/newsfirstlive-kannada/media/post_attachments/wp-content/uploads/2024/12/R-ASHWIN.jpg)
ಭಾರತ ಕ್ರಿಕೆಟ್ ತಂಡದ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ನಿವೃತ್ತಿ ಘೋಷಿಸಿದ್ದು ಅನೇಕರಿಗೆ ಆಶ್ಚರ್ಯದ ಜೊತೆಗೆ ಕೊಂಚ ನೋವನ್ನೂ ಕೂಡ ಉಂಟು ಮಾಡಿದೆ. ತಮ್ಮ 38ನೇ ವಯಸ್ಸಿಗೆ ಕ್ರಿಕೆಟ್ ಅಂಗಳಕ್ಕೆ ಗುಡ್ ಬೈ ಹೇಳಿದ ಆರ್ ಅಶ್ವಿನ್ಗೆ ಶುಭಾಶಯಗಳ ಜೊತೆಗೆ ಮಿಸ್ ಯೂ ಲೆಜೆಂಡ್ ಅಂತೆಲ್ಲಾ ಹೇಳುತ್ತಿದ್ದಾರೆ. ಆರಂಭದಲ್ಲಿ ಆರ್ ಅಶ್ವಿನ್ ನಿವೃತ್ತಿ ಘೋಷಿಸಿದ್ದು ಕೇವಲ ರೂಮರ್ಸ್ ಎಂದೇ ಹೇಳಲಾಗಿತ್ತು. ಆದರೆ ಅಶ್ವಿನ್ ನಿವೃತ್ತಿಯನ್ನು ಸದ್ಯ ಬಿಸಿಸಿಐಯೇ ಅಧಿಕೃತಗೊಳಿಸಿದೆ
ಇದನ್ನೂ ಓದಿ: ಅಶ್ವಿನ್ ನಿವೃತ್ತಿ.. ಭಾವುಕರಾದ ಸ್ಪಿನ್ ಮಾಂತ್ರಿಕನನ್ನು ತಬ್ಬಿಕೊಂಡು ಸಂತೈಸಿದ ಕೊಹ್ಲಿ – Video
ತನ್ನ ಟ್ವಿಟರ್ ಖಾತೆಯಲ್ಲಿ ಅಶ್ವಿನ್ ನಿವೃತ್ತಿ ಬಗ್ಗೆ ಪೋಸ್ಟ್ ಮಾಡಿ ದೃಢಿಕರೀಸಿರುವ ಬಿಸಿಸಿಐ ಎಲ್ಲಾ ಊಹಾಪೋಹಗಳಿಗೆ ವಿರಾಮವಿಟ್ಟಿದೆ. ಥ್ಯಾಂಕ್ಯು ಅಶ್ವಿನ್, ಈ ಹೆಸರಲ್ಲಿಯೇ ಒಂದು ಮಾಂತ್ರಿಕತೆ, ನಾವಿನ್ಯತೆ, ಪಾಂಡಿತ್ಯ ಹಾಗೂ ತೇಜಸ್ಸು ಇದೆ. ಸ್ಪಿನ್ ಮಾಂತ್ರಿಕ ಹಾಗೂ ಭಾರತ ತಂಡದ ಆಲ್ರೌಂಡರ್ ಆಟಗಾರ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಈ ದಿಗ್ಗಜ ಆಟಗಾರನಿಗೆ ಶುಭಾಶಯಗಳು ಎಂದು ಹೇಳಿದೆ.
ಇದನ್ನೂ ಓದಿ:Ashwin: ಪದೇ ಪದೆ ಬೆಂಚ್ ಕಾಯಿಸ್ತಿದ್ದ ಕ್ಯಾಪ್ಟನ್, ಕೋಚ್ -ಅಶ್ವಿನ್ ದಿಢೀರ್ ನಿವೃತ್ತಿಗೆ ಅಸಲಿ ಕಾರಣ ಇಲ್ಲಿದೆ..!
ಒಟ್ಟು 106 ಟೆಸ್ಟ್ ಮ್ಯಾಚ್ಗಳನ್ನು ಆಡಿರುವ ಅಶ್ವಿನ್ ಒಟ್ಟು 537 ವಿಕೆಟ್ಗಳನ್ನು ಕಬಳಿಸಿದ್ದರು. ಐದು ದಿನದ ಟೆಸ್ಟ್ ಮಾದರಿಯ ಕ್ರಿಕೆಟ್ನಲ್ಲಿ ಕುಂಬ್ಳೆ ಈ ಹಿಂದೆ 619 ವಿಕೆಟ್ಗಳನ್ನು ಉರುಳಿಸಿ ಸಾಧನೆ ಮಾಡಿದ್ದರು.
ಅಶ್ವಿನ್ ಒಟ್ಟು 41ವಿಶ್ವ ಚಾಂಪಿಯನ್ಶಿಪ್ ಮ್ಯಾಚ್ಗಳನ್ನು ಆಡಿದ್ದು 195 ವಿಕೆಟ್ಗಳನ್ನು ಪಡೆದಿದ್ದಾರೆ. ವಿಶ್ವ ಚಾಂಪಿಯನ್ಶಿಪ್ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಆಟಗಾರರಾಗಿ ಅಶ್ವಿನ್ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕಟ್ ಆಚೆ 116 ಏಕ ದಿನ ಪಂದ್ಯಗಳನ್ನು ಅಶ್ವಿನ್ ಆಡಿದ್ದಾರೆ ಹಾಗೂ 65 ಟಿ20 ಪಂದ್ಯಗಳನ್ನು ಆಡಿದ್ದು ತಲಾ 156 ಮತ್ತು 72 ವಿಕೆಟ್ಗಳನ್ನು ಕಬಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ