newsfirstkannada.com

ವಿಜಯ್​​ ಜತೆಗಿನ ಗಾಸಿಪ್​​ ಬಗ್ಗೆ ಮೌನಮುರಿದ ರಶ್ಮಿಕಾ ಮಂದಣ್ಣ.. ಏನಂದ್ರು ನ್ಯಾಷನಲ್​ ಕ್ರಶ್​​​?

Share :

Published February 2, 2024 at 6:06am

    ಏನಾದ್ರೂ ಮಾಡೋ ಮುನ್ನ ಸಲಹೆ ಪಡೀತೀನಿ ಎಂದ ರಶ್ಮಿಕಾ

    ವಿಜಯ್‌ ಬಗ್ಗೆ ರಶ್ಮಿಕಾ ಮಂದಣ್ಣ ಸ್ವೀಟ್ ಸ್ವೀಟ್ ಮಾತು‌ಗಳು

    ದೇವರಕೊಂಡ ಬಗ್ಗೆ ಕೊನೆಗೂ ಮೌನಮುರಿದ ನ್ಯಾಷನಲ್​ ಕ್ರಶ್​​

ಕಳೆದ ನಾಲ್ಕು ವರ್ಷದಿಂದ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಪರ್ಸನಲ್​ ಲೈಫ್​ ಬಗ್ಗೆ ಜಾಸ್ತಿ ಕುತೂಹಲ ಮೂಡಿಸಿರುವ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ. ಈಗ ಈ ಇಬ್ಬರ ನಡುವಿನ ಗಪ್​ಚುಪ್ ಗಾಸಿಪ್ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ರಿಯಾಕ್ಟ್​​ ಮಾಡಿದ್ದಾರೆ. ಜೊತೆಗೆ ತಮಗೆ ವಿಜಯ್ ದೇವರಕೊಂಡ ಏನು ಅನ್ನೋದನ್ನೂ ಹೇಳಿದ್ದಾರೆ.

ಏಳು ವರ್ಷದ ಹಿಂದೆ ಜಸ್ಟ್ ಕಾಲೇಜ್ ಮುಗಿಸಿಕೊಂಡು ಹಿಂಗೇ ಹೋಗಿ ಹಂಗೆ ಒಂದು ಆಡಿಷನ್ ಕೊಟ್ಟು ಬರೋಣ ಅಂತ ಕಿರಿಕ್ ಪಾರ್ಟಿ ಸೆಟ್​​ಗೆ ಹೋದವರು ರಶ್ಮಿಕಾ ಮಂದಣ್ಣ. ಆದ್ರೆ ಕರ್ನಾಟಕ ಕ್ರಶ್ ಆಗಿ ಕಂಗೊಳಿಸಿ ಇವತ್ತು ನ್ಯಾಷನಲ್ ಕ್ರಶ್ ಆಗಿದ್ದಾರೆ. ಈಗ ಸ್ಯಾಂಡಲ್​​ವುಡ್ ದಾಟಿ ಟಾಲಿವುಡ್, ಕಾಲಿವುಡ್, ಬಾಲಿವುಡ್ ಲೋಕದಲ್ಲೂ ರಶ್ಮಿಕಾ ರಂಗು ರಂಗಾವಲಿಯಾಗಿ ರಾರಾಜಿಸುತ್ತಿದೆ. ರಶ್ಮಿಕಾ ಗಡಿ ದಾಟಿದಾಗಿಂದಲು ಆಕೆಯ ನಟನಾ ಬೆಳವಣೆಗೆಯ ಜೊತೆ ಜೊತೆಗೆನೆ ವಿಜಯ್ ದೇವರಕೊಂಡ ಜೊತೆಗಿನ ಬಂದ ಕೂಡ ಬೆಸೆದು ಕೊಂಡಿದೆ.

ನಾನು ಹೆಚ್ಚು ಗೌರವಿಸುವ ವ್ಯಕ್ತಿ

ಇಂಡಸ್ಟ್ರಿಯಲ್ಲಿ ನಾನು ವಿಜಯ್ ಒಟ್ಟಿಗೆ ಬೆಳೆದಿದ್ದೇವೆ. ಜೀವನದಲ್ಲಿ ನಾನು ಏನೇ ಮಾಡಬೇಕಾದರೂ ಅವರ ಅಭಿಪ್ರಾಯ ಕೇಳ್ತೀನಿ, ಅವರ ಸಲಹೆ ತಗೋತಿನಿ. ನನ್ನ ವೈಯಕ್ತಿಕ ಜೀವನದಲ್ಲಿ ಬೇರೆಯವರಿಗಿಂತ ವಿಜಯ್ ಹೆಚ್ಚು ಸಪೋರ್ಟ್ ಮಾಡಿದ್ದಾರೆ. ಹಾಗಾಗಿ ನಾನು ಹೆಚ್ಚು ಗೌರವಿಸುವ ವ್ಯಕ್ತಿ

– ರಶ್ಮಿಕಾ ಮಂದಣ್ಣ, ನಟಿ

ಇದು ರಶ್ಮಿಕಾ ಮಂದಣ್ಣ ತನ್ನ ನೆಚ್ಚಿನ ನಟ, ಸ್ನೇಹಿತ ವಿಜಯ್ ದೇವರಕೊಂಡ ಅವರ ಬಗ್ಗೆ ಕೊಟ್ಟಿರುವ ಕ್ಯೂಟ್ ಸ್ಟೇಟ್ ಮೇಂಟ್. ಇದು ಇಬ್ಬರ ಅಭಿಮಾನಿಗಳ ದಿಲ್ ಖುಷ್ ಮಾಡಿದೆ. ವಿಜಯ್ ದೇವರಕೊಂಡ ಎಲ್ಲೇ ಹೋದರೂ ರಶ್ಮಿಕಾ ಮಂದಣ್ಣ ಯಾವುದೇ ಭಾಷೆ ಸಿನಿಮಾ ಮಾಡಿದ್ರು ಅಲ್ಲಿಗೆ ಒಂದು ಕೊಶ್ಚನ್ ಕಾಮನ್. ನೀವಿಬ್ಬರು ಲವ್ವನಲ್ಲಿ ಇದ್ದಿರಂತೆ ಹೌದಾ? ಯಾವಾಗ ಮದುವೆ? ಅಂತೆಲ್ಲ. ವಿಷಯ ಹಿಂಗಿರುವಾಗ ರಶ್ಮಿಕಾ ಮಂದಣ್ಣ ಅವರ ಒಂದು ಸ್ಟೇಟ್​ಮೆಂಟ್ ಸ್ಟೇಟ್ ಬಿಟ್ಟು ಸ್ಟೇಟ್​ ಸುದ್ದಿಯಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಜಯ್​​ ಜತೆಗಿನ ಗಾಸಿಪ್​​ ಬಗ್ಗೆ ಮೌನಮುರಿದ ರಶ್ಮಿಕಾ ಮಂದಣ್ಣ.. ಏನಂದ್ರು ನ್ಯಾಷನಲ್​ ಕ್ರಶ್​​​?

https://newsfirstlive.com/wp-content/uploads/2024/01/rashmika-2.jpg

Load More