ಅತಿಯಾಗಿ ಮೊಬೈಲ್​ ಬಳಸುವ ಮುನ್ನ ಎಚ್ಚರ.. ಆರೋಗ್ಯಕ್ಕೆ ಅಪಾಯ ಗ್ಯಾರಂಟಿ..!

author-image
Bheemappa
Updated On
ಅತಿಯಾಗಿ ಮೊಬೈಲ್​ ಬಳಸುವ ಮುನ್ನ ಎಚ್ಚರ.. ಆರೋಗ್ಯಕ್ಕೆ ಅಪಾಯ ಗ್ಯಾರಂಟಿ..!
Advertisment
  • ವಿಶ್ವದಲ್ಲೇ ಅತಿ ಹೆಚ್ಚು ಸಮಯ ಫೋನ್​ನಲ್ಲಿ ಕಳೆಯುವ ದೇಶ?
  • ಮೊಬೈಲ್​​ನಿಂದ ತಲೆನೋವು, ಹೃದಯ, ಮೆದುಳಿನ ಕಾಯಿಲೆ
  • ಫೋನ್ ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತೆ?

ಮಾರುಕಟ್ಟೆಯಲ್ಲಿ ನಾನಾ ವಿಶೇಷತೆ ಇರೋ ಸ್ಮಾರ್ಟ್​ಫೋನ್​ಗಳಿವೆ. ಒಂದಕ್ಕಿಂತ ಒಂದು ವಿಭಿನ್ನ ಎಂಬಂತೇ ಕ್ಯಾಮೆರಾ, ಪ್ರೊಸೆಸರ್​, RAM​, ಬ್ಯಾಟರಿಗಳನ್ನು ಅಳವಡಿಸುವುದರ ಮೂಲಕ ಗ್ರಾಹಕರನ್ನು ಆಕರ್ಷಿಸುವಂತ ದುಬಾರಿ ಬೆಲೆಯ ಫೋನ್​ಗಳು ಮಾರುಕಟ್ಟೆಯಲ್ಲಿವೆ. ಆದರೆ ವಿಚಾರ ಅದಲ್ಲ. ಸ್ಮಾರ್ಟ್​ಫೊನ್​ಗಳು ಬಂದ ಬಳಿಕ ಮಾನವನ ನಡವಳಿಕೆ, ವ್ಯವಹಾರ ಎಲ್ಲವೂ ಬದಲಾಗಿದೆ. ಬೆಳಗ್ಗೆ ಗುಡ್​ ಮಾರ್ನಿಂಗ್​ ಹೇಳುವುದರಿಂದ ರಾತ್ರಿ ಗುಡ್​ನೈಟ್​ ತನಕ ಎಲ್ಲಾ ಕಾರ್ಯವು ಅಂಗೈ ಅಗಲದ ಫೋನ್​ನಲ್ಲಿಯೇ ಮುಗಿದು ಹೋಗುತ್ತದೆ. ಅಷ್ಟರ ಮಟ್ಟಿಗೆ ಜನರು ಫೋನ್​ಗೆ ಅಡಿಕ್ಟ್​ ಆಗಿದ್ದಾರೆ.

ಎಷ್ಟೋ ಜನರು ಫೋನ್​ ಇಲ್ಲದೆ ನಾನಿಲ್ಲ ಎಂಬಂತೆ ಬದುಕುತ್ತಿದ್ದಾರೆ. ಅದರಲ್ಲೂ ಪುಟಾಣಿ ಮಕ್ಕಳು ಕೂಡ ಸ್ಮಾರ್ಟ್​ಫೋನಿಗೆ ಜೋತು ಬಿದ್ದಿರುತ್ತಾರೆ. ಆದರೆ ಒಬ್ಬ ವ್ಯಕ್ತಿ ಪ್ರತಿದಿನ ತಮ್ಮ ಮೊಬೈಲ್​ ಫೋನ್​ ಅನ್ನು ಎಷ್ಟು ಬಾರಿ ಚೆಕ್​ ಮಾಡುತ್ತಾನೆ ಅನ್ನೋ ಮಾಹಿತಿ ಗೊತ್ತಾದ್ರೆ ಶಾಕ್​ ಆಗ್ತೀರಾ.!

publive-image

ಸ್ಮಾರ್ಟ್​ಫೋನ್​ ಬಳಕೆದಾರ ದಿನಕ್ಕೆ 58 ಬಾರಿ ತನ್ನ ಫೋನನ್ನು ಪರಿಶೀಲಿಸುತ್ತಾನಂತೆ. ಅದರಲ್ಲೂ ಬೇರೊಬ್ಬರ ಫೋನ್​ ಸೌಂಡ್​ ಆದರೆ ಸಾಕು. ತನ್ನ ಫೋನ್​ ರಿಂಗ್​ ಆಗುತ್ತಿದ್ದೆಯಾ? ಎಂದು ಒಂದು ಬಾರಿ ತೆರೆದು ನೋಡುತ್ತಾನೆ. ಅಷ್ಟರ ಮಟ್ಟಿಗೆ ಜನರು ಫೋನಿನ ಮೇಲೆ ಅವಲಂಬಿತ ಆಗಿರುವುದಲ್ಲದೇ, ಆಗಾಗ ಪರಿಶೀಲಿಸುತ್ತಿರುತ್ತಾರೆ.

ವಿಶ್ವದಲ್ಲೇ 8ನೇ ಸ್ಥಾನದಲ್ಲಿ ಭಾರತ ಇದೆ

App Annie (ಆ್ಯಪ್​ಎನಿ) ಅನ್ನೋ ಕಂಪನಿ ಈ ಬಗ್ಗೆ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಭಾರತೀಯರು ಪ್ರತಿದಿನ 4.9 ಗಂಟೆಗಳ ಕಾಲ ಸ್ಮಾರ್ಟ್​ಫೋನ್​ನಲ್ಲಿ ಸಮಯ ಕಳೆಯುತ್ತಾರಂತೆ. ಹೀಗಾಗಿ ಈ ವಿಚಾರದಲ್ಲಿ ಭಾರತ ವಿಶ್ವದಲ್ಲೇ 8ನೇ ಸ್ಥಾನದಲ್ಲಿದೆ. ಇನ್ನು ಅಮೆರಿಕನ್ನರು ಸ್ಮಾರ್ಟ್​ಫೋನ್​ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದು, ನಂತರದ ಸ್ಥಾನದಲ್ಲಿ ಚೀನಾ ಮತ್ತು ಇಂಡೋನೇಷ್ಯಾ ಜನರು ಇದ್ದಾರೆ. ಇದು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಜನ ಏನೂ ಬೇಕಾದ್ರೂ ಬಿಡಬಹುದು ಆದರೆ ಮೊಬೈಲ್ ಫೋನ್ ಮಾತ್ರ ಬಿಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಒಂದು ರೀತಿಯಲ್ಲಿ, ನಮ್ಮ ಜೀವನವನ್ನು ಸುಲಭ, ವೇಗ ಮತ್ತು ಅನುಕೂಲಕರವಾಗಿಸಿದೆ. ಸ್ನೇಹಿತರೊಂದಿಗೆ ಸಂಪರ್ಕದಲ್ಲಿ ಇರಬಹುದು. ಪ್ರಪಂಚದ ಬಗ್ಗೆ ಮಾಹಿತಿ ಪಡೆಯಬಹುದು. ದೈನಂದಿನ ಅಗತ್ಯಗಳನ್ನು ಪೂರೈಸಬಹುದು. ಹೀಗೆ ಹಲವಾರು ಲಾಭಗಳು ಮೊಬೈಲ್​​ ಬಳೆಕೆಯಿಂದ ಇವೆ.

ಯಾವುದೇ ವಸ್ತುವಾಗಿರಲಿ ಅವುಗಳಲ್ಲಿ ಒಳ್ಳೆಯದರ ಜೊತೆಗೆ ಕೆಟ್ಟದ್ದು ಇರುತ್ತದೆ. ಫೋನ್ ಬಳಕೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಅದನ್ನು ಹೆಚ್ಚು ಬಳಸುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ನಾವು ಫೋನ್ ಮೇಲೆ ಎಷ್ಟು ಅವಲಂಬಿತರಾಗಿದ್ದೇವೆ ಎಂದರೆ ಅದರ ವ್ಯಸನಿಗಳಾಗಿದ್ದೇವೆ. ಈ ರೀತಿಯ ಅಭ್ಯಾಸ ನಮಗೆ ಅನೇಕ ರೀತಿಯ, ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಫೋನ್ ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?.

ಇದನ್ನೂ ಓದಿ: ವಿಮಾನದ ಇಂಜಿನ್​ಗೆ ಸಿಲುಕಿ ಜೀವ ಬಿಟ್ಟ ವ್ಯಕ್ತಿ.. ದೊಡ್ಡ ಪ್ರಮಾದದಿಂದ 154 ಪ್ರಯಾಣಿಕರು ಸೇಫ್​​!

publive-image

ಮೊಬೈಲ್​​ ಬಳಕೆ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತೆ?

ಮೊಬೈಲ್ ಫೋನ್ ಅತಿಯಾದ ಬಳಕೆ ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೀರ್ಘಕಾಲದ ವರೆಗೆ ಫೋನ್ ಬಳಸೋದರಿಂದ ಕಣ್ಣು ಮಸುಕಾಗುವುದು, ಕಿರಿಕಿರಿಯಂತಹ ಸಮಸ್ಯೆಗಳು ಉಂಟಾಗಬಹುದು. ರಾತ್ರಿ ಮಲಗುವ ಮೊದಲು ಫೋನ್ ಬಳಸುವುದರಿಂದ ಮೆಲಟೋನಿನ್ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಇದು ನಿದ್ರೆಗೆ ತೊಂದರೆ ಉಂಟು ಮಾಡುತ್ತದೆ.

ಇಷ್ಟೇ ಅಲ್ಲ ಫೋನ್​ಗಳನ್ನು ನಿರಂತರವಾಗಿ ಕೈಯಲ್ಲಿ ಹಿಡಿದುಕೊಳ್ಳುವುದು, ಕತ್ತು ಬಗ್ಗಿಸಿ ಮೊಬೈಲ್ ನೋಡುವುದರಿಂದ ದೇಹ ಕೆಟ್ಟ ಭಂಗಿಯಿಂದ ಬಳಲಿದೆ. ಫೋನ್ ಬಳಸುವಾಗ ದೀರ್ಘಕಾಲ ಕುಳಿತುಕೊಳ್ಳುವುದು, ದೈಹಿಕ ಚಟುವಟಿಕೆಯ ಕೊರತೆ, ಒತ್ತಡ, ತಲೆನೋವು, ಹೃದಯ ಮತ್ತು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳ ಅಪಾಯ ಇದೆ ಎನ್ನುತ್ತಾರೆ ತಜ್ಞರು. ಹಾಗಾಗಿ ಮೊಬೈಲ್ ಫೋನ್​ಗಳನ್ನು ಆದಷ್ಟು ಹಾಸಿಗೆಯಿಂದ ದೂರ ಇಡೋದು, ಮಿತವಾಗಿ ಫೋನ್​ ಬಳಸೋದು ಆರೋಗ್ಯಕ್ಕೆ ಒಳ್ಳೆಯದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment