newsfirstkannada.com

ದೆಹಲಿಯಲ್ಲಿ ರೈತರು ಯಾಕೆ ಪ್ರತಿಭಟನೆ ಮಾಡ್ತಿದ್ದಾರೆ? ಅವರ 12 ಬೇಡಿಕೆಗಳು ಇಲ್ಲಿವೆ

Share :

Published February 13, 2024 at 12:23pm

    ರಾಷ್ಟ್ರ ರಾಜಧಾನಿಯಲ್ಲಿ ಅನ್ನದಾತರ ಕಹಳೆ

    ಪ್ರತಿಭಟನೆ ಯಾರ ನೇತೃತ್ವದಲ್ಲಿ ನಡೆಯುತ್ತಿದೆ ಗೊತ್ತಾ?

    ಕರ್ನಾಟಕದ ರೈತರೂ ಪ್ರತಿಭಟನೆಯಲ್ಲಿ ಭಾಗಿ

ತಾವು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯ ಕಾನೂನು ಖಾತರಿ ಮತ್ತು ಇತರೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಅನ್ನದಾತರು ಮತ್ತೆ ಬೀದಿಗೆ ಇಳಿದಿದ್ದಾರೆ. ದೇಶದ ನಾನಾ ಭಾಗಗಳಿಂದ ದೆಹಲಿಗೆ ಹೊರಟಿರುವ ರೈತರು, ಇಂದಿನಿಂದ ರಾಷ್ಟ್ರ ರಾಜಾಧಾನಿಯಲ್ಲಿ ಅನಿರ್ದಿಷ್ಟಾವಧಿಗೆ ಪ್ರತಿಭಟನೆ ನಡೆಸಲಿದ್ದಾರೆ.

ಈ ಹಿಂದೆ ದೆಹಲಿ ಗಡಿಯಲ್ಲಿ ವರ್ಷವಿಡೀ ನಡೆದ ಪ್ರತಿಭಟನೆಯಿಂದ ಎರಡು ವರ್ಷಗಳ ನಂತರ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ತನ್ನ ಮೂರು ನೂತನ ಕಾನೂನುಗಳನ್ನ ವಾಪಸ್ ಪಡೆದುಕೊಂಡಿತ್ತು. ಇದೀಗ ಪಂಜಾಬ್‌ನ ರೈತರು ಹೊಸ ಬೇಡಿಕೆಗಳೊಂದಿಗೆ ರಾಷ್ಟ್ರರಾಜಧಾನಿ ತಲುಪಿದ್ದಾರೆ. ಪಂಜಾಬ್ ರೈತರ ಈ ಹೋರಾಟಕ್ಕೆ ದೇಶದಾದ್ಯಂತ ಅನ್ನದಾತರು ಬೆಂಬಲ ಸೂಚಿಸಿದ್ದಾರೆ.

ರೈತರ ಬೇಡಿಕೆಗಳು ಏನೇನು..?

  1. ತಾವು ಬೆಳೆದ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ (MSP) ಖಾತರಿಪಡಿಸುವ ಕಾನೂನು ತರಲೇಬೇಕು
  2. ಡಾ.ಎಂ.ಎಸ್‌.ಸ್ವಾಮಿನಾಥನ್ ಆಯೋಗದ ವರದಿಯಂತೆ ಬೆಳೆಗಳಿಗೆ ಬೆಲೆ ನಿಗದಿ ಮಾಡಲೇಬೇಕು
  3. ರೈತರು ಮತ್ತು ಕಾರ್ಮಿಕರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲೇಬೇಕು
  4. ಭೂಸ್ವಾಧೀನ ಕಾಯಿದೆ 2013ರ ಅನುಷ್ಠಾನ ಮಾಡೋದಾದ್ರೆ ಭೂಮಿ ಸ್ವಾಧೀನಕ್ಕೂ ಮುನ್ನ ರೈತರಿಂದ ಲಿಖಿತ ಒಪ್ಪಿಗೆ
  5. ಪಡೆಯಬೇಕು. ಜಿಲ್ಲಾಧಿಕಾರಿ ವಿಧಿಸುವ ದರಕ್ಕಿಂತ ನಾಲ್ಕು ಪಟ್ಟು ಪರಿಹಾರವನ್ನು ರೈತರಿಗೆ ನೀಡಬೇಕು
  6. ಅಕ್ಟೋಬರ್ 2021ರಲ್ಲಿ ಲಖಿಂಪುರ ಖೇರಿ ಹತ್ಯಾಕಾಂಡದ ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು
  7. ರೈತರು ಮತ್ತು ಕೃಷಿ ಕಾರ್ಮಿಕರಿಗೆ ಸರ್ಕಾರ ಪಿಂಚಣಿ ಘೋಷಿಸಬೇಕು
  8. ದೆಹಲಿ ಪ್ರತಿಭಟನೆಯ ಸಂದರ್ಭದಲ್ಲಿ ಸಾವನ್ನಪ್ಪಿದ ರೈತರಿಗೆ ಪರಿಹಾರ, ಕುಟುಂಬ ಸದಸ್ಯರಿಗೆ ಉದ್ಯೋಗ ನೀಡಬೇಕು
  9. ವಿದ್ಯುತ್‌ ತಿದ್ದುಪಡಿ ಮಸೂದೆ-2020 ರದ್ದುಪಡಿಸಬೇಕು
  10. MNREGA ಅಡಿಯಲ್ಲಿ ವರ್ಷಕ್ಕೆ 200 (100 ಬದಲಿಗೆ) ದಿನಗಳ ಉದ್ಯೋಗ, ದೈನಂದಿನ ಕೂಲಿ ರೂ 700 ಆಗಿರಬೇಕು. ಈ ಯೋಜನೆಯನ್ನು ಕೃಷಿಗೆ ಲಿಂಕ್ ಮಾಡಬೇಕು
  11. ನಕಲಿ ಬೀಜಗಳು, ಕೀಟನಾಶಕಗಳು, ರಸಗೊಬ್ಬರಗಳನ್ನು ತಯಾರಿಸುವ ಕಂಪನಿಗಳಿಗೆ ಕಠಿಣ ದಂಡವನ್ನು ವಿಧಿಸಬೇಕು. ಬೀಜದ ಗುಣಮಟ್ಟ ಹೆಚ್ಚಿಸಲು ಆಗ್ರಹ
  12. ಮೆಣಸಿನಕಾಯಿ ಮತ್ತು ಅರಿಶಿಣದಂಥ ಮಸಾಲೆಗಳಿಗಾಗಿ ರಾಷ್ಟ್ರೀಯ ಆಯೋಗ ರಚಿಸಬೇಕು

ಪ್ರತಿಭಟನೆಯಲ್ಲಿ ಯಾರೆಲ್ಲ ಭಾಗಿ..?
ಕಿಸಾನ್‌ ಮಜೂರ್ ಮೋರ್ಚಾ ಮತ್ತು 150 ಒಕ್ಕೂಟಗಳ ವೇದಿಕೆಯಾದ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಬ್ಯಾನರ್ ಅಡಿಯಲ್ಲಿ 250 ರೈತ ಸಂಘನೆಗಳು ಪ್ರತಿಭಟನೆ ಮಾಡ್ತಿವೆ. ಸಂಯುಕ್ತ ಕಿಸಾನ್ ಬೋರ್ಚಾ (ರಾಜಕೀಯೇತರ) ಸಂಯುಕ್ತ ಕಿಸಾನ್‌ ಮೋರ್ಚಾದ (SKM) ಒಂದು ವಿಭಜಿತ ಗುಂಪು. ಪಂಜಾಬ್ ಮೂಲದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಸಿಧುಪುರ್ ಫಾರ್ಮ್ ಯೂನಿಯನ್‌ನ ಅಧ್ಯಕ್ಷ ಜಗಜಿತ್ ಸಿಂಗ್ ರಲ್ಲಿ ಮುಖ್ಯ ಪ್ರತಿಭಟನೆಯ ಭಾಗವಾಗಿರಲಿಲ್ಲ. ಪಂಜಾಬ್ ಘರ್ಷ ಸಮಿತಿಯ (ಕೆಎಂಎಸ್‌ಸಿ) ಸಂಚಾಲಕ ಸರ್ವಾನ್ ದಲ್ಲೆವಾಲ್ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ. ಪಂಜಾಬ್ ಮೂಲದ ಯೂನಿಯನ್ ಕಿಸಾನ್ ಮನ್ಸೂರ್ ಸಂಘರ್ಷ ಸಮಿತಿಯ (ಕೆಎಂಎಸ್‌ಸಿ) ಸಂಚಾಲಕ ಸರ್ವಾನ್ ಸಿಂಗ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೆಹಲಿಯಲ್ಲಿ ರೈತರು ಯಾಕೆ ಪ್ರತಿಭಟನೆ ಮಾಡ್ತಿದ್ದಾರೆ? ಅವರ 12 ಬೇಡಿಕೆಗಳು ಇಲ್ಲಿವೆ

https://newsfirstlive.com/wp-content/uploads/2024/02/FARMER-5.jpg

Load More