ಪದೇ ಪದೆ ಲೋಕೋ ಪೈಲಟ್ ಹಾರ್ನ್ ಒತ್ತುತ್ತಿದ್ದಾರೆ ಎಂದರೆ ಅರ್ಥವೇನು? ರೈಲುಗಳ ವಿವಿಧ ಹಾರ್ನ್​ಗಳ ಸಂಕೇತವೇನು?

author-image
Veena Gangani
Updated On
SSLC, ಪಿಯುಸಿ, ITI, ಪದವಿ ಮುಗಿಸಿದವ್ರಿಗೆ ಗುಡ್​ನ್ಯೂಸ್.. ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಬಳ ಎಷ್ಟು?
Advertisment
  • ಬಸ್ ಪ್ರಯಾಣಕ್ಕಿಂತ ರೈಲು ಪ್ರಯಾಣ ಅತ್ಯಂತ ಸುಖಕರ
  • ಕನಿಷ್ಟ 2 ಕಿಮೀವರೆಗೆ ರೈಲಿನ ಹಾರ್ನ್​ ಕೇಳಿಸಬಲ್ಲದು
  • ಬಹುತೇಕ ಪ್ರಯಾಣಿಕರಿಗೆ ಹಾರ್ನ್​ಗಳ ಅರ್ಥ ತಿಳಿದಿರಲ್ಲ

ನಿಮಗೆಲ್ಲ ರೈಲು ಪ್ರಯಾಣದ ಅನುಭವ ಆಗಿರುತ್ತದೆ. ಬಸ್ ಪ್ರಯಾಣಕ್ಕಿಂತ ರೈಲು ಪ್ರಯಾಣ ಅತ್ಯಂತ ಸುಖಕರ. ರೈಲು ಇಂಜಿನ್ ಹತ್ತಿರ ಬಂದಾಗ ಅದರ ಸದ್ದು ಬೆಚ್ಚಿ ಬೀಳುವಂತಿರುತ್ತದೆ. ರೈಲಿನ ಹಾರ್ನ್ ಅಂತೂ ಅತ್ಯಂತ ಶಕ್ತಿಶಾಲಿ. ಕನಿಷ್ಟ 2 ಕಿಮೀವರೆಗೆ ರೈಲಿನ ಹಾರ್ನ್​ ಕೇಳಿಸಬಲ್ಲದು. ಕಿವಿಗೆ ಅಪ್ಪಳಿಸುವಂತಿರುವ ರೈಲಿನ ಹಾರ್ನ್​ ರೈಲಿನ ಆಗಮನ, ನಿರ್ಗಮನದ ಸಂಕೇತ. ಆದರೆ ಬೇರೆ ಬೇರೆ ರೀತಿಯ ಹಾರ್ನ್​ಗಳು ನಿರ್ದಿಷ್ಟ ಅರ್ಥ ಹೊಂದಿವೆ. ರೈಲಿನಲ್ಲಿ ನಿತ್ಯ ಪ್ರಯಾಣಿಸುವವರಿಗೂ ರೈಲಿನ ಹಾರ್ನ್​ಗಳ ಅರ್ಥ ಹೆಚ್ಚು ಜನರಿಗೆ ತಿಳಿದಿರುವುದಿಲ್ಲ.

ಇದನ್ನೂ ಓದಿ: BBK11: ಯಾರು ಯಾರನ್ನ ಮನೆಗೆ ಕಳಿಸುತ್ತಾರೆ.. ಬಿಗ್​ಬಾಸ್​ ಮನೆಯಲ್ಲಿ ಮಾರಿಹಬ್ಬ ಶುರು!

publive-image

ಒಂದು ಸಣ್ಣ ಹಾರ್ನ್

ರೈಲಿನ ಲೋಕೋ ಪೈಲಟ್ ಒಂದು ಬಾರಿ ಸಣ್ಣ ಹಾರ್ನ್​​ ಬಾರಿಸಿದಾಗ ರೈಲನ್ನು ತೊಳೆಯಲು, ಸ್ವಚ್ಛಗೊಳಿಸಲು ತೆಗೆದುಕೊಂಡು ಹೋಗುತ್ತಿದ್ದಾನೆ ಅಂತ ಅರ್ಥ.

ಎರಡು ಶಾರ್ಟ್​ ಹಾರ್ನ್​

ರೈಲು ಎರಡು ಬಾರಿ ಶಾರ್ಟ್​ ಹಾರ್ನ್​ ಬಾರಿಸಿದಾಗ ರೈಲು ಪ್ರಾರಂಭಿಸಲು ರೈಲ್ವೆ ಸಿಗ್ನಲ್ ನೀಡುವಂತೆ ಸಿಗ್ನಲ್ ಕೇಳುತ್ತಾನೆ.

ಮೂರು ಬಾರಿ ಶಾರ್ಟ್​ ಹಾರ್ನ್

ಲೋಕೋ ಪೈಲಟ್​ ಮೂರು ಬಾರಿ ಹಾರ್ನ್ ಒತ್ತಿದರೆ ಅವರು ರೈಲಿನ ಮೇಲೆ ನಿಯಂತ್ರಣವಿಲ್ಲ ಅಂತ ಅರ್ಥ. ರೈಲು ನಿಯಂತ್ರಣ ಕಳೆದುಕೊಂಡಿದೆ. ಹೀಗಾಗಿ ಸಿಗ್ನಲ್ ಫ್ರೀ ನೀಡುವಂತೆ ಮೂರು ಬಾರಿ ಶಾರ್ಟ್​ ಹಾರ್ನ್ ಒತ್ತುತ್ತಾನೆ. ಮೂರು ಬಾರಿ ಶಾರ್ಟ್​ ಹಾರ್ನ್ ನೀಡುವುದು ಅಪರೂಪ.

ನಾಲ್ಕು ಬಾರಿ ಶಾರ್ಟ್​ ಹಾರ್ನ್​

ಲೋಕೋಪೈಲಟ್​ 4 ಬಾರಿ ಶಾರ್ಟ್​​ ಹಾರ್ನ್​​ ಒತ್ತಿದರೆ ರೈಲಿನಲ್ಲಿ ತಾಂತ್ರಿಕ ಸಮಸ್ಯೆ ಇದೆ ಅಂತ ಅರ್ಥ. ತಾಂತ್ರಿಕ ಸಮಸ್ಯೆಯಿಂದ ರೈಲು ಮುಂದೆ ಹೋಗುವುದಿಲ್ಲ ಎಂಬ ಸಂಕೇತ ನೀಡುತ್ತಾರೆ.

ಒಂದು ಲಾಂಗ್ ಹಾರ್ನ್​​ ಮತ್ತು ಒಂದು ಚಿಕ್ಕ ಹಾರ್ನ್​

ರೈಲು ಚಾಲಕ ಒಂದು ಲಾಂಗ್ ಹಾರ್ನ್ ಮತ್ತು ಒಂದು ಚಿಕ್ಕದಾದ ಹಾರ್ನ್​ ಬಾರಿಸಿದಾಗ ಇಂಜಿನ್ ಪ್ರಾರಂಭಿಸುವ ಮೊದಲು ಬ್ರೇಕ್​ ಪೈಪ್ ಸಿಸ್ಟಮ್ ಹೊಂದಿಸಲು ಗಾರ್ಡ್​ಗೆ ಸಂಕೇತ ನೀಡುತ್ತಿದ್ದಾರೆ ಅಂತ ಅರ್ಥ.

ಎರಡು ಉದ್ದದ ಹಾರ್ನ್​ ಮತ್ತು ಎರಡು ಸಣ್ಣ ಹಾರ್ನ್​

ಲೋಕೋ ಪೈಲಟ್ ಎರಡು ಬಾರಿ ದೀರ್ಘ ಮತ್ತು ಎರಡು ಬಾರಿ ಸಣ್ಣ ಹಾರ್ನ್​ ಬಾರಿಸಿದ್ರೆ ಇಂಜಿನ್ ನಿಯಂತ್ರಿಸಲು ಸಿಬ್ಬಂದಿಗೆ ಸಂಕೇತ ನೀಡುತ್ತಿದ್ದಾನೆ ಅಂತ ಅರ್ಥ.

ನಿರಂತರ ಹಾರ್ನ್​

ಲೋಕೋ ಪೈಲಟ್​ ನಿರಂತರವಾಗಿ ಹಾರ್ನ್ ಬಾರಿಸಿದಾಗ ರೈಲು ಹಲವು ನಿಲ್ದಾಣಗಳಲ್ಲಿ ತಡೆರಹಿತವಾಗಿ ಸಾಗುತ್ತಿದೆ ಅಂತ ಪ್ರಯಾಣಿಕರನ್ನು ಎಚ್ಚರಿಸಲು ನಿರಂತರ ಹಾರ್ನ್ ಬಾರಿಸುತ್ತಾರೆ.

ಅಲ್ಪ ವಿರಾಮದಲ್ಲಿ ಎರಡು ಬಾರಿ ಹಾರ್ನ್

ರೈಲು ಚಾಲಕ ಎರಡು ಬಾರಿ ವಿರಾಮ ನಡುವೆ ಎರಡು ಬಾರಿ ಹಾರ್ನ್ ಬಾರಿಸಿದ್ರೆ ರೈಲು ಕ್ರಾಸಿಂಗ್ ಮೂಲಕ ಚಲಿಸುತ್ತಿದೆ ಎಂದು ಸಾರ್ವಜನಿಕರನ್ನು(ದಾರಿಹೋಕರನ್ನು) ಎಚ್ಚರಿಸಲು ಈ ಹಾರ್ನ್ ಬಳಸಲಾಗುತ್ತದೆ.

ಎರಡು ಬಾರಿ ದೀರ್ಘ ಮತ್ತು ಎರಡು ಬಾರಿ ಶಾರ್ಟ್​ ಹಾರ್ನ್​

ಲೋಕೋ ಪೈಲಟ್​ ಎರಡು ಬಾರಿ ದೀರ್ಘ ಮತ್ತು ಎರಡು ಬಾರಿ ಶಾರ್ಟ್​ ಆಗಿ ಹಾರ್ನ್ ಬಾರಿಸಿದರೆ ರೈಲು ಹಳಿಗಳನ್ನು ಬದಲಾಯಿಸುತ್ತಿದೆ ಎಂಬ ಸಂಕೇತ ಸೂಚಿಸುತ್ತದೆ.

ಎರಡು ಚಿಕ್ಕ ಮತ್ತು ಒಂದು ದೀರ್ಘವಾದ ಹಾರ್ನ್​

ಲೋಕೋ ಪೈಲಟ್ ಎರಡು ಬಾರಿ ಶಾರ್ಟ್ ಆಗಿ ಮತ್ತು ಒಂದು ಬಾರಿ ದೀರ್ಘವಾಗಿ ಹಾರ್ನ್ ಹಾರಿಸಿದರೆ ರೈಲು ಪ್ರಯಾಣಿಕರು ಯಾರೋ ಚೈನ್ ಎಳೆದಿದ್ದಾರೆ ಅಥವಾ ಸಿಬ್ಬಂದಿ ವಾಕ್ಯೂಮ್ ಬ್ರೇಕ್ ಎಳೆದಿದ್ದಾರೆ ಅಂತ ಅರ್ಥ

ಆರು ಬಾರಿ ಶಾರ್ಟ್​​ ಹಾರ್ನ್​

ಲೋಕೋ ಪೈಲಟ್ ಒಂದು ವೇಳೆ 6 ಬಾರಿ ಶಾರ್ಟ್​​ ಹಾರ್ನ್ ಮಾಡಿದರೆ ಅದು ರೈಲು ಅಪಾಯಕಾರಿ ಸ್ಥಿತಿಯಲ್ಲಿದೆ. ಅಥವಾ ರೈಲು ಅಪಾಯಕ್ಕೆ ಸಿಲುಕಿದೆ ಅಂತ ಅರ್ಥ

ವಿಶೇಷ ವರದಿ - ವಿಶ್ವನಾಥ್ ಜಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment