/newsfirstlive-kannada/media/post_attachments/wp-content/uploads/2024/11/black.jpg)
ಕಾಫಿ ಹಾಗೂ ಟೀ ಎಂದರೇ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಬೆಳಗ್ಗೆ ಎದ್ದು, ಹಾಲು, ಕಾಫಿ, ಟೀ ಇಲ್ಲದೇ ಇದ್ರೆ ಲೈಫ್ ಬೋರು ಅಂತಾರೇ ಜನರು. ಅದರಲ್ಲೂ ಕೆಲವರಂತೂ ಟೀ ಹಾಗೂ ಕಾಫಿಯಿಂದಲೇ ದಿನವನ್ನು ಶುರು ಮಾಡುತ್ತಾರೆ. ಬೆಳಗ್ಗೆ ಎದ್ದಾಗ ಒಂದು ಟೀ. ಟಿಫನ್ ಬಳಿಕ ಒಂದು ಟೀ. ಮಧ್ಯಾಹ್ನ ಊಟದ ಬಳಿಕ ಒಂದು ಟೀ. ಹೀಗೆ ದಿನದಲ್ಲಿ ಐದಾರು ಭಾರೀ ಟೀ ಅಥವಾ ಕಾಫಿ ಕುಡಿಯೋ ಜನರು ಇದ್ದಾರೆ. ಆದರೆ ಕಾಫಿ ಲವರ್ಸ್ ಈ ಸ್ಟೋರಿ ಓದಲೇಬೇಕು.
ಇದನ್ನೂ ಓದಿ:ಊಟದ ಬಳಿಕ ಟೀ ಕಾಫಿ ಕುಡಿಯೋರೇ ಎಚ್ಚರ! ಈ ಅಭ್ಯಾಸ ಬಿಡದಿದ್ರೆ ಜೀವಕ್ಕೆ ಅಪಾಯ ಗ್ಯಾರಂಟಿ
ಸಾಮಾನ್ಯವಾಗಿ ಕಾಫಿಗೆ ಹಾಲು ಬೆರೆಸಿ ಕುಡಿಯುವ ಅಭ್ಯಾಸ ಎಲ್ಲರಲ್ಲೂ ಇರುತ್ತದೆ. ಆದರೆ ಸಾಕಷ್ಟು ಜನರು ಕಾಫಿಗೆ ಹಾಲನ್ನು ಸೇರಿಸದೇ ಕುಡಿಯುತ್ತಾರೆ. ಅದು ಕೂಡ ಒಂದು ಪಟ್ಟಿಗೆ ಒಳ್ಳೆಯ ಆರೋಗ್ಯ ಫಲಿತಾಂಶಗಳು ಲಭ್ಯವಾಗುತ್ತವೆ. ಅಲ್ಲದೇ ಸಾಕಷ್ಟು ಬಾಲಿವುಡ್ ಸೆಲೆಬ್ರಿಟಿಗಳು ಇದೇ ವಿಧಾನವನ್ನು ಅನುಸರಿಸುತ್ತಿದ್ದಾರೆ. ಅಲ್ಲದೇ ಆಹಾರ ತಜ್ಞರು ಕೂಡ ಸಾಕಷ್ಟು ಮಂದಿಗೆ ಇದನ್ನೇ ಸೂಚಿಸುತ್ತಾರೆ. ಬ್ಲಾಕ್ ಕಾಫಿ ಜೊತೆಗೆ ತುಪ್ಪ ಮಿಕ್ಸ್ ಮಾಡಿ ಕುಡಿಯುವುದನ್ನು ಬುಲೆಟ್ ಪ್ರೂಫ್ ಕಾಫಿ ಎಂದು ಕರೆಯುತ್ತಾರೆ. ಹೀಗಾಗಿ ಕಾಫಿಯ ಜೊತೆ ತುಪ್ಪವನ್ನು ಮಿಶ್ರಣ ಮಾಡಿ ಕುಡಿಯುವುದರಿಂದ ನಮ್ಮ ದೇಹಕ್ಕೆ ಬಹಳಷ್ಟು ಆರೋಗ್ಯಕರ ಪ್ರಯೋಜನಗಳನ್ನು ತಂದು ಕೊಡುತ್ತದೆ.
ಸಾಕಷ್ಟು ಮಂದಿ ಕಾಲಿ ಹೊಟ್ಟೆಯಲ್ಲಿ ಕಾಫಿ ಸೇವಿದುವುದಕ್ಕೆ ಹೆದರುತ್ತಾರೆ. ಅಂತವರು ಕಾಫಿಗೆ ಸ್ವಲ್ಪ ತುಪ್ಪವನ್ನು ಬೆರೆಸಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ತುಪ್ಪದ ಒಂದು ವಿಶೇಷ ಗುಣ ಎಂದರೆ, ಹೊಟ್ಟೆಯೊಳಗಿನ ತೊಂದರೆಯನ್ನೂ ದೂರ ಮಾಡಿ ಅದರಲ್ಲಿ ಆಮ್ಲೀಯತೆಯನ್ನು ಕಡಿಮೆಗೊಳಿಸಿ ಕಾಫಿಯಲ್ಲಿನ ಕೆಫೈನ್ ಅಂಶದ ಪ್ರಭಾವವನ್ನು ತಗ್ಗಿಸಿ ಕ್ಯಾಲ್ಸಿಯಂ ಅಂಶವನ್ನು ವೃದ್ಧಿಗೊಳಿಸುತ್ತದೆ.
ಬುಲೆಟ್ ಪ್ರೂಫ್ ಕಾಫಿಯನ್ನು ಸೇವಿಸುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರ ಜೊತೆಗೆ ಉತ್ತಮವಾದ ಹಾಗೂ ಕೊಬ್ಬಿನಂಶ ಹೊಂದಿರುವ ಆಹಾರ ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಾಫಿ ಕೇವಲ ನಿಮ್ಮ ಹೊಟ್ಟೆ ತುಂಬಿಸುವುದು ಮಾತ್ರವಲ್ಲದೆ ನಿಮಗೆ ಹಸಿವಾಗುವಂತೆ ಮಾಡುವ ಹಾರ್ಮೋನ್ ಉತ್ಪತ್ತಿಯನ್ನು ಕಡಿಮೆ ಮಾಡುತ್ತದೆ. ಇದರಿಂದ ನಿಮ್ಮ ಜೀರ್ಣ ಕ್ರಿಯೆಯ ಪ್ರಕ್ರಿಯೆ ನಿಧಾನಗೊಂಡು ನೀವು ಆಹಾರವನ್ನು ಕಡಿಮೆ ಸೇವಿಸುವಂತೆ ಆಗಿ ನಿಮ್ಮ ದೇಹದ ತೂಕ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ತುಪ್ಪ ಬೆಣ್ಣೆಗಿಂತ ಕಡಿಮೆ ಸಿಹಿ ಮತ್ತು ಕಡಿಮೆ ಉಪ್ಪಿನ ಅಂಶವನ್ನು ಹೊಂದಿರುತ್ತದೆ.
ಇಷ್ಟೇ ಅಲ್ಲದೇ ನಿಮ್ಮ ಜೀರ್ಣ ವ್ಯವಸ್ಥೆಗೆ ಸಹ ಯಾವುದೇ ತೊಂದರೆ ಮಾಡದಂತೆ ನಿಮ್ಮ ಬೆಳಗಿನ ಉಪಹಾರದ ನಂತರ ನಿಮಗೆ ಕ್ಯಾಲೋರಿಗಳನ್ನು ಒದಗಿಸಿ ಕೊಬ್ಬಿನ ಅಂಶವನ್ನು ಬೇರ್ಪಡಿಸುತ್ತದೆ. ಸಾಮಾನ್ಯವಾಗಿ ಕೊಬ್ಬಿನ ಅಂಶದಿಂದ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಶಕ್ತಿಯ ಪ್ರಮಾಣ ಹೆಚ್ಚಾಗುತ್ತದೆ ಜೊತೆಗೆ ನಿಮ್ಮ ಹೊಟ್ಟೆ ಹಸಿವಿನ ನಿವಾರಣೆಯ ಜೊತೆಗೆ ದೇಹದ ಸಕ್ಕರೆ ಅಂಶವನ್ನು ಸಹ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ.
ಇದರ ಜೊತೆಗೆ ನಿಮ್ಮ ಮೆದುಳಿನ ಆರೋಗ್ಯಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ ಈ ಬುಲೆಟ್ ಫ್ರೂಫ್ ಕಾಫಿ. ಮೆದುಳಿನಿಂದ ದೇಹದ ತುಂಬಾ ಹಬ್ಬಿರುವ ನರನಾಡಿಗಳ ಸಂಪರ್ಕಗಳನ್ನು ಉತ್ತಮಗೊಳಿಸಿ ದೇಹದಲ್ಲಿ ಹಾರ್ಮೋನ್ ಉತ್ಪತ್ತಿಯನ್ನು ಸುಗಮಗೊಳಿಸುತ್ತದೆ. ಇದರಿಂದ ನಿಮ್ಮ ಮನಸ್ಥಿತಿ ಮೊದಲಿಗಿಂತ ವೃದ್ಧಿಗೊಂಡು ನಿಮ್ಮ ಕೆಲಸದ ಮೇಲೆ ಅಚ್ಚುಕಟ್ಟಾಗಿ ಗಮನ ಹರಿಸಲು ಸಹಾಯ ಮಾಡುತ್ತದೆ. ಇನ್ನೂ ಒಂದು ವೇಳೆ ಈ ಅಭ್ಯಾಸ ನೀವು ಮಾಡುತ್ತಿಲ್ಲವೆಂದರೆ ಇನ್ನು ಮುಂದೆಯಾದರೂ ನಿಮ್ಮ ಆಹಾರ ಪದ್ಧತಿಯಲ್ಲಿ ಇದನ್ನು ಸೇರಿಸಿಕೊಂಡು ಆರೋಗ್ಯವಾಗಿರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ