newsfirstkannada.com

ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕಾರಣವೇನು?; ಕೋವಿಡ್-19 ಬಳಿಕ ICMR ಅಧ್ಯಯನದ ವರದಿ ಬಹಿರಂಗ

Share :

21-11-2023

    ಕೋವಿಡ್-19 ವಾಕ್ಸಿನ್‌ನಿಂದ ಯುವಕರ ಹಠಾತ್ ಸಾವು ಸಂಭವಿಸುತ್ತಿಲ್ಲ

    2021ರಿಂದ ಸುಮಾರು 729 ಸಾವಿನ ಪ್ರಕರಣಗಳ ಬಗ್ಗೆ ICMR ಅಧ್ಯಯನ

    ಗರ್ಭಾ ನೃತ್ಯದ ವೇಳೆ 10ಕ್ಕೂ ಹೆಚ್ಚು ಮಂದಿ ಹೃದಯಾಘಾತಕ್ಕೆ ಸಾವು

ನವದೆಹಲಿ: ಇತ್ತೀಚೆಗೆ ದೇಶಾದ್ಯಂತ ಹಾರ್ಟ್‌ ಅಟ್ಯಾಕ್ ಆಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. 20-30 ವರ್ಷದ ಯುವಕರೇ ಆಗಿರಲಿ, 50-60 ವಯಸ್ಸಿನವರೇ ಆಗಿರಲಿ, ಮಕ್ಕಳೂ ಸಹ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆ ಕಾರಣ ಏನು ಅನ್ನೋ ಚರ್ಚೆ ದೇಶಾದ್ಯಂತ ಗಂಭೀರವಾಗಿದೆ.

ಈ ಆತಂಕದ ಮಧ್ಯೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಒಂದೂವರೆ ವರ್ಷ ಅಧ್ಯಯನ ನಡೆಸೋ ಮೂಲಕ ಮಹತ್ವದ ಅಂಶಗಳನ್ನು ಬಹಿರಂಗ ಪಡಿಸಿದೆ. ICMR ಅಧ್ಯಯನದ ಪ್ರಕಾರ ಇತ್ತೀಚೆಗೆ ಸಂಭವಿಸುತ್ತಿರುವ ಹೃದಯಾಘಾತಕ್ಕೆ ಕೋವಿಡ್ ವ್ಯಾಕ್ಸಿನ್​ ಕಾರಣವಲ್ಲ. ಜೀವನ ಶೈಲಿಯಲ್ಲಿನ ಬದಲಾವಣೆಯೇ ಇದಕ್ಕೆ ಬಹುಮುಖ್ಯ ಕಾರಣ ಎನ್ನಲಾಗಿದೆ.

ಬೆಚ್ಚಿ ಬೀಳಿಸಿದ್ದ ಗುಜರಾತ್ ಸಾಲು, ಸಾಲು ಸಾವು! 

ಗುಜರಾತ್‌ನ ಗರ್ಭಾ ನೃತ್ಯದ ವೇಳೆ 10ಕ್ಕೂ ಹೆಚ್ಚು ಮಂದಿ ಹೃದಯಾಘಾತಕ್ಕೆ ಸಾವನ್ನಪ್ಪಿದ ವರದಿಯಾಗಿತ್ತು. ಇದಾದ ಬಳಿಕ ದೇಶಾದ್ಯಂತ ಕೋವಿಡ್‌-19 ವಾಕ್ಸಿನ್‌ಗೂ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಲಿಂಕ್ ಇದೆ ಎನ್ನಲಾಗುತ್ತಿತ್ತು. ಈ ಸಂಬಂಧ ಸಮಗ್ರ ಅಧ್ಯಯನ ಮಾಡಿರುವ ICMR ಕೋವಿಡ್-19 ವಾಕ್ಸಿನ್‌ನಿಂದ ಯುವಕರು ಹಠಾತ್ ಸಾವು ಸಂಭವಿಸುತ್ತಿಲ್ಲ. ಕೋವಿಡ್ ವ್ಯಾಕ್ಸಿನ್ ಅನಿರೀಕ್ಷಿತ ಸಾವಿನ ಪ್ರಮಾಣವನ್ನು ಕಡಿಮೆ ಮಾಡಿದೆ ಎಂದಿದೆ.

ಕಳೆದ 2021ರಿಂದ ICMR ಸುಮಾರು 729 ಸಾವಿನ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿದೆ. ಕೋವಿಡ್​​ಗೆ ತುತ್ತಾಗಿ ಬದುಕಿದ್ದವರ ಬಗ್ಗೆಯೂ ಅಧ್ಯಯನ ಮಾಡಲಾಗಿದೆ. ICMR ನಡೆಸಿದ ಅಧ್ಯಯನದಲ್ಲಿ ಕೋವಿಡ್ ವ್ಯಾಕ್ಸಿನ್​​ನಿಂದ ಅಪಾಯವಿಲ್ಲ ಎನ್ನಲಾಗಿದೆ. ಬದಲಿಗೆ ಹೃದಯಾಘಾತಕ್ಕೆ ಪ್ರಮುಖವಾದ ಕಾರಣ ಏನಂದ್ರೆ ದೈಹಿಕ ಕೆಲಸ, ಅತಿಯಾದ ಮದ್ಯಪಾನ, ಸಿಗರೇಟ್ ಹವ್ಯಾಸದಿಂದ ಹಠಾತ್ ಸಾವು ಸಂಭವಿಸುತ್ತಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕಾರಣವೇನು?; ಕೋವಿಡ್-19 ಬಳಿಕ ICMR ಅಧ್ಯಯನದ ವರದಿ ಬಹಿರಂಗ

https://newsfirstlive.com/wp-content/uploads/2023/06/HEART_ATTACK.jpg

Load More