/newsfirstlive-kannada/media/post_attachments/wp-content/uploads/2025/01/MAUNI-AMAVASYA.jpg)
ಮೌನಿ ಅಮವಾಸ್ಯೆಯಂದು ನದಿಯಲ್ಲಿ ಸ್ನಾನ ಮಾಡುವುದು ಅತ್ಯಂತ ಶ್ರೇಷ್ಠಕರ ಎಂದು ವೇದಿಕ ಪಂಚಾಂಗ ಹಾಗೂ ಹಿಂದೂ ಪಂಚಾಂಗಗಳು ಹೇಳುತ್ತವೆ. ಈ ಅಮವಾಸ್ಯೆಯಂದು ನದಿಯಲ್ಲಿ ಸ್ನಾನ ಮಾಡುವುದರಿಂದ ಮಾಡಿರುವ ಪಾಪಗಳೆಲ್ಲಾ ತೊಳೆದು ಹೋಗುತ್ತವೆ ಎಂದು ಹೇಳಲಾಗುತ್ತದೆ. ಇದನ್ನು ಮಾಘಿ ಅಮವಾಸ್ಯೆ ಎಂದು ಕೂಡ ಕರೆಯುತ್ತಾರೆ. ಮೌನಿ ಅಮವಾಸ್ಯೆ ಅಥವಾ ಮಾಘಿ ಇದೇ ತಿಂಗಳು 29 ರಂದು ಬರಲಿದೆ. ಸಿದ್ಧಿ ಯೋಗದಂದೇ ಮೌನಿ ಅಮವಾಸ್ಯೆಯನ್ನು ಆಚರಿಸಲಾಗುವುದು.ಈ ದಿನ ಗಂಗೆಯಲ್ಲಿ ಮಿಂದೆದ್ದು ದಾನ ಧರ್ಮಗಳನ್ನು ಮಾಡುವುದರಿಂದ ಬದುಕಿನಲ್ಲಿ ಶುಭ ದಿನಗಳು ಆರಂಭವಾಗುತ್ತವೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಕುಂಭ ಮೇಳಕ್ಕೆ ಹೋದ ರಾಯಚೂರು ಸ್ವಾಮೀಜಿ.. ಅಧಿಕಾರಿಗಳಿಂದ ಮಠಕ್ಕೆ JCB ನುಗ್ಗಿಸಿ ನೆಲಸಮ..!
ಇನ್ನು ಮೌನಿ ಅಮವಾಸ್ಯೆಯಂದು ಪಿತೃಗಳ ಆತ್ಮಶಾಂತಿಗಾಗಿ ಮತ್ತು ಮೋಕ್ಷಕ್ಕಾಗಿ ಶ್ರಾದ್ಧ, ತರ್ಪಣ ಮತ್ತು ಪಿಂಡದಾನವನ್ನು ಕೂಡ ಮಾಡಬಹುದು. ಈ ರೀತಿ ಮಾಡುವುದರಿಂದ ಪಿತೃದೋಷಗಳು ಪರಿಹಾರವಾಗುತ್ತವೆ ಮತ್ತು ಕುಟುಂಬದ ಸದಸ್ಯರಿಗೆ ಪಿತೃಗಳ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆಯೂ ಇದೆ. ಈ ಅಮವಾಸ್ಯೆಯಂದು ಮಾಡುವ ಕೆಲವು ಕಾರ್ಯಗಳು ಫಲದಾಯಕ ಆಗಿರುತ್ತವೆ ಇನ್ನೂ ಕೆಲವು ಆಚರಿಸಲಾರದಂತಹ ಕಾರ್ಯಗಳು ಆಗಿರುತ್ತವೆ.
ಮೌನಿ ಅಮವಾಸ್ಯೆಯಂದು ಏನು ಮಾಡಬೇಕು?
ಮುಂಜಾನೆ ಬೇಗನೆ ಎದ್ದು ಬ್ರಾಹ್ಮಿ ಮುಹೂರ್ತದಲ್ಲಿ ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಬೇಕು. ಇದು ಸಾಧ್ಯವಾಗದಿದ್ದಲ್ಲಿ ಮನೆಯ ನೀರಿನಲ್ಲಿಯೇ ಗಂಗಾಜಲವನ್ನು ಸೇರಿಸಿ ಸ್ನಾನ ಮಾಡಬೇಕು. ಸ್ನಾನದ ಬಳಿಕ ಸೂರ್ಯದೇವನಿಗೆ ಅರ್ಘ್ಯ ನೀಡಬೇಕು ಮತ್ತು ಸೂರ್ಯದೇವನ ಆರಾಧನೆ ಮಾಡಬೇಕು. ಈ ದಿನದಂದು ಪೂರ್ವಜರ ಆತ್ಮಶಾಂತಿಗಾಗಿ ಶ್ರಾದ್ಧ, ತರ್ಪಣ ಹಾಗೂ ಪಿಂಡಪ್ರಧಾನ ಕಾರ್ಯವನ್ನು ತಪ್ಪದೇ ಮಾಡಬೇಕು. ಇನ್ನು ಈ ದಿನ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ಮೌನಿ ಅಮವಾಸ್ಯೆಯ ದಿನ ಜಗತ್ ಪಾಲಕ ಶ್ರೀವಿಷ್ಣು, ಲಕ್ಷ್ಮೀಮಾತೆ, ತುಳಸಿ ಗಿಡ ಹಾಗೂ ಗಂಗೆಯ ಪೂಜೆಯನ್ನು ಮಾಡಬೇಕು. ಈ ಅಮವಾಸ್ಯೆಯಂದು ಮೌನವೃತ ಇಲ್ಲವೇ ಉಪವಾಸ ಮಾಡುವುದರಿಂದ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ.
ಮೌನಿ ಅಮವಾಸ್ಯೆಯಂದು ಏನೆಲ್ಲಾ ಮಾಡಬಾರದು?
ಮೌನಿ ಅಮವಾಸ್ಯೆಯ ದಿನ ಉಗುರು, ಗಡ್ಡ ಹಾಗೂ ಕೂದಲನ್ನು ಕತ್ತರಿಸಬಾರದು
ಈ ಅಮವಾಸ್ಯೆಯಂದು ಮದುವೆ, ಮುಂಜಿವೆ, ನಿಶ್ಚಿತಾರ್ಥ ಹಾಗೂ ಗೃಹಪ್ರವೇಶದಂತ ಮಂಗಳಕರ ಕಾರ್ಯಗಳನ್ನು ಇಟ್ಟುಕೊಳ್ಳಬಾರದು
ಮೌನಿ ಅಮವಾಸ್ಯೆಯಂದು ಮಾಂಸ, ಮದ್ಯ ಸೇರಿದಂತೆ ತಾಮಸಿಕ ಆಹಾರವನ್ನು ಸೇವನೆ ಮಾಡಬಾರದು. ಮತ್ತು ಈ ದಿನ ಯಾರೊಂದಿಗೂ ವಾದ ವಿವಾದಕ್ಕೆ
ಇಳಿಯಬಾರದು ಆಮೇಲೆ ಮನೆಯ ಹಿರಿಯರಿಗೆ ಅಪಮಾನ ಹಾಗೂ ಅಪಚಾರ ಆಗದಂತೆ ನೋಡಿಕೊಳ್ಳಬೇಕು. ಮೌನಿ ಅಮವಾಸ್ಯೆಯ ದಿನ ತುಳಸಿ ಗಿಡಕ್ಕೆ ನೀರು ಹಾಕುವುದು ನಿಷಿದ್ಧ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ