‘ಇಬ್ಬರು ಸಂಬಂಧದಲ್ಲಿ ಇದ್ದಿದ್ದು ನಿಜಾ’.. ಪೊಲೀಸರ ವಿಚಾರಣೆಯಲ್ಲಿ ಮಡೆನೂರು ಮನು ಹೇಳಿದ್ದೇನು?

author-image
Veena Gangani
Updated On
‘ನಾನು ದರ್ಶನ್​ ಅಭಿಮಾನಿ.. ರಕ್ತ ಕುದಿತಿದೆ’.. ಚಾರು ಖ್ಯಾತಿಯ ಮೌನ ಗುಡ್ಡೆಮನೆ ಕೆಂಡ
Advertisment
  • ಮಡೆನೂರು ಮನು ಮೇಲೆ ಆರೋಪ ಮಾಡಿದ್ದ ಸಂತ್ರಸ್ತೆ
  • ಸಂತ್ರಸ್ತೆ ನೀಡಿದ್ದ ದೂರಿನ ಬಗ್ಗೆ ಮಡೆನೂರು ಮನು ಏನಂದ್ರು?
  • ಬಲವಂತವಾಗಿ ಲೈಂಗಿಕ ದೌರ್ಜನ್ಯ ಮಾಡಿಲ್ಲ.. ಆದರೆ..!

ಬೆಂಗಳೂರು: ಮೊನ್ನೆಯಷ್ಟೇ ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ವಿರುದ್ಧ ಸಹ ನಟಿ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಹೀಗಾಗಿ ಸಂತ್ರಸ್ತೆ ಸಾಲು ಸಾಲು ಆರೋಪದ ಬೆನ್ನಲ್ಲೇ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಮಡೆನೂರು ಮನು ಅವರನ್ನ ಅರೆಸ್ಟ್​ ಮಾಡಿ ತೀವ್ರ ವಿಚಾರಣೆ ಮಾಡಿದ್ದರು.

ಇದನ್ನೂ ಓದಿ: Monsoon rain ಕರ್ನಾಟಕದಲ್ಲಿ ಮಾತ್ರ ಮಳೆನಾ.. ಪಕ್ಕದ ರಾಜ್ಯಗಳ ಪರಿಸ್ಥಿತಿಗಳು ಹೇಗಿವೆ..?

ಇದೀಗ ಪೊಲೀಸರ ವಿಚಾರಣೆಯಲ್ಲಿ ಮಡೆನೂರು ಮನು ಕೆಲವೊಂದು ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಸಂತ್ರಸ್ತೆ ಹಾಗೂ ನನಗೆ ಐದಾರು ವರ್ಷಗಳ ಹಿಂದೆ ಪರಿಚಯ ಇದೆ. ಇಬ್ಬರು ಸಹ ಸಂಬಂಧದಲ್ಲಿ ಇದ್ದಿದ್ದು ನಿಜಾ, ಆದ್ರೆ ಮದೆವೆಯಾಗಿಲ್ಲ. ನಾನು ಆಕೆಗೆ‌ ತಾಳಿಯನ್ನು ಕಟ್ಟಿಲ್ಲ. ಬೆಂಗಳೂರಿನಲ್ಲಿ ಮನೆ ಹುಡುಕೋದಕ್ಕೆ ಸಹಾಯ ಮಾಡಿದ್ದೆ. ಆಕೆ ದೂರಿನಲ್ಲಿ ಉಲ್ಲೇಖ ಮಾಡಿದಂತೆ ಭಾಗಿಯಾಗಿದ್ದು ನಿಜಾ. ಆದ್ರೆ ಯಾವುದೇ ರೀತಿಯಾದ ಬಲವಂತವಾಗಿ ಲೈಂಗಿಕ ದೌರ್ಜನ್ಯ ಮಾಡಿಲ್ಲ. ಕಳೆದ ಮೇ 17ರಂದು ಬೆಂಗಳೂರಿನ ನಾಗರಭಾವಿಯಲ್ಲಿ ಭೇಟಿಯಾಗಿದ್ದು ನಿಜಾ. ಆದ್ರೆ, ಯಾವುದೇ ರೀತಿಯಾಗಿ ಹಲ್ಲೆ ಮಾಡಿ ಖಾಸಗಿ ವಿಡಿಯೋ ‌ಚಿತ್ರೀಕರಿಸಿಲ್ಲ. ಸಂತ್ರಸ್ತೆ ಪರಿಚಯಕ್ಕೂ ಮುಂಚೆ ನನಗೆ ಮದುವೆಯಾಗಿತ್ತು. ಈ ವಿಚಾರ ಆಕೆಗೂ ಗೊತ್ತಿತ್ತು, ನನ್ನ ಕುಟುಂಬಸ್ಥರಿಗೂ ಸಹ ಪರಿಚಯವಿತ್ತು. ನನ್ನ ಜೊತೆಗಿನ ಫೋಟೋಗಳನ್ನು, ಸಿನಿಮಾಗೆ ತೊಂದರೆಯಾಗಬೇರದೆಂದು ಆಕೆ ನನ್ನ ಹೇಳಿಕೆ ವಿಡಿಯೋ ಮಾಡಿದ್ದು ನಿಜಾ. ಸಿನಿಮಾ ನಿರ್ಮಾಪಕರಿಗೆ ತೊಂದರೆಯಾಗಬಾರದೆಂದು ವಿಡಿಯೋ ಮಾಡಿದ್ದಾಗಿ ಹೇಳಿದ್ದಾರೆ.

ಸದ್ಯ ಸಂತ್ರಸ್ತೆ ಆರೋಪದಂತೆ ಪೊಲೀಸರಿಗೆ ಯಾವುದೇ ಅಶ್ಲೀಲ ವಿಡಿಯೋ ಪತ್ತೆಯಾಗಿಲ್ಲ. ಇಬ್ಬರ ವಾಟ್ಸ್ ಅಪ್ ಚಾಟ್​ನಲ್ಲಿಯು ಸಹ‌ ಯಾವುದೇ ಅಶ್ಲೀಲ ಫೋಟೋ ವಿಡಿಯೋ ಪತ್ತೆಯಾಗಿಲ್ಲ. ಪೊಲೀಸರು ಮನು ಜೊತೆಗೆ ಸ್ಥಳ ಮಹಜರು ನಡೆಸುತ್ತಿದ್ದಾರೆ. ಪೊಲೀಸ್ ಕಸ್ಟಡಿಯಿಂದ ಮಡೆನೂರು ಮನುನನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋಗಲಾಗಿದೆ. ಒಂದು ವೇಳೆ ಮೊಬೈಲ್ ಡೇಟಾ ರಿಕವರಿಯಲ್ಲಿ ಅಶ್ಲೀಲ‌ ವಿಡಿಯೋಗಳು ಪತ್ತೆಯಾದ್ರೆ ಮತ್ತೆ‌ ನಟನನ್ನು ಬಾಡಿ ವಾರಂಟ್ ಮೇಲೆ ವಿಚಾರಣೆ ಮಾಡುವ ಸಾಧ್ಯತೆ ಇದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment