ಕಮಲಾ ಹ್ಯಾರಿಸ್ ಒಬ್ಬಳು ಚೈಲ್ಡ್ಲೆಸ್ ಕ್ಯಾಟ್ ಲೇಡಿ ಎಂದ ಲ್ಯಾನ್ಸ್
ವ್ಯಾನ್ಸ್ ಎಂದೋ ಆಡಿದ ಮಾತು ಇಂದು ಸದ್ದು ಮಾಡುತ್ತಿರುವುದೇಕೆ ?
ಏನಿದರ ಅರ್ಥ..? ಅಮೆರಿಕಾದಲ್ಲಿ ಯಾರಿಗೆ ಈ ಮಾತನ್ನು ಹೇಳುತ್ತಾರೆ?
ವಾಷಿಂಗ್ಟನ್: ಅಮೆರಿಕಾದಲ್ಲಿ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣಾ ಕಣ ರಂಗೇರಿದೆ. ದಿನಕಳೆದಂತೆ ಕಮಲಾ ಹ್ಯಾರಿಸ್, ಡೋನಾಲ್ಡ್ ಟ್ರಂಪ್ ಮಧ್ಯೆ ಪೈಪೋಟಿ ಜೋರಾಗುತ್ತಿದೆ. ಯಾರ ಬಲ ಎಷ್ಟು ಅನ್ನೋ ಶಕ್ತಿ ಪ್ರದರ್ಶನದ ಮಧ್ಯೆ ಒಂದು ಮಾತು ಇಡೀ ಅಮೆರಿಕಾ ರಾಜಕೀಯದಲ್ಲಿ ಸಂಚಲನ ಸೃಷ್ಟಿಸುತ್ತಿದೆ.
ಇದನ್ನೂ ಓದಿ: ಟ್ರಂಪ್ಗೆ ಟಕ್ಕರ್ ಕೊಡ್ತಾರಾ ಕಮಲಾ ಹ್ಯಾರಿಸ್.. ಬೈಡನ್ ಜಾಗಕ್ಕೆ ಬಂದ ಭಾರತ ಮೂಲದ ದಿಟ್ಟ ನಾರಿ; ಇವ್ರ ಹಿನ್ನೆಲೆ ಏನು?
ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿರುವ ಜೆ ಡಿ ವ್ಯಾನ್ಸ್ ಈ ಹಿಂದೆ ಅಮೆರಿಕಾದ ಹಾಲಿ ಉಪಾಧ್ಯಕ್ಷೆಯಾಗಿರುವ ಕಮಲಾ ಹ್ಯಾರಿಸ್ ಬಗ್ಗೆ ಒಂದು ಮಾತನ್ನು ಆಡಿದ್ದರು. 2021ರಲ್ಲಿ ಆಡಿದ ವ್ಯಾನ್ಸ್ನ ಆ ಮಾತು ಇಂದು ಮತ್ತೆ ಮುನ್ನೆಲೆಗೆ ಬಂದಿದೆ. ನೀವು ಅವರು ಈ ಹಿಂದೆ ವ್ಯಾನ್ಸ್ ನ ಆ ಹೇಳಿಕೆಯನ್ನು ಕೇಳಿದ್ದಿರೋ ಇಲ್ವೋ. ಆದ್ರೆ ಈಗ ಅದು ಮತ್ತೆ ಟ್ರೆಂಡಿಂಗ್ನಲ್ಲಿ ಬಂದಿದೆ. ಜೆ.ಡಿ ವ್ಯಾನ್ಸ್ ಒಂದು ಸಂದರ್ಶನದಲ್ಲಿ ಕಮಲಾ ಹ್ಯಾರಿಸ್ ಬಗ್ಗೆ ಹೇಳಿದ್ದೇನು? ಅಸಲಿಗೆ ಅವರು ಬಳಸಿರುವ ಆ ಪದದ ಅರ್ಥವೇನು ಅನ್ನೋ ಕುತೂಹಲ ಸದ್ಯ ಈಗ ಜನರಲ್ಲಿ ಹೆಚ್ಚು ಕಂಡು ಬರುತ್ತಿದೆ.
ಇದನ್ನೂ ಓದಿ: ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ಯಾವಾಗ ಬರುತ್ತಾರೆ..? ಅಪ್ಡೇಟ್ ಕೊಟ್ಟ NASA
‘ಮಕ್ಕಳೊಲ್ಲದ ಬೆಕ್ಕಿನಂತ ಮಹಿಳೆ ಹ್ಯಾರಿಸ್‘: ಹ್ಯಾರಿಸ್ಗೆ ಹೀಗಂದಿದ್ದೇಕೆ ವ್ಯಾನ್ಸ್?
ಸಂದರ್ಶನವೊಂದರಲ್ಲಿ ಜೆ.ಡಿ ವ್ಯಾನ್ಸ್ ಈ ಹಿಂದೆ ಮಾತನಾಡುವಾಗ ಕಮಲಾ ಹ್ಯಾರಿಸ್ ಚೆಲ್ಡ್ಲೆಸ್ ಕ್ಯಾಟ್ ಲೇಡಿ ಎಂದು ದೂರಿದ್ದರು. ನಾವು ಈ ದೇಶವನ್ನು ಸದ್ಯ ಮಕ್ಕಳಿಲ್ಲದ ಬೆಕ್ಕಿನಂತ ಮಹಿಳೆಯರ ಗುಂಪಿನೊಂದಿಗೆ ನಡೆಸುತ್ತಿದ್ದೇವೆ. ಈ ರೀತಿ ಬದುಕನ್ನ ಆಯ್ಕೆ ಮಾಡಿಕೊಳ್ಳುವ ಮಹಿಳೆಯರ ಬದುಕು ಶೋಚನೀಯ ಮಾಡಿಕೊಳ್ಳುತ್ತಾರೆ. ಮುಂದೆ ದೇಶದ ಸ್ಥಿತಿಯನ್ನು ಶೋಚನೀಯ ಸ್ಥಿತಿಗೆ ಒಯ್ಯುತ್ತಾರೆ ಎಂದು ಲ್ಯಾನ್ಸ್ ಸಂದರ್ಶನದಲ್ಲಿ ಹೇಳಿದ್ದರು. ಇದು ದೊಡ್ಡ ಚರ್ಚೆಗೆ ಕಾರಣವಾಗುತ್ತಿದೆ ಹಾಗಾದ್ರೆ ಈ ‘ಚೈಲ್ಡ್ಲೆಸ್ ಕ್ಯಾಟ್ ಲೇಡಿ‘ ಅಂದ್ರೆ ಏನು. ಈಗ ಅದು ಚರ್ಚೆಯ ಮುನ್ನೆಲೆಗೆ ಬರ್ತಿರುವುದು ಏಕೆ..?
ಇದನ್ನೂ ಓದಿ: ಅಯ್ಯೋ ಮಿಸ್ಟರ್ ಬೀನ್ಗೆ ಏನಾಯ್ತು..? ಆತಂಕ ಸೃಷ್ಟಿಸಿದ ನಗು ಬುಗ್ಗೆ.. ಇಲ್ಲೂ ಒಂದು ಸಮಸ್ಯೆ ಇದೆ!
ಚೈಲ್ಡ್ಲೆಸ್ ಕ್ಯಾಟ್ ಲೇಡಿಯ ಅರ್ಥವೇನು..?
ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಯ ಕಾವು ಜೋರಾಗಿದೆ. ಆರೋಪ ಪ್ರತ್ಯಾರೋಪಗಳು ಉಭಯ ಪಕ್ಷದ ನಾಯಕರಿಂದ ಭರ್ಜರಿಯಾಗಿ ಕೇಳಿ ಬರುತ್ತಿವೆ. ಇದೇ ಸಮಯದಲ್ಲಿಯೇ 2021ರಲ್ಲಿ ವ್ಯಾನ್ಸ್ ಮಾತು ಕೂಡ ಮುನ್ನೆಲೆಗೆ ಬಂದಿದೆ. ಏನಿದು ಚೈಲ್ಡ್ಲೆಸ್ ಕ್ಯಾಟ್ ಲೇಡಿ ಅಂತ ತಿಳಿದುಕೊಳ್ಳಲು ಜನರು ಗೂಗಲ್ನ್ನು ಜಾಲಾಡುತ್ತಿದ್ದಾರೆ. ಅದರಿಂದ ಕಂಡು ಬಂದಿದ್ದು ಕೆಲವು ಸತ್ಯಗಳು. ಸದ್ಯ, ಕಮಲಾ ಹ್ಯಾರಿಸ್ ಮತ್ತು ಅವರ ಪತಿ ಮಲ ಮಕ್ಕಳನ್ನು ಹೊಂದಿದ್ದಾರೆ. ತಮ್ಮದೇ ಆದ ಸ್ವಂತ ಮಕ್ಕಳನ್ನು ಮಾಡಿಕೊಂಡಿಲ್ಲ. ಹೀಗಾಗಿ ಮಕ್ಕಳನ್ನು ಮಾಡಿಕೊಳ್ಳದಿರಲು ನಿರ್ಧರಿಸುವ ಹೆಣ್ಣು ಮಕ್ಕಳನ್ನು ಅಮೆರಿಕಾದಲ್ಲಿ ಚೈಲ್ಡ್ಲೆಸ್ ಕ್ಯಾಟ್ ಲೇಡಿ ಅಂದ್ರೆ ಮಕ್ಕಳೊಲ್ಲದ ಬೆಕ್ಕಿನಂತ ಹೆಣ್ಣು ಅಂತ ಹೀಗಳೆಯುತ್ತಾರೆ. ನಮ್ಮ ಕಡೆ ಬಂಜೆ ಅನ್ನೋ ತರದಲ್ಲಿಯೇ ಅಲ್ಲಿ ಈ ರೀತಿಯ ಮಾತುಗಳು ಚಾಲ್ತಿಯಲ್ಲಿವೆ. ಇಲ್ಲಿ ಮಕ್ಕಳಲ್ಲಿದವರಿಗೆ ಆ ರೀತಿಯಾಗಿ ಹೆಸರಿಟ್ಟರೆ ಅಲ್ಲಿ ಮಕ್ಕಳನ್ನು ಮಾಡಿಕೊಳ್ಳದಿರಲು ನಿರ್ಧರಿಸುವ ಹೆಣ್ಣು ಮಕ್ಕಳಿಗೆ ಚೈಲ್ಡ್ಲೆಸ್ ಕ್ಯಾಟ್ ಲೇಡಿ ಎಂದು ಕರೆಯುತ್ತಾರೆ.
ಅಮೆರಿಕದಲ್ಲಿ ಮಕ್ಕಳನ್ನು ಹೊಂದದ ಮಹಿಳೆಯರು ಅತಿ ಹೆಚ್ಚು ಬೆಕ್ಕುಗಳನ್ನು ಮನೆಯಲ್ಲಿ ಸಾಕುತ್ತಾರೆ. ಹೀಗಾಗಿ ಇಂತಹವರನ್ನು ಚೈಲ್ಡ್ಲೆಸ್ ಕ್ಯಾಟ್ ಲೇಡಿ ಎಂದು ಕರೆಯಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ