/newsfirstlive-kannada/media/post_attachments/wp-content/uploads/2024/12/COMPUTER-OPERATOR.jpg)
ಗುಜರಾತ್​ನ ಸೂರತ್​​ನಲ್ಲಿ ಒಂದು ವಿಚಿತ್ರವಾದ ಘಟನೆ ನಡೆದಿದೆ. ಯುವಕನೊಬ್ಬ ತನ್ನ ಎಡಗೈನ ನಾಲ್ಕು ಬೆರಳುಗಳನ್ನು ಚಾಕುವಿನಿಂದ ಕತ್ತರಿಸಿಕೊಂಡಿದ್ದಾನೆ. ಮಯೂರ್ ತರಪಾರ್ ಎನ್ನುವ 31 ವರ್ಷದ ಯುವಕ ತನ್ನ ಸೋದರ ಸಂಬಂಧಿಯ ವಜ್ರ ವ್ಯಾಪಾರದ ಸಂಸ್ಥೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ತನಗೆ ಕೆಲಸ ಮಾಡಲು ಇಷ್ಟವಿಲ್ಲದ ಕಾರಣಕ್ಕೆ ಇನ್ನು ಮುಂದೆ ಆ ಕೆಲಸಕ್ಕೆ ತಾನು ಅನರ್ಹನಾಗುವಂತಾಗಬೇಕು ಎಂದು ಚಾಕುವಿನಿಂದ ತನ್ನ ಎಡಗೈನ 4 ಬೆರಳುಗಳನ್ನು ಕತ್ತರಿಸಿಕೊಂಡಿದ್ದಾನೆ.
ಪೊಲೀಸರು ಆರಂಭದಲ್ಲಿ ಕೇಳಿದಾಗ ನಾನು ಮೂರ್ಛೆ ಹೋಗಿದ್ದೇ ಎದ್ದು ನೋಡಿದಾಗ ನನ್ನ ಎಡಗೈನ ನಾಲ್ಕು ಬೆರಳು ಕಾಣುತ್ತಿರಲಿಲ್ಲ ಎಂದು ಹೇಳಿದ್ದಾನೆ. ಕೊನೆಗೆ ವಿಚಾರಣೆಯನ್ನು ತೀವ್ರಗೊಳಿಸಿದಾಗ ಪೊಲೀಸರ ಮುಂದೆ ಅಸಲಿ ಸತ್ಯವನ್ನು ಹೇಳಿದ್ದಾನೆ ಮಯೂರ್. ಸೂರತ್​ನ ಕ್ರೈಂ ಬ್ರ್ಯಾಂಚ್ ಪೊಲೀಸರ ಎದುರು ಎಲ್ಲವನ್ನೂ ಹೇಳಿಕೊಂಡಿರುವ ಮಯೂರ್, ನನಗೆ ಕಂಪ್ಯೂಟರ್ ಆಪರೇಟರ್ ಆಗಿ ಅಕೌಂಟ್​ ಡಿಪಾರ್ಟ್​ಮೆಂಟ್​​ನಲ್ಲಿ ಕೆಲಸ ಮಾಡಲು ಇಷ್ಟವಿರಲಿಲ್ಲ. ಅದನ್ನು ನನ್ನ ಸೋದರ ಸಂಬಂಧಿಗೆ ಹೇಳುವ ಧೈರ್ಯವೂ ಇರಲಿಲ್ಲ. ಅದಕ್ಕೆ ನಾನು ಕಂಪ್ಯೂಟರ್ ಆಪರೇಟರ್ ಆಗಿ ಮುಂದುವರಿಯಲು ಅನರ್ಹನಾಗುವ ಉದ್ದೇಶದಿಂದ ಈ ಒಂದು ಕಾರ್ಯವನ್ನು ನನಗೆ ನಾನೇ ಹೀಗೆ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾನೆ.
ಇದನ್ನೂ ಓದಿ:ಮದರಂಗಿಯಲ್ಲಿ ತುಂಬಿದ ಡಿವೋರ್ಸ್​ನ ರಂಗು ; ವಿಚ್ಛೇದನ ಕಥೆಯನ್ನು ಮೆಹಂದಿಯಲ್ಲಿ ಹೇಳಿದ ಯುವತಿ!
ಪೊಲೀಸರಿಗೆ ಆರಂಭದಲ್ಲಿ ದೊಡ್ಡ ಕಥೆಯನ್ನೇ ಕಟ್ಟಿದ್ದ ಮಯೂರ್​ ಡಿಸೆಂಬರ್ 8 ರಂದು ನಾನು ನನ್ನ ಫ್ರೆಂಡ್ ಮನೆಗೆ ಬೈಕ್​ನಲ್ಲಿ ಹೊರಟಿದ್ದೆ ಅಮ್ರೋಲಿಯ ರಿಂಗ್​​ರೋಡ್​ ವೇದಾಂತ ಸರ್ಕಲ್ ಬಳಿ ನನಗೆ ತಲೆಸುತ್ತು ಬಂದ ಹಾಗೆ ಆಯ್ತು, ನನಗೆ 10 ನಿಮಿಷ ಬಿಟ್ಟು ಎಚ್ಚರವಾದಾಗ ನನ್ನ ಎಡಗೈನ 4 ಬೆರಳುಗಳು ಕಾಣಲಿಲ್ಲ. ಅವುಗಳು ಕಟ್ ಆಗಿ ಹೋಗಿದ್ದವು ಎಂದಿದ್ದಾನೆ. ಅವನ ಮಾತು ಕೇಳಿದ ಪೊಲೀಸರು ಯಾರೋ ಬ್ಲ್ಯಾಕ್ ಮ್ಯಾಜಿಕ್ ಮಾಡುವ ಉದ್ದೇಶದಿಂದ ಈತನ ಕೈ ಬೆರಳನ್ನು ಕತ್ತರಿಸಿಕೊಂಡು ಹೋಗಿದ್ದಾರೆ ಎಂದು ನಂಬಿದ್ದರು
ಇದನ್ನೂ ಓದಿ: ಬಿಹಾರದಲ್ಲಿ ನಡೆಯುತ್ತಿವೆ ವಿಲಕ್ಷಣ ಮದುವೆಗಳು.. ಶಾಲಾ ಶಿಕ್ಷಕರಾದವರು ಕಿಡ್ನಾಪ್ ಆಗುತ್ತಿರುವುದೇಕೆ?
ಅಮ್ರೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅದನ್ನು ಸಿಟಿ ಕ್ರೈಂ ಬ್ರ್ಯಾಂಚ್​ಗೆ ವರ್ಗಾಯಿಸಿದರು. ಕ್ರೈಬ್ರ್ಯಾಂಚ್ ಪೊಲೀಸರು ಮಯೂರ್ ಹೇಳಿದ ಜಾಗಗಳ ಸಿಸಿಟಿವಿ ಕ್ಯಾಮರಾವನ್ನು ಚೆಕ್ ಮಾಡಿದಾಗ ಅಸಲಿ ವಿಷಯ ಹೊರಗೆ ಬಂದಿದೆ.
ಕೊನೆಗೆ ಮಯೂರ್ ತರಾಪರಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಚಾರ್ ರಸ್ತಾ ಶಾಪ್​​ನ ಬಳಿಯ ಸಿಂಗಾಪೋರ್​​ನಲ್ಲಿ ಚಾಕು ಖರೀದಿಸಿದ್ದೆ. ನಾಲ್ಕು ದಿನಗಳ ನಂತರ ಅಂದ್ರೆ ರವಿವಾರ ರಾತ್ರಿ ನಾನು ಅಮ್ರೋಲಿಯ ರಿಂಗ್​ ರೋಡ್​ ಬಳಿ ಹೋಗಿ ನನ್ನ ಮೊಟಾರ್ ಸೈಕಲ್​ನ್ನು ಪಾರ್ಕ್ ಮಾಡಿದೆ, ಸುಮಾರು 10 ಗಂಟೆಯ ಸುಮಾರಿಗೆ ಚಾಕುವಿನಿಂದ ನನ್ನ ಕೈ ಬೆರಳುಗಳನ್ನು ನಾನೇ ಕತ್ತರಿಸಿಕೊಂಡೆ ಎಂದು ಹೇಳಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us