‘ಪ್ರೂಫ್ ಸಮೇತ ಬರ್ತೀನಿ’.. ಅರೆಸ್ಟ್ ಆಗುವ ಮುನ್ನ ಮಡೆನೂರು ಮನು ಹೇಳಿದ್ದೇನು?

author-image
Veena Gangani
Updated On
‘ಪ್ರೂಫ್ ಸಮೇತ ಬರ್ತೀನಿ’.. ಅರೆಸ್ಟ್ ಆಗುವ ಮುನ್ನ ಮಡೆನೂರು ಮನು ಹೇಳಿದ್ದೇನು?
Advertisment
  • ಅರೆಸ್ಟ್ ಆಗುವ ಮುನ್ನ ಹಾಸ್ಯ ನಟ ಮಡೆನೂರು ಮನು ಹೇಳಿದ್ದೇನು?
  • ‘ನಿರ್ಮಾಪಕರು ದೊಡ್ಡ ಬಜೆಟ್​ನ ಮೂವಿಗೆ ತೊಂದರೆ ಆಗಬಾರದು’
  • ಸಂತ್ರಸ್ತೆ ದೂರು ದಾಖಲಿಸುತ್ತಿದ್ದಂತೆ ನಟ ಮಡೆನೂರು ಮನು ಅರೆಸ್ಟ್

ಕಾಮಿಡಿ ಕಿಲಾಡಿಗಳು ಸೀಸನ್​ 2ರ ವಿನ್ನರ್​, ಹಾಸ್ಯ ನಟ ಮಡೆನೂರು ಮನು ಮೇಲೆ ಕಿರುತೆರೆ ನಟಿ ಗಂಭೀರ ಆರೋಪ ಮಾಡಿದ್ದರು. ‘ಕಾಮಿಡಿ ಕಿಲಾಡಿಗಳು’ ಮೂಲಕ ಫೇಮಸ್​ ಆಗಿದ್ದ ಮಡೆನೂರು ಮನು ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು.

ಇದನ್ನೂ ಓದಿ:ನಟ ಮಡೆನೂರು ಮನು ಮೋಸದಾಟದ ಬಗ್ಗೆ ಸಂತ್ರಸ್ತೆ ಹೇಳಿದ್ದೇನು?

publive-image

ಸಂತ್ರಸ್ತೆ ದೂರು ದಾಖಲಿಸುತ್ತಿದ್ದಂತೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ನಟ ಮಡೆನೂರು ಮನು ಬಂಧಿಸಿದ್ದಾರೆ. ಹಾಸನದ ಶಾಂತಿಗ್ರಾಮದ ಬಳಿ ಮಡೆನೂರು ಮನುರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸದ್ಯ ಆರೋಪಿಯನ್ನ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ನಟ ಅರೆಸ್ಟ್​ ಆಗೋ ಮುನ್ನ ವಿಡಿಯೋ ಮಾಡುವ ಮೂಲಕ ಎಲ್ಲದರ ಬಗ್ಗೆಯೂ ಸಾಕ್ಷಿ ಸಮೇತ ಬರುತ್ತೇನೆ ಅಂತ ಹೇಳಿದ್ದಾರೆ.

ಅರೆಸ್ಟ್ ಆಗುವ ಮುನ್ನ ಮಡೆನೂರು ಮನು ಹೇಳಿದ್ದೇನು?

ನನ್ನ ಮೇಲೆ ದಾಖಲಾಗಿರೋ ದೂರು ಸಂಬಂಧ ಸಾಕ್ಷಿ ಸಮೇತ ಬರ್ತೀನಿ. ಇದರ ಹಿಂದೆ ಯಾರಿದ್ದಾರೆ. ಸಿನಿಮಾ ನಿಲ್ಲಿಸೋದಕ್ಕೆ ಯಾರೆಲ್ಲ ಏನು ಮಾಡಿದ್ದಾರೆ. ಸಿನಿಮಾ ಪ್ರಮೋಷನ್ ನೋಡಿ ಯಾರೆಲ್ಲ ನನಗೆ ಬೆದರಿಕೆ ಹಾಕಿದ್ದಾರೆ. ಪ್ರತಿಯೊಂದಕ್ಕೂ ಪ್ರೂಫ್ ಸಮೇತ ಬರ್ತೀನಿ. ನಮ್ಮ ಸಿನಿಮಾ ನಾಳೆ ರಿಲೀಸ್ ಆಗ್ತಿದೆ. ನಿರ್ಮಾಪಕರು ದೊಡ್ಡ ಬಜೆಟ್​​ನ ಮೂವಿ ಮಾಡಿದ್ದಾರೆ.  ಎರಡೂವರೆ ವರ್ಷ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಪರ್ಸನಲ್ ಬೇರೆ ಪ್ರೊಫೆಷನಲ್ ಬೇರೆ,
ಪರ್ಸನಲ್ ವಿಚಾರ ಏನೇ ಇದ್ರು ನಾನು ಬಂದು ಕ್ಲಾರಿಟಿ ಕೊಡ್ತೀನಿ. ಇದರಿಂದ ಸಿನಿಮಾಗೆ ತೊಂದರೆ ಆಗಬಾರದು ಅಂತ ವಿಡಿಯೋ ಮೂಲಕ ಫಸ್ಟ್​ ರಿಯಾಕ್ಷನ್ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment