/newsfirstlive-kannada/media/post_attachments/wp-content/uploads/2024/07/Rishi-Sunak-England-1.jpg)
ಲಂಡನ್: ಇಂಗ್ಲೆಂಡ್ ಸಾರ್ವತ್ರಿಕ ಚುನಾವಣೆಯ ಬಹುನಿರೀಕ್ಷಿತ ಫಲಿತಾಂಶ ಕೊನೆಗೂ ಹೊರ ಬಿದ್ದಿದೆ. ಇಂಗ್ಲೆಂಡ್‌ನಲ್ಲಿ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬೆಂಗಳೂರಿನ ಅಳಿಯ ರಿಷಿ ಸುನಕ್ ಅವರ ಅಧಿಕಾರದ ಅವಧಿ ಅಂತ್ಯವಾಗಿದೆ.
ಇದನ್ನೂ ಓದಿ: ಇಂಗ್ಲೆಂಡ್ ನೂತನ ಪ್ರಧಾನಿ ಕೀರ್ ಸ್ಟಾರ್ಮರ್.. ಯಾರು ಈ ಕಾರ್ಮಿಕ ನಾಯಕ? ಇವರ ಹಿನ್ನೆಲೆ ಏನು?
ಭಾರತೀಯ ಮೂಲದ ರಿಷಿ ಸುನಕ್ ಅವರ ಕನ್ಸರ್ವೇಟೀವ್ ಪಕ್ಷ ಹೀನಾಯ ಸೋಲು ಕಂಡಿದ್ದು, ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ 14 ವರ್ಷಗಳ ಬಳಿಕ ಲೇಬರ್ ಪಕ್ಷಕ್ಕೆ ಅಧಿಕಾರದ ಗದ್ದುಗೆ ಏರಿದೆ. ಲೇಬರ್ ಪಕ್ಷದ ನಾಯಕ ಕೈರ್ ಸ್ಟಾರ್ಮರ್ ಇಂಗ್ಲೆಂಡ್ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಇಂಗ್ಲೆಂಡ್‌ನಲ್ಲಿ ಹೊಸ ರಾಜಕೀಯ ಯುಗಾರಂಭ
ಲೇಬರ್ ಪಾರ್ಟಿ ಈಗ ಬ್ರಿಟಿಷ್ ಸಾಮ್ರಾಜ್ಯದ ಅಧಿಪತಿ
ಸೂರ್ಯ ಮುಳುಗದ ನಾಡು ಎಂದೇ ಕರೆಸಿಕೊಳ್ಳುವ ಇಂಗ್ಲೆಂಡ್ನ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆ ಹೊಸ ಯುಗಾರಂಭಕ್ಕೆ ನಾಂದಿ ಹಾಡಿದೆ. 650 ಸ್ಥಾನಗಳಿಗೆ ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಲೇಬರ್ ಪಾರ್ಟಿ ಪಕ್ಷ 326 ಸೀಟ್ಗಳನ್ನು ಗೆಲ್ಲುವ ಮೂಲಕ ಬ್ರಿಟಿಷ್ ಸಾಮ್ರಾಜ್ಯದ ಅಧಿಪತಿಯಾಗಿ ಹೊರಹೊಮ್ಮಿದೆ.
14 ವರ್ಷಗಳ ಬಳಿಕ ಲೇಬರ್ ಪಕ್ಷ ಅಧಿಕಾರದ ಗದ್ದುಗೆ
ಲೇಬರ್ ಪಕ್ಷದ ನಾಯಕ ಕೈರ್ ಸ್ಟಾರ್ಮರ್ ಬ್ರಿಟನ್ ಪ್ರಧಾನಿ
ಸತತ 14 ವರ್ಷಗಳಿಂದ ಇಂಗ್ಲೆಂಡ್‌ನಲ್ಲಿ ಕನ್ಸರ್ವೇಟೀವ್ ಪಾರ್ಟಿಯೇ ಅಧಿಕಾರದಲ್ಲಿತ್ತು. ಇದೀಗ ನಡೆದ ಇಂಗ್ಲೆಂಡ್ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಿರೀಕ್ಷೆಯಂತೆ ಲೇಬರ್ ಪಕ್ಷಕ್ಕೆ ಭರ್ಜರಿ ಗೆಲುವು ಸಾಧಿಸಿದೆ. ಇಂಗ್ಲೆಂಡ್‌ನಲ್ಲಿ 14 ವರ್ಷಗಳ ಬಳಿಕ ಲೇಬರ್ ಪಕ್ಷಕ್ಕೆ ಅಧಿಕಾರದ ಗದ್ದುಗೆ ಏರಿದೆ. ಲೇಬರ್ ಪಕ್ಷದ ನಾಯಕ ಕೈರ್ ಸ್ಟಾರ್ಮರ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಮತ್ತೊಂದು ವಿಶೇಷವೆಂದರೇ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರೋ ಕೈರ್ ಸ್ಟಾರ್ಮರ್, ಕರ್ನಾಟದ ನೀರಜ್ ಪಾಟೀಲ್ ಜೊತೆ ಬಸವೇಶ್ವರರಿಗೆ ಗೌರವ ಸಮರ್ಪಿಸಿದ್ದ ಫೋಟೋ ಕೋಟಿ, ಕೋಟಿ ಭಾರತೀಯರ ಗಮನ ಸೆಳೆದಿದೆ.
ಸೋಲಿನಲ್ಲೂ ಸಂಪ್ರದಾಯ ಬಿಡದ ರಿಷಿ ಸುನಕ್!
ರಿಷಿ ಸುನಕ್ ಅವರು ಕಳೆದ 2022ರಲ್ಲಿ ಇಂಗ್ಲೆಂಡ್ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಸುನಕ್ ಅವರ ಕನ್ಸರ್ವೇಟೀವ್ ಪಕ್ಷ ಚುನಾವಣೆಯಲ್ಲೂ ಸೋತರು, ರಿಷಿ ತಮ್ಮ ರಿಚಮಂಡ್ ಅಂಡ್ ನಾರ್ತರಲಂಟನ್ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್‌ನಲ್ಲಿ ಹಾಲಿ ಪ್ರಧಾನಮಂತ್ರಿಗಳು ಇದುವರೆಗೂ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋತಿಲ್ಲ. ಅದೇ ಸಂಪ್ರದಾಯ, ಪರಂಪರೆಯನ್ನು ರಿಷಿ ಸುನಕ್ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಸೋಲಿನ ಬೆನ್ನಲ್ಲೇ I am sorry ಎಂದ ಸುನಕ್.. ನೂತನ ಪ್ರಧಾನಿಯಿಂದ ಬಸವಣ್ಣನಿಗೆ ಗೌರವ ಸಲ್ಲಿಕೆ
ವಿದಾಯಕ್ಕೆ ರಿಷಿ ಭಾವುಕ!
ಚುನಾವಣಾ ತೀರ್ಪನ್ನು ಸ್ವಾಗತಿಸಿರುವ ರಿಷಿ ಸುನಕ್ ಅವರು, ಇವತ್ತು ನನಗೆ ತುಂಬಾ ಕಠಿಣವಾದ ದಿನ. ಜನರ ಆದೇಶಕ್ಕೆ ತಲೆ ಬಾಗಿದ್ದೇನೆ. ವಿಶ್ವದ ಅತ್ಯುತ್ತಮ ದೇಶದ ಪ್ರಧಾನಿ ಹುದ್ದೆಗೆ ಗೌರವದಿಂದ ವಿದಾಯ ಹೇಳುತ್ತಿದ್ದೇನೆ ಎಂದಿದ್ದಾರೆ.
I have given this job my all. But you have sent a clear message, and yours is the only judgement that matters.
This is a difficult day, but I leave this job honoured to have been Prime Minister of the best country in the world.https://t.co/EhNsfIaGWM
— Rishi Sunak (@RishiSunak)
I have given this job my all. But you have sent a clear message, and yours is the only judgement that matters.
This is a difficult day, but I leave this job honoured to have been Prime Minister of the best country in the world.https://t.co/EhNsfIaGWM— Rishi Sunak (@RishiSunak) July 5, 2024
">July 5, 2024
ರಿಷಿ ಸೋಲಿಗೆ ಕಾರಣವೇನು?
ಜನವಿರೋಧಿ ಆಡಳಿತ ನೀತಿಯಿಂದ ಕನ್ಸರ್ವೇಟೀವ್ ಪಕ್ಷಕ್ಕೆ ಹಿನ್ನಡೆ
ಬರೋಬ್ಬರಿ 14 ವರ್ಷಗಳ ಬಳಿಕ ಅಧಿಕಾರಕ್ಕೇರಿದ ಲೇಬರ್ ಪಕ್ಷ
ಬಲಪಂಥೀಯ ನಿಲುವಿನಿಂದ ದೂರವಿರುವ ಪಾರ್ಟಿ
ಸ್ವತಂತ್ರ ನಿಲುವುಗಳನ್ನು ಹೊಂದಿರುವ ಲೇಬರ್ ಪಕ್ಷ
ಕನ್ಸರ್ವೇಟೀವ್ ಪಾರ್ಟಿ ನಿಲುವುಗಳಿಗಿಂತ ವಿಭಿನ್ನ ನೀತಿ
ಜಮ್ಮು & ಕಾಶ್ಮೀರ ವಿಚಾರದಲ್ಲಿ ಲೇಬರ್ ನಿರ್ಣಯ ವಿವಾದ
ಭಾರತದ ಪ್ರತಿಪಾದನೆಯ ವಿರುದ್ಧ ನಿಂತಿದ್ದ ಲೇಬರ್ ಪಾರ್ಟಿ
ಕೈರ್ ಸ್ಟಾರ್ಮರ್ ನಾಯಕತ್ವದಲ್ಲಿ ಈ ನೀತಿ ಬದಲಾವಣೆ
ಸಮೀಕ್ಷೆಯಲ್ಲೂ ರಿಷಿ ಸುನಕ್ಗೆ ಸೋಲು ಎಂದು ಭವಿಷ್ಯ
ಯುಕೆ ಚುನಾವಣೆಯಲ್ಲಿ ಭಾರತೀಯರ ವೋಟು ನಿರ್ಣಾಯಕ
ಹಿಂದೂಗಳ ವೋಟ್ ಬ್ಯಾಂಕ್ ಒಗ್ಗೂಡಿಸುವಲ್ಲಿ ಸ್ಟಾರ್ಮರ್ ಯಶಸ್ವಿ
ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ವೇಟೀವ್ ಪಾರ್ಟಿ ರಿಷಿ ಸುನಕ್ ನಾಯಕತ್ವದಲ್ಲಿ ಐತಿಹಾಸಿಕ ಹೀನಾಯ ಸೋಲು ಕಂಡಿದೆ. ಇದಕ್ಕೆ ರಾಜಕೀಯ ವಿಶ್ಲೇಷಕರು ಹಲವು ಕಾರಣಗಳನ್ನು ನೀಡುತ್ತಿದ್ದಾರೆ. ಆರ್ಥಿಕ ನೀತಿಗಳಲ್ಲಿನ ಯಡವಟ್ಟು, ಸಾಲು ಸಾಲು ಹಗರಣಗಳ ಆರೋಪಗಳಿಂದ ಜನರು ಬೇಸತ್ತು ಹೋಗಿದ್ದರು ಎಂದು ಹೇಳಲಾಗ್ತಿದೆ. ಚುನಾವಣೆ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ ರಿಷಿ ಸುನಕ್ ಪಕ್ಷದ ಸದಸ್ಯರಿಗೆ ಕ್ಷಮೆ ಕೇಳಿ ಸೋಲಿನ ಹೊಣೆ ಹೊತ್ತಿದ್ದಾರೆ.
ಇದನ್ನೂ ಓದಿ:ಎಕ್ಸಿಟ್ ಪೋಲ್ನಲ್ಲಿ ಹೀನಾಯ ಸೋಲಿನ ಭವಿಷ್ಯ.. ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ರಿಷಿ ಸುನಕ್ ರಾಜೀನಾಮೆ?
ಬ್ರಿಟನ್ ಪ್ರಧಾನಿ ಆಗಿದ್ದ ಭಾರತೀಯ ಮೂಲದ ರಿಷಿ ಸುನಕ್ ಅವರ ಆಡಳಿತ ಕೊನೆಗೂ ಅಂತ್ಯಗೊಂಡಿದೆ. ಹೊಸ ಪ್ರಧಾನಿಯ ಹೊಸ ಆಡಳಿತದ ವೈಖರಿ ಹೇಗರಲಿದೆ ಹಾಗೂ ಭಾರತದ ಜೊತೆ ಸಂಬಂಧ ಹೇಗರಲಿದೆ ಎಂಬುದು ಕುತೂಹಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ