/newsfirstlive-kannada/media/post_attachments/wp-content/uploads/2024/06/trekking1.jpg)
ಪ್ರಾಕೃತಿಕ ಸೊಬಗನ್ನ ಕಣ್ತುಂಬಿಕೊಳ್ಳಲು ಉತ್ತರಾಖಂಡಕ್ಕೆ ಹೋದವರ ದುರಂತ ಅಂತ್ಯವಾಗಿದೆ. ಈ ಬೆನ್ನಲ್ಲೇ ಕೆಲ ಮೌಂಟೇರಿನಿಂಗ್ ಅಸೋಸಿಯೇಷನ್ ನಿರ್ಲಕ್ಷ್ಯದಿಂದ ಪದೇ ಪದೇ ದುರಂತ ನಡೀತಿದ್ಯಾ? ಅನ್ನೋ ಪ್ರಶ್ನೆ ಶುರುವಾಗಿದೆ. ಹಾಗಾದ್ರೆ ಪ್ರವಾಸಿಗರು ಎಡವುತ್ತಿರುವುದು ಎಲ್ಲಿ? ಮಾಡ್ತಿರೋ ತಪ್ಪೇನು? ಹೀಗೆ ಟ್ರಕ್ಕಿಂಗ್​ ಹೋಗ್ಬೇಕು ಅಂದ್ರೆ ಏನೆಲ್ಲಾ ಸೇಫ್ಟಿ ಮೆಷರ್​​ ಫಾಲೋ ಮಾಡಬೇಕು ಎಂಬುವುದರ ಬಗ್ಗೆ ಈ ಸ್ಟೋರಿಯಲ್ಲಿ ಮಾಹಿತಿ ನೀಡಲಾಗಿದೆ.
/newsfirstlive-kannada/media/post_attachments/wp-content/uploads/2024/06/trekking.jpg)
ಇದನ್ನೂ ಓದಿ: OYO ರೂಮ್ ಬುಕ್ ಮಾಡಿದ ಸ್ನೇಹಿತ, ಭೇಟಿಗೆ ಬಂದಳು ಸ್ನೇಹಿತೆ.. ಮುಂದೆ ಆಗಿದ್ದು ನೀವು ಊಹಿಸೋಕೆ ಆಗಲ್ಲ
ಟ್ರಕ್ಕಿಂಗ್​ ಹೋಗಬೇಕು. ಪರಿಸರವನ್ನ ಎಕ್ಸ್​​ಪ್ಲೋರ್​ ಮಾಡಬೇಕು ಅನ್ನೋದು ಅದೇಷ್ಟೋ ಜನರ ಆಸೆ. ಅದರಲ್ಲೂ ಉತ್ತರಕಾಶಿಯ ಹಿಮವನ್ನ ಜೀವನದಲ್ಲಿ ಒಂದು​ ಸರಿ ಫೀಲ್​ ಮಾಡಬೇಕು ಅನ್ನೋದು ಹಲವರ ಕನಸ್ಸಾಗಿರುತ್ತೆ. ಹೀಗಾಗಿಯೇ ಸ್ವಲ್ಪ ರಿಸ್ಕ್​ ಅನ್ಸಿದ್ರು, ಪ್ರವಾಸಿಗರು ಸಿಕ್ಕ ಸಿಕ್ಕ ಏಜೆನ್ಸಿಗಳ ಮೂಲಕ ಅಲ್ಲಿಗೆ ಹೋಗೋಕೆ ಮುಂದಾಗಿ ಬಿಡುತ್ತಾರೆ. ಆದ್ರೆ ಹೀಗೆ ಹೋದಾಗಲೆಲ್ಲಾ ಏನಾದ್ರೂ ಒಂದು ದುರಂತ ಸಂಭವಿಸಿಯೇ ಬಿಡುತ್ತೆ. ಅದಕ್ಕೆ ನೈಜ ಉದಾಹರಣೆ ಮೊನ್ನೆ ನಡೆದ ಘೋರ ದುರಂತ.
/newsfirstlive-kannada/media/post_attachments/wp-content/uploads/2024/06/trekking2.jpg)
ಟ್ರಕ್ಕಿಂಗ್​ಗೆ ಹೋಗೋ ಮುನ್ನ ಏನೆಲ್ಲಾ​ ರೂಲ್ಸ್​ ಫಾಲೋ ಮಾಡಬೇಕು?
ಮೊದಲಿಗೆ ದೆಹಲಿಯಲ್ಲಿರುವ ಇಂಡಿಯನ್ ಮೌಂಟೇನೇರಿಯನ್ ಫೌಂಡೇಷನ್​ಗೆ ಮಾಹಿತಿ ಕೊಡಬೇಕು. ಜೊತೆಗೆ ಕೆಲವೊಂದು ಅಗತ್ಯ ಮಾಹಿತಿಗಳನ್ನ ಪಡೆದುಕೊಳ್ಳಬೇಕು. ಟ್ರಕ್ಕಿಂಗ್ ಮಾಡುವ ಒಂದು ವಾರದ ಹವಮಾನ ಮಾಹಿತಿ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಹಾಗೂ ಯಾವ ಪ್ರದೇಶಕ್ಕೆ ಹೋಗ್ತಾರೋ ಅಲ್ಲಿನ ಬ್ಲೂ ಪ್ರಿಂಟ್ ಹೊಂದಿರಬೇಕು. ಸಾಮಾನ್ಯವಾಗಿ ಮೇ- ಜೂನ್​ನಲ್ಲಿ ಹಿಮಪಾತ ಹೆಚ್ಚಿರೋದ್ರಿಂದ ಯಾವ ಟೈಂನಲ್ಲಿ ಟ್ರಕ್ಕಿಂಗ್ ಮಾಡಬೇಕು ಅನ್ನೋದನ್ನು ತಿಳಿದರಬೇಕು. ಒಂದು ವೇಳೆ ಸಮಸ್ಯೆಯಾದ್ರೆ, ಎಮರ್ಜೆನ್ಸಿ ಟೈಂನಲ್ಲಿ ಯಾರಿಗೆ ಕಾಲ್​ ಮಾಡಬೇಕು ಅನ್ನೋದು ತಿಳಿದಿರಬೇಕು. ಬಟ್ ಹೆಚ್ಚಿನ ಮೌಂಟರೇನಿಂಗ್ ಅಸೋಸಿಯೇಷನ್ ಈ ರೀತಿಯ ಯಾವುದೇ ನಿಮಯ ಫಾಲೋ ಮಾಡದ ಕಾರಣ ದುರಂತಗಳು ಸಂಭವಿಸುತ್ತಿದೆ ಅನ್ನೋ ವಿಚಾರ ಹೊರ ಬಂದಿದೆ.
/newsfirstlive-kannada/media/post_attachments/wp-content/uploads/2024/06/trekking3.jpg)
ಒಟ್ಟಿನಲ್ಲಿ ಇಷ್ಟೆಲ್ಲಾ ನೀತಿ ನಿಯಮಗಳು ಇದ್ರೂ ಕೂಡ ಪ್ರೈವೆಟ್​ ಏಜೆನ್ಸಿಗಳು ನಿಯಮಗಳನ್ನು ಗಾಳಿಗೆ ತೂರಿದ್ದು, ಚಾರಣಿಗಳನ್ನ ಕರೆದುಕೊಂಡು ಹೋಗ್ತಿರುವ ಅಸೋಸೊಯೇಷನ್​ ನಿರ್ಲಕ್ಷ್ಯದಿಂದಲೇ ಇಷ್ಟೆಲ್ಲಾ ದುರಂತವಾಗ್ತಿರೋ ಆರೋಪ ಕೇಳಿಬಂದಿದೆ. ವೋನ್​ ರಿಸ್ಕ್​ನಲ್ಲಿ ಟ್ರಕ್ಕಿಂಗ್​ ಹೋಗೋದು ತಪ್ಪಲ್ಲಾ. ಆದ್ರೆ ಸಿಕ್ಕ ಸಿಕ್ಕ ಏಜೆನ್ಸಿಗಳನ್ನ ಬ್ಲೈಂಡ್​ ಆಗಿ ನಂಬೋದು ತಪ್ಪು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us