newsfirstkannada.com

ದರ್ಶನ್‌ ಗ್ಯಾಂಗ್ ವಿರುದ್ಧ 8 ಹೊಸ ಸೆಕ್ಷನ್‌ ಸೇರಿಸಿದ ಪೊಲೀಸರು.. ಯಾವ್ಯಾವ ಸೆಕ್ಷನ್‌ಗೆ ಎಷ್ಟು ವರ್ಷ ಶಿಕ್ಷೆ?

Share :

Published June 20, 2024 at 1:10pm

    ಆರೋಪಿಗಳನ್ನ ಕೋರ್ಟ್‌ಗೆ ಹಾಜರುಪಡಿಸುತ್ತಿರುವ ಪೊಲೀಸರು

    ಮೊದಲು 302- ಕೊಲೆ, 201-ಸಾಕ್ಷ್ಯನಾಶ ಅಡಿಯಲ್ಲಿ ಪ್ರಕರಣ ದಾಖಲು

    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಹೊಸದಾಗಿ 8 ಐಪಿಸಿ ಸೆಕ್ಷನ್‌ಗಳು ಸೇರ್ಪಡೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟ ದರ್ಶನ್ ಗ್ಯಾಂಗ್‌ಗೆ ಇವತ್ತು ಡಿ ಡೇ. ಅಂದ್ರೆ ಕೊಲೆ ಕೇಸ್‌ನಲ್ಲಿ ದರ್ಶನ್ ಅವರ ಗ್ಯಾಂಗ್‌ ಕೃತ್ಯದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಕೋರ್ಟ್‌ಗೆ ವರದಿ ಸಲ್ಲಿಸುತ್ತಿದ್ದಾರೆ. ಇವತ್ತು ಕೋರ್ಟ್‌ಗೆ ಹಾಜರಾಗುತ್ತಿರುವ ಆರೋಪಿಗಳಿಗೆ ಡೇಂಜರ್ ಡೇ ಆಗಿದೆ.

ಕೊಲೆ ಕೇಸ್‌ನಲ್ಲಿ ಸಿಕ್ಕಿಬಿದ್ದಿರುವ ದರ್ಶನ್ ಹಾಗೂ ಇತರೆ ಆರೋಪಿಗಳ ಕಸ್ಟಡಿ ಅವಧಿ ಇಂದಿಗೆ ಅಂತ್ಯವಾಗುತ್ತಿದೆ. ಕಸ್ಟಡಿ ಎಂಡ್ ಆಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನ ಇಂದು ಕೋರ್ಟ್‌ಗೆ ಹಾಜರುಪಡಿಸುತ್ತಿದ್ದಾರೆ. ಆರೋಪಿಗಳ ಹಾಜರಾತಿ ಜೊತೆಗೆ ತನಿಖೆ ನಡೆಸಿರುವ ಪೊಲೀಸರು ತನಿಖೆಯ ರಿಪೋರ್ಟ್ ಅನ್ನು ಕೋರ್ಟ್‌ಗೆ ಸಲ್ಲಿಸುತ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಈ ಮೊದಲು 302- ಕೊಲೆ, 201-ಸಾಕ್ಷ್ಯನಾಶ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಹೊಸದಾಗಿ 8 ಐಪಿಸಿ ಸೆಕ್ಷನ್‌ಗಳು ಸೇರ್ಪಡೆಯಾಗಿರುವುದರಿಂದ ಆರೋಪಿಗಳ ವಿರುದ್ಧ ಕಾನೂನಿನ ಕುಣಿಕೆ ಬಿಗಿಯಾಗಿದೆ. ದರ್ಶನ್ ಗ್ಯಾಂಗ್ ವಿರುದ್ಧ 120B, 364, 355, 384, 143, 147,148 ಅಡಿ ಕೇಸ್ ದಾಖಲು ಮಾಡಲಾಗಿದೆ.

ಇದನ್ನೂ ಓದಿ: 7 ಕಡೆ ಮುರಿದಿರೋ ಮೂಳೆ, 8 ಬಾರಿ ಎಲೆಕ್ಟ್ರಿಕ್ ಶಾಕ್.. ರೇಣುಕಾಸ್ವಾಮಿಗೆ ‘ಡಿ’ ಗ್ಯಾಂಗ್ ಕೊಟ್ಟ ಚಿತ್ರಹಿಂಸೆ ಹೀಗಿದೆ 

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ರಿಮ್ಯಾಂಡ್ ಅರ್ಜಿಯಲ್ಲಿ ಹಲವು ಸೆಕ್ಷನ್‌ಗಳನ್ನು ಸೇರಿಸಿದ್ದಾರೆ. ಆ ಸೆಕ್ಷನ್‌ಗಳು ಯಾವುವು? ಆ ಸೆಕ್ಷನ್‌ಗಳಲ್ಲಿ ಆರೋಪ ಸಾಬೀತಾದ್ರೆ ಎಷ್ಟು ವರ್ಷ ಶಿಕ್ಷೆ ಆಗುತ್ತೆ ಅನ್ನೋ ವಿವರ ಇಲ್ಲಿದೆ ನೋಡಿ.

ಯಾವ್ಯಾವ ಸೆಕ್ಷನ್‌ಗೆ ಎಷ್ಟು ವರ್ಷ ಶಿಕ್ಷೆ?

  • 302 ವ್ಯಕ್ತಿ ಹತ್ಯೆ – ಜೀವಾವಧಿ ಶಿಕ್ಷೆ
  • 364 ಅಪಹರಣ – ಜೀವಾವಧಿ ಶಿಕ್ಷೆ
  • 201 ಸಾಕ್ಷಿ ನಾಶ – ಜೀವಾವಧಿ
  • 120 B ಒಳಸಂಚು – 2 ವರ್ಷ ಮೇಲ್ಪಟ್ಟು ಅಥವಾ ಜೀವಾವಧಿ ಶಿಕ್ಷೆ
  • 355 ಕ್ರಿಮಿನಲ್ ಬಲ ಪ್ರಯೋಗ 2 ವರ್ಷ ಜೈಲು ಶಿಕ್ಷೆ
  • 384 ಸುಲಿಗೆ – 3 ವರ್ಷ ಜೈಲು ಶಿಕ್ಷೆ
  • 143 ಅಕ್ರಮ ಕೂಟ – 6 ತಿಂಗಳು ಜೈಲು ಶಿಕ್ಷೆ
  • 147 ಗಲಭೆ – 2 ವರ್ಷ
  • 148 ಮಾರಕ ಆಯುಧಗಳ ಬಳಕೆ – 3 ವರ್ಷ ಶಿಕ್ಷೆ
  • R/w 149 – ಗುಂಪು ಸೇರಿ ಹಲ್ಲೆ 2 ವರ್ಷ ಶಿಕ್ಷೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್‌ ಗ್ಯಾಂಗ್ ವಿರುದ್ಧ 8 ಹೊಸ ಸೆಕ್ಷನ್‌ ಸೇರಿಸಿದ ಪೊಲೀಸರು.. ಯಾವ್ಯಾವ ಸೆಕ್ಷನ್‌ಗೆ ಎಷ್ಟು ವರ್ಷ ಶಿಕ್ಷೆ?

https://newsfirstlive.com/wp-content/uploads/2024/06/DARSHAN-40.jpg

Load More