್ತೋತ್ಸವ ಸಹಿತ ಕೃಷ್ಣನಿಗೆ ಮೂರುತೇರಿನ ಉತ್ಸವ ಶತಮಾನಗಳಿಂದ ನಡ್ಕೊಂಡು ಬಂದಿದೆ. ಆದ್ರೆ ಈ ಬಾರಿ ವರುಣ ಅಡ್ಡಿ ಆಗಿದ್ದಾನೆ.. ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ಭಾಗಿಯಾಗಿದ್ರು.
ಇದನ್ನೂ ಓದಿ: ದಕ್ಷಿಣ ಭಾರತದ ಕುಂಭ ಎಂದೇ ಪ್ರಖ್ಯಾತಿ.. ಗವಿ ಸಿದ್ದೇಶ್ವರ ಜಾತ್ರೆಗೆ ಎಷ್ಟು ಲಕ್ಷ ಭಕ್ತರು ಬರುವ ನಿರೀಕ್ಷೆ ಇದೆ..?
ವಿಶ್ವದ ಏಕಮಾತ್ರ ಬೃಹತ್ ಮಹಾಶೂಲದ ಉದ್ಘಾಟನೆ!
ಚಿಕ್ಕಬಳ್ಳಾಪುರದ ಇಶಾ ಫೌಂಡೇಶನ್ನಲ್ಲಿ ಸಂಕ್ರಾಂತಿ ಸಂಭ್ರಮ ಕಳೆಗಟ್ಟಿತ್ತು.. ಸಂಕ್ರಾಂತಿಯಂದೇ ಪಂಚಭೂತ ಕ್ರಿಯಾ ಪ್ರಕ್ರಿಯೆಯೊಂದಿಗೆ ಮಹಾಶೂಲದ ಉದ್ಘಾಟನೆ ಆಗಿದೆ.. 54 ಅಡಿ ಎತ್ತರದಲ್ಲಿ ಪ್ರತಿಷ್ಠಾಪನೆಗೊಂಡ ಬೃಹತ್ ಮಹಾಶೂಲ ಉದ್ಘಾಟನೆಯಲ್ಲಿ ಲಕ್ಷಾಂತರ ಜನ ಭಾಗಿ ಆಗಿದ್ರು.
ಶಿವನ ಸನ್ನಿಧಿಗೆ ಹರಿದು ಬಂದ ಭಕ್ತಸಾಗರ
ಶಿರಸಿ ತಾಲೂಕಿನ ಶಲ್ಮಲಾ ನದಿ ತೀರದ ಸಹಸ್ರ ಲಿಂಗಕ್ಕೆ ವಿಶೇಷ ಪೂಜೆಯನ್ನು ಶಿವಭಕ್ತರು ಸಲ್ಲಿಸಿದ್ರು.. ಇದಲ್ಲದೇ ಮುರುಡೇಶ್ವರ, ಗೋಕರ್ಣದಲ್ಲಿ ಸಹ ವಿಶೇಷ ಪೂಜೆ ನೆರೆವೇರಿಸಿದ ಭಕ್ತರು, ಸಮುದ್ರ ಸ್ನಾನ ಮಾಡಿದ್ರು.
ರಿಲ್ಯಾಕ್ಸ್ ಮೂಡಲ್ಲಿ ಗಾಳಿಪಟ ಹಾರಿಸಿ ಪೊಲೀಸರು
ಚಿತ್ರದುರ್ಗದ ಐತಿಹಾಸಿಕ ಚಂದ್ರವಳ್ಳಿ ತೋಟದ ಮುಂಭಾಗ ಜಿಲ್ಲಾ ಪೊಲೀಸ್ ಅಧಿಕಾರಿಗಳು ತಮ್ಮ ಕುಟುಂಬಸ್ಥರೊಂದಿಗೆ ಗಾಳಿಪಟ ಹಾರಿಸಿ ಸಂಕ್ರಾಂತಿ ಆಚರಿಸಿದ್ರು.. ಗಾಳಿಪಟ ಬಾನೆತ್ತರಕ್ಕೆ ಹಾರಿಸಿ ಸಂಭ್ರಮಿಸಿ, ಪರಸ್ಪರ ಸಂಕ್ರಾಂತಿ ಶುಭಾಶಯ ವಿನಿಮಯ ಮಾಡ್ಕೊಂಡ್ರು.. ಇತ್ತ ಹಳ್ಳಿಗಳಲ್ಲಿ ಬೆಂಕಿಯ ನಡುವೆ ರಾಸುಗಳನ್ನ ಹಾಯಿಸಿ ಸಂಪ್ರದಾಯ ಪಾಲಿಸಿದ್ರು.. ಚೈನ್ ತುದಿಯಲ್ಲಿ ಬೆಂಕಿ ಹಚ್ಚಿ ಜೋರಾಗಿ ಸುತ್ತಿ ಬೆಂಕಿಯೊಂದಿಗೆ ಆಡಿದ ಆಟ ಮೈನವಿರೇಳಿಸ್ತು.. ಇನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಅಯ್ಯಪ್ಪ ಸ್ವಾಮಿ ದೇಗುಲದ ಜಾತ್ರೆ ವೇಳೆ ಕಾರೊಂದು ನುಗ್ಗಿ, ಓರ್ವ ಭಕ್ತ ಜೀವ ಕಳೆದುಕೊಂಡಿದ್ದಾನೆ. ಹಲವು ಮಂದಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಪ್ರಯಾಗರಾಜ್‌ನಲ್ಲಿ ಮೊದಲ ಪುಣ್ಯಸ್ನಾನ.. ವಿದೇಶಿ ಭಕ್ತರ ಸಂಖ್ಯೆಯಲ್ಲಿ ಏರಿಕೆ; ಹೇಗಿತ್ತು 2ನೇ ದಿನ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ