/newsfirstlive-kannada/media/post_attachments/wp-content/uploads/2025/06/air-india1.jpg)
ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು ಬರೋಬ್ಬರಿ 265 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್ಗೆ ಹೊರಟಿದ್ದ ಬೋಯಿಂಗ್ ಡ್ರೀಮ್ಲೈನರ್ ವಿಮಾನದಲ್ಲಿ 242 ಪ್ರಯಾಣಿಸುತ್ತಿದ್ದರು. ಇದರಲ್ಲಿ ಓರ್ವ ಪ್ರಯಾಣಿಕ ಮಾತ್ರ ಬದುಕುಳಿದಿದ್ದಾನೆ.
ಇದನ್ನೂ ಓದಿ: ವಿಮಾನದ ಬೆಲೆ 2.18 ಸಾವಿರ ಕೋಟಿ ರೂ.. ಪತನಗೊಂಡ Boeing 787 ವಿಶೇಷತೆ ಏನೇನು..?
ಇನ್ನೂ, ಯಾವುದೇ ವಿಮಾನ ಹಾರಾಟಕ್ಕೂ ಮುನ್ನ ಸಿಬ್ಬಂದಿಗಳು ಹಲವು ರೀತಿಯಲ್ಲಿ ತಪಾಸಣೆ ಮಾಡಲಾಗುತ್ತದೆ. ಈ ತಪಾಸಣೆಯನ್ನು ಸಾಮಾನ್ಯವಾಗಿ ಪೈಲಟ್‌ಗಳು, ಗ್ರೌಂಡ್ ಸಿಬ್ಬಂದಿ ಮತ್ತು ತಾಂತ್ರಿಕ ತಂಡದವರು ನಡೆಸುತ್ತಾರೆ. ಮೊದಲು ವಿಮಾನದ ಹೊರಗಿನ ಭಾಗದ ತಪಾಸಣೆ ಮಾಡಲಾಗುತ್ತದೆ. ಇದಾದ ಬಳಿಕ ವಿಮಾನದ ರೆಕ್ಕೆಗಳು, ಲ್ಯಾಂಡಿಂಗ್ ಗೇರ್, ಇಂಜಿನ್‌ಗಳು, ಮತ್ತು ಫ್ಯೂಸಲೇಜ್‌ನಲ್ಲಿ ತಪಾಸಣೆ ಮಾಡ್ಲಾಗುತ್ತೆ. ವಿಮಾನಕ್ಕೆ ಯಾವುದಾದ್ರೂ ಹೊರಭಾಗದಲ್ಲಿ ತೊಂದರೆ ಆಗಿದ್ಯಾ, ಬಿರುಕು ಇದೆಯೇ ಎಂದು ಪರಿಶೀಲನೆ ಮಾಡುತ್ತಾರೆ. ಅಲ್ಲದೇ ಟೈರ್‌ಗಳ ಒತ್ತಡ ಮತ್ತು ಅದರ ಪರಿಸ್ಥಿತಿಯ ಬಗ್ಗೆ ತಪಾಸಣೆ ನಡೆಸಲಾಗುತ್ತದೆ. ಎಂಜಿನ್‌ನ ಬಾಹ್ಯ ಭಾಗದಲ್ಲಿ ತೈಲ ಸೋರಿಕೆ ಅಥವಾ ಹಾನಿಯ ಗುರುತುಗಳ ತಪಾಸಣೆ ಮಾಡಲಾಗುತ್ತದೆ.
ಇಂಧನ ತಪಾಸಣೆ.. ಇಂಧನದ ಪ್ರಮಾಣ, ಗುಣಮಟ್ಟ ಮತ್ತು ಶುದ್ಧತೆಯನ್ನು ಪರಿಶೀಲನೆ ಮಾಡುತ್ತಾರೆ. ಇಂಧನ ಟ್ಯಾಂಕ್‌ಗಳಲ್ಲಿ ನೀರು ಅಥವಾ ಬೇರೆ ಕಲ್ಮಶಗಳಿಲ್ಲ ಎಂದು ಪರೀಕ್ಷಿಸಲಾಗುತ್ತದೆ.
ಕಾಕ್‌ಪಿಟ್ ತಪಾಸಣೆ.. ಕಾಕ್‌ಪಿಟ್‌ನಲ್ಲಿರುವ ಈಕ್ವಿಪ್‌ಮೆಂಟ್‌ಗಳು, ಇನ್‌ಸ್ಟ್ರುಮೆಂಟ್‌ಗಳು, ಮತ್ತು ಕಂಟ್ರೋಲ್‌ಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಗುತ್ತದೆ. ರೇಡಿಯೋ, ನ್ಯಾವಿಗೇಷನ್ ಸಿಸ್ಟಮ್, ಮತ್ತು ಆಟೋಪೈಲಟ್‌ನ ಕಾರ್ಯನಿರ್ವಹಣೆಯ ತಪಾಸಣೆ ಮಾಡಲಾಗುತ್ತದೆ.
ಕ್ಯಾಬಿನ್ ತಪಾಸಣೆ..ಸೀಟ್‌ಬೆಲ್ಟ್‌ಗಳು, ಆಕ್ಸಿಜನ್ ಮಾಸ್ಕ್‌ಗಳು, ಇತರ ವಸ್ತುಗಳು, ಮತ್ತು ತುರ್ತು ಉಪಕರಣಗಳ ಲಭ್ಯತೆ ಮತ್ತು ಕಾರ್ಯಕ್ಷಮತೆಯ ತಪಾಸಣೆ ಮಾಡಲಾಗುತ್ತದೆ.
ನಿಯಮಿತ ನಿರ್ವಹಣೆ ತಪಾಸಣೆಗಳು.. ವಿಮಾನದ ದೀರ್ಘಕಾಲೀನ ಕಾರ್ಯಕ್ಷಮತೆಗಾಗಿ, ನಿಯಮಿತವಾಗಿ ಹಲವಾರು ಹಂತದ ತಪಾಸಣೆಗಳನ್ನು ನಡೆಸಲಾಗುತ್ತದೆ. ಇವುಗಳನ್ನು A, B, C, ಮತ್ತು D ಚೆಕ್‌ಗಳು ಎಂದು ವಿಂಗಡಿಸಲಾಗಿದೆ.
ಪ್ರತಿಯೊಂದು ಚೆಕ್‌ನ ವಿವರ..
A ಚೆಕ್ ಪ್ರತಿ 400-600 ಫ್ಲೈಯಿಂಗ್ ಗಂಟೆಗಳಿಗೊಮ್ಮೆ ಅಥವಾ 1-2 ತಿಂಗಳಿಗೊಮ್ಮೆ ಮಾಡಲಾಗುತ್ತದೆ. B ಚೆಕ್ ಪ್ರತಿ 6-8 ತಿಂಗಳಿಗೊಮ್ಮೆ ಮಾಡಲಾಗುತ್ತದೆ. ಇದು A ಚೆಕ್‌ಗಿಂತ ಸ್ವಲ್ಪ ಬಿನ್ನವಾದ ತಪಾಸಣೆ ಮಾಡಲಾಗುತ್ತದೆ. ವಿಮಾನದ ಕೆಲವು ಭಾಗಗಳನ್ನು ತೆಗೆದು ವಿವರವಾಗಿ ಪರಿಶೀಲಿಸಲಾಗುತ್ತದೆ. ಇದಕ್ಕೆ 1-3 ದಿನಗಳು ಬೇಕಾಗಬಹುದು. C ಚೆಕ್ ಪ್ರತಿ 18-24 ತಿಂಗಳಿಗೊಮ್ಮೆ ನಡೆಯುತ್ತದೆ. ಇದು ವಿಮಾನದ ಸಂಪೂರ್ಣ ತಪಾಸಣೆಯಾಗಿದ್ದು, ಇದಕ್ಕೆ 1-2 ವಾರಗಳು ಬೇಕಾಗಬಹುದು. ವಿಮಾನದ ಎಲ್ಲಾ ಪ್ರಮುಖ ಭಾಗಗಳನ್ನು ತೆಗೆದು, ದುರಸ್ತಿ ಮಾಡಲಾಗುತ್ತದೆ ಅಥವಾ ಬದಲಾಯಿಸಲಾಗುತ್ತದೆ. D ಚೆಕ್ ಪ್ರತಿ 6-10 ವರ್ಷಗಳಿಗೊಮ್ಮೆ ನಡೆಯುತ್ತೆ. ಇದು ಅತ್ಯಂತ ಸಂಕೀರ್ಣ ಮತ್ತು ವೆಚ್ಚದಾಯಕ ತಪಾಸಣೆಯಾಗಿದೆ. ವಿಮಾನವನ್ನು ಸಂಪೂರ್ಣವಾಗಿ ತೆಗೆದು, ಎಲ್ಲಾ ಭಾಗಗಳನ್ನು ವಿವರವಾಗಿ ಪರಿಶೀಲಿಸಲಾಗುತ್ತದೆ. ಇದಕ್ಕೆ 1-2 ತಿಂಗಳು ಬೇಕಾಗಬಹುದು. ಇದನ್ನು ಹೆವಿ ಮೈಂಟೆನೆನ್ಸ್ ಚೆಕ್ ಎಂದೂ ಕರೆಯಲಾಗುತ್ತದೆ.
ಇತರೆ ತಪಾಸಣೆಗಳು..
ತುರ್ತು ತಪಾಸಣೆ: ವಿಮಾನದಲ್ಲಿ ಯಾವುದೇ ಸಮಸ್ಯೆ ಕಂಡುಬಂದರೆ (ಉದಾಹರಣೆಗೆ, ಲ್ಯಾಂಡಿಂಗ್ ಗೇರ್ ಸಮಸ್ಯೆ ಅಥವಾ ಇಂಜಿನ್ ತೊಂದರೆ) ತಕ್ಷಣವೇ ಸಿಬ್ಬಂದಿಗಳು ಎಚ್ಚೆತ್ತುಕೊಂಡು ತಪಾಸಣೆ ನಡೆಸುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ