ಏಕಾನಾ ಸ್ಟೇಡಿಯಂನಲ್ಲಿ RCB ಎಡವಿದ್ದು ಎಲ್ಲಿ? ನಾಯಕ ಜಿತೇಶ್​ ಶರ್ಮಾ ಹೊಣೆ ಮಾಡಿದ್ದು ಯಾರನ್ನ?

author-image
admin
Updated On
ಏಕಾನಾ ಸ್ಟೇಡಿಯಂನಲ್ಲಿ RCB ಎಡವಿದ್ದು ಎಲ್ಲಿ? ನಾಯಕ ಜಿತೇಶ್​ ಶರ್ಮಾ ಹೊಣೆ ಮಾಡಿದ್ದು ಯಾರನ್ನ?
Advertisment
  • ಪಾಟಿದಾರ್​​ ರನೌಟ್​​ ಬಳಿಕ RCB ಪೆವಿಲಿಯನ್​ ಪರೇಡ್​!
  • RCB ಟಾಪ್​ 2 ಕನಸಿಗೆ ಕೊಳ್ಳಿಯಿಟ್ಟ SRH ವಿರುದ್ಧದ ಸೋಲು
  • ಆರ್​​ಸಿಬಿಗೆ ಕೈ ಕೊಟ್ಟಿದ್ದೇ ಮಿಡಲ್​ ಆರ್ಡರ್​ ಬ್ಯಾಟರ್ಸ್​

ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಚೇಸಿಂಗ್​ಗಿಳಿದ ಆರ್​​ಸಿಬಿ ಸನ್​ರೈಸರ್ಸ್​ಗಿಂತ ಸ್ಫೋಟಕ ಆರಂಭವನ್ನೇ ಪಡೆದುಕೊಳ್ತು. ಆದ್ರೆ, ಅಂತಿಮ ಹಂತದಲ್ಲಿ ಎಡವಿ ಬಿತ್ತು. ಒಂದು ರನೌಟ್​​ ಆರ್‌ಸಿಬಿಯ ಸೋಲಿಗೆ ಗುರಿ ಮಾಡಿತು. ಇಷ್ಟೇ ಅಲ್ಲ.. ಟಾಪ್​ 2 ಸ್ಥಾನದ ಕನಸಿಗೂ ಕೊಳ್ಳಿ ಇಡ್ತು. ಹಾಗಾದ್ರೆ, ಆರ್​​ಸಿಬಿ ಎಡವಿದ್ದೆಲ್ಲಿ?

232 ರನ್​ಗಳ ಬಿಗ್​ ಟಾರ್ಗೆಟ್​​ ಚೇಸ್​​ಗಿಳಿದ ಆರ್​​ಸಿಬಿ ತಂಡದ ಬೊಂಬಾಟ್​​ ಆರಂಭ ಪಡೆದುಕೊಳ್ತು. ಎಲ್ರೂ ಫಿಲ್​ ಸಾಲ್ಟ್​​ ಸ್ಫೋಟಕ ಆಟವಾಡ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ರು. ಆದ್ರೆ, ಕಿಂಗ್​​ ಕೊಹ್ಲಿ ವೀರಾವೇಷದ ಆಟವಾಡಿದ್ರು. ವಿರಾಟ ರೂಪ ದರ್ಶನಕ್ಕೆ ಹೈದರಾಬಾದ್​ ಥಂಡಾ ಹೊಡೆದು ಬಿಟ್ಟಿತು.

publive-image

ಪವರ್​​ ಪ್ಲೇನಲ್ಲಿ ಪವರ್​ಫುಲ್​ ಇನ್ನಿಂಗ್ಸ್​ ಕಟ್ಟಿದ ವಿರಾಟ್​ ಕೊಹ್ಲಿ 7 ಬೌಂಡರಿ, 1 ಸಿಕ್ಸರ್​ ಸಿಡಿಸಿದ್ರು. 172ರ ಸ್ಟ್ರೈಕ್​ರೇಟ್​ನಲ್ಲಿ 25 ಎಸೆತಗಳಲ್ಲೇ 43 ರನ್​ ಸಿಡಿಸಿದ್ರು. ಮತ್ತೊರ್ವ ಓಪನರ್​ ಫಿಲ್​ ಸಾಲ್ಟ್​​ ಕೊಹ್ಲಿಗೆ ಸಖತ್​ ಸಾಥ್​ ನೀಡಿದ್ರು. ಪರಿಣಾಮ ಸಾಲಿಡ್​ ಓಪನಿಂಗ್​ ಪಡೆದುಕೊಂಡ ಆರ್​​ಸಿಬಿ ಪವರ್​ ಪ್ಲೇನಲ್ಲಿ ವಿಕೆಟ್​​ ನಷ್ಟವಿಲ್ಲದೇ 72 ರನ್​ಗಳಿಸಿತು.

43 ರನ್​ಗಳಿಸಿ ವಿರಾಟ್​ ಕೊಹ್ಲಿ ಔಟ್‌ ಆದ್ರು. ಆ ಬಳಿಕ ಫಿಲ್​ ಸಾಲ್ಟ್​​ ರೌದ್ರಾವತಾರ ತಾಳಿದ್ರು. ಮೈದಾನದ ಉದ್ದಗಲಕ್ಕೂ ಚೆಂಡಿನ ದರ್ಶನ ಮಾಡಿದ್ರು. 5 ಸಿಕ್ಸರ್, 4 ಬೌಂಡರಿ ಬಾರಿಸಿದ ಫಿಲ್​ ಸಾಲ್ಟ್​ ಹಾಫ್​ ಸೆಂಚುರಿ ಸಿಡಿಸಿದ್ರು.

publive-image

ಮಯಾಂಕ್​ ಅಗರ್​ವಾಲ್​ ಹೀಗೆ ಬಂದು ಹಾಗೇ ಹೋದ್ರೆ, 32 ಎಸೆತಗಳಲ್ಲಿ 62 ರನ್​ಗಳಿಸಿದ್ದ ಫಿಲ್​ ಸಾಲ್ಟ್​ ಬಿಗ್​ ಶಾಟ್​ ಹೊಡೆಯೋ ಯತ್ನದಲ್ಲಿ ವಿಕೆಟ್​ ಕೈ ಚೆಲ್ಲಿದ್ರು. ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದ ರಜತ್​ ಪಟಿದಾರ್​ ಬಳಿಕ ಜಿತೇಶ್​ ಶರ್ಮಾ ಕೆಲ ಕಾಲ ಲಕ್ನೋ ಬೌಲರ್​ಗಳನ್ನ ಕಾಡಿದ್ರು. ಜಿತೇಶ್​ ಶರ್ಮಾ 2 ಸಿಕ್ಸರ್​, 1 ಬೌಂಡರಿ ಬಾರಿಸಿ ಮಿಂಚಿದ್ರು.

ಆದ್ರೆ, ಸಡನ್​ ಆಗಿ ಇಡೀ ಗೇಮ್​ಗೆ ಟ್ವಿಸ್ಟ್​ ಸಿಕ್ಕಿತು. 15.4ನೇ ಓವರ್​​ನಲ್ಲಿ ರಜತ್​ ಪಾಟಿದಾರ್​ ಬೇಜವಾವ್ಧಾರಿತನದಲ್ಲಿ ರನೌಟ್​ಗೆ ಬಲಿಯಾದ್ರು. ಅಲ್ಲಿಯವರೆಗೆ ಗೆಲುವಿನ ಟ್ರ್ಯಾಕ್​ನಲ್ಲಿದ್ದ ಆರ್​​ಸಿಬಿ ಈ ರನೌಟ್​​ನ ಬಳಿಕ ಹಳಿ ತಪ್ಪಿತು.

publive-image

ರಜತ್​​ ಪಾಟಿದಾರ್​ ಪತನದ ಬಳಿಕ ಆರ್​​ಸಿಬಿ ಆಟಗಾರರ ಪೆವಿಲಿಯನ್​ ಪರೇಡ್​ ನಡೀತು. ರೊಮಾರಿಯೋ ಶೆಫರ್ಡ್​, ಜಿತೇಶ್​ ಶರ್ಮಾ ಬ್ಯಾಕ್​ ಟು ಬ್ಯಾಕ್​ ಪೆವಿಲಿಯನ್​ ಸೇರಿದ್ರು. ಇಂಜುರಿ ನೋವಿನ ನಡುವೆ ಬ್ಯಾಟಿಂಗ್​ಗೆ ಬಂದ ಟಿಮ್ ಡೇವಿಡ್ 1 ರನ್​ಗಳಿಸಿದ್ರಷ್ಟೇ. ಕೃನಾಲ್​ ಪಾಂಡ್ಯ ಹಿಟ್​ ವಿಕೆಟ್​ ಆಗಿ ನಿರ್ಗಮಿಸಿದ್ರೆ, ಯಶ್​ ದಯಾಳ್​ ಅಂತಿಮ ಓವರ್​ನಲ್ಲಿ ಹರ್ಷಲ್​ ಪಟೇಲ್​ಗೆ ವಿಕೆಟ್​ ಒಪ್ಪಿಸಿದ್ರು.

ಇದನ್ನೂ ಓದಿ: RCB ವಿರುದ್ಧ ಗೆದ್ದು ಬೀಗಿದ ಸನ್‌ರೈಸರ್ಸ್‌ ಹೈದರಾಬಾದ್‌.. ಬೆಂಗಳೂರು ಸೋಲಿಗೆ ಕಾರಣವೇನು? 

19.5 ಓವರ್​​ಗಳಲ್ಲಿ ಆರ್​​ಸಿಬಿಯನ್ನ ಕಟ್ಟಿ ಹಾಕಿದ ಸನ್​ರೈಸರ್ಸ್​ ಹೈದ್ರಾಬಾದ್​ 42 ರನ್​ಗಳ ಭರ್ಜರಿ ಜಯ ಸಾಧಿಸಿತು. 189 ರನ್​ಗಳಿಸಿ ಆಲೌಟ್​ ಆದ ಆರ್​​ಸಿಬಿ ರನ್​ರೇಟ್​ನಲ್ಲಿ ಕುಸಿತ ಕಾಣ್ತು. ಟಾಪ್​ 2 ಸ್ಥಾನದಲ್ಲಿರೋ ಕನಸು ಕಾಣ್ತಿದ್ದ ರಾಯಲ್​ ಚಾಲೆಂಜರ್ಸ್​ 3ನೇ ಸ್ಥಾನಕ್ಕೆ ಕುಸಿಯಿತು.

publive-image

ಹೈದರಾಬಾದ್‌ ವಿರುದ್ಧ ಸೋಲಿನ ಬಳಿಕ ಆರ್‌ಸಿಬಿ ನಾಯಕ ಜಿತೇಶ್ ಶರ್ಮಾ ಅವರು ಮಾತನಾಡಿದರು. ನಮ್ಮ ತಂಡವು ಹೆಚ್ಚು 20-30 ರನ್‌ಗಳನ್ನ ಬಿಟ್ಟು ಕೊಟ್ಟಿದೆ. ಪವರ್ ಪ್ಲೇಯಲ್ಲಿ ಎದುರಾಳಿಗಳ ಬ್ಯಾಟಿಂಗ್ ಉತ್ತಮವಾಗಿತ್ತು. ಮೊದಲ 6 ಓವರ್‌ಗಳಲ್ಲಿ ನಮಗೆ ಹಿನ್ನಡೆಯಾದರು ಮಧ್ಯಮ ಹಾಗೂ ಕೊನೆಯ ಓವರ್‌ಗಳಲ್ಲಿ ನಮ್ಮ ಬೌಲರ್‌ಗಳು ಉತ್ತಮ ಆಟ ಪ್ರದರ್ಶಿಸಿದರು ಎಂದರು.

ಈ ಪಂದ್ಯದ ಸೋಲು ಒಳ್ಳೆಯದೇ ಎಂದಿರುವ ಆರ್‌ಸಿಬಿ ನಾಯಕ ಉತ್ತಮ ಆಟ ಪ್ರದರ್ಶನಕ್ಕೆ ಇದೊಂದು ಪಾಠವಾಗಿದೆ. ತಪ್ಪುಗಳನ್ನ ಸರಿಪಡಿಸಿಕೊಂಡು ಮುಂದಿನ ಪಂದ್ಯಗಳಿಗೆ ರೆಡಿಯಾಗುತ್ತೇವೆ ಎಂದು ಜಿತೇಶ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment